Nigeria Horror: ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಇಂಧನ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 70 ಮಂದಿ ಮೃತಪಟ್ಟಿದ್ದಾರೆ. ಜನರೇಟರ್ ಬಳಸಿ ಒಂದು ಟ್ಯಾಂಕರ್‌ನಿಂದ ಮತ್ತೊಂದು ಟ್ರಕ್‌ಗೆ ಗ್ಯಾಸೋಲಿನ್ ಅನ್ನು ವರ್ಗಾಯಿಸಲು ಪ್ರಯತ್ನಿಸಿದ ನಂತರ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
ಅಬುಜಾ: ಉತ್ತರ-ಮಧ್ಯ ನೈಜೀರಿಯಾದಲ್ಲಿ ಇಂಧನ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 70 ಜನರು ಮೃತಪಟ್ಟಿದ್ದಾರೆ (Nigeria Horror) ಎಂದು ತಿಳಿದು ಬಂದಿದೆ.ಶನಿವಾರ ಮುಂಜಾನೆ ನೈಜರ್ ರಾಜ್ಯದ ಸುಲೇಜಾ ಪ್ರದೇಶದ ಬಳಿ ವ್ಯಕ್ತಿಗಳು ಜನರೇಟರ್ ಬಳಸಿ ಒಂದು ಟ್ಯಾಂಕರ್‌ನಿಂದ ಮತ್ತೊಂದು ಟ್ರಕ್‌ಗೆ ಗ್ಯಾಸೋಲಿನ್ ಅನ್ನು ವರ್ಗಾಯಿಸಲು ಪ್ರಯತ್ನಿಸಿದ ನಂತರ ಸ್ಫೋಟ ಸಂಭವಿಸಿದೆ.
ಈ ಬಗ್ಗೆ ಗವರ್ನರ್ ಮೊಹಮ್ಮದ್ ಬಾಗೊ ಹೇಳಿಕೆ ನೀಡಿದ್ದು, ರಾಜ್ಯದ ಡಿಕ್ಕೊ ಪ್ರದೇಶದ ಹಲವಾರು ನಿವಾಸಿಗಳು ಗ್ಯಾಸೋಲಿನ್ ಟ್ಯಾಂಕರ್‌ನಿಂದ ಭಾರಿ ಸ್ಫೋಟದಿಂದ ಗಾಯಗೊಂಡಿದ್ದಾರೆ. ಘಟನೆಯಲ್ಲಿ 70 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
77 Person confirmed deåd, 25 others Injured as Fuel Tanker Explodes earlier today at Dikko Junction in Niger state😢💔 pic.twitter.com/J4qUCziPkK
— CHUKS 🍥 (@ChuksEricE) January 18, 2025
ಬೆಂಕಿ ನಂದಿಸಿದ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತದ ಮಾಹಿತಿ ಸಿಗುತ್ತಲೇ ಪೊಲೀಸರು ಹಾಗೂ ರಕ್ಷಣಾ ತಂಡ ಸ್ಥಳಕ್ಕಾಗಮಿಸಿದೆ. ಅಪಘಾತಕ್ಕೆ ಕಾರಣವಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ : Chikkaballapur News: ಸಿಎನ್‌ಜಿ ಗ್ಯಾಸ್ ಸಿಲಿಂಡರ್ ತುಂಬಿದ ಕ್ಯಾಂಟರ್ ಮತ್ತು ಗ್ರಾನೈಟ್ ತುಂಬಿದ್ದ ಲಾರಿ ನಡುವೆ ಭೀಕರ ಅಪಘಾತ
ಸರಕು ಸಾಗಣೆಗೆ ಸಮರ್ಥವಾದ ರೈಲ್ವೇ ವ್ಯವಸ್ಥೆಯ ಕೊರತೆಯಿಂದಾಗಿ, ಆಫ್ರಿಕಾದ ಅತ್ಯಂತ ಜನನಿಬಿಡ ರಾಷ್ಟ್ರವಾದ ನೈಜೀರಿಯಾದ ಪ್ರಮುಖ ರಸ್ತೆಗಳಲ್ಲಿ ಮಾರಣಾಂತಿಕ ಟ್ರಕ್ ಅಪಘಾತಗಳು ಆಗಾಗ್ಗೆ ಸಂಭವಿಸುತ್ತವೆ. ಕಳೆದ ಸಪ್ಟೆಂಬರ್‌ನಲ್ಲಿ ನೈಜರ್‌ನ ಜನನಿಬಿಡ ಹೆದ್ದಾರಿಯಲ್ಲಿ ಪೆಟ್ರೋಲ್ ತುಂಬಿದ ಟ್ಯಾಂಕರ್ ಸ್ಫೋಟಗೊಂಡಿತ್ತು. ಇದರಲ್ಲಿ ಕನಿಷ್ಠ 48 ಜನರು ಮೃತಪಟ್ಟಿದ್ದರು.