ʻಡ್ರೆಸ್ಸಿಂಗ್ ರೂಂ ವಿಷಯಗಳನ್ನು ಲೀಕ್ ಮಾಡಿದ್ದರುʼ:ಸರ್ಫರಾಝ್ ಖಾನ್ ವಿರುದ್ಧ ಗಂಭೀರ್ ಆರೋಪ!
IND vs AUS: ಭಾರತದಲ್ಲಿ ನಡೆದಿದ್ದ ಬಿಸಿಸಿಐ ರಿವ್ಯೂವ್ ಮೀಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ ವಿರುದ್ಧ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಆರೋಪ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಡ್ರೆಸ್ಸಿಂಗ್ ಕೊಠಡಿಯ ಸಂಗತಿಗಳನ್ನು ಸರ್ಫರಾಝ್ ಲೀಕ್ ಮಾಡಿದ್ದಾರೆಂಬುದು ಕೋಚ್ ಆರೋಪ.
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಂನ ಸಂಭಾಷಣೆಯನ್ನು ಯುವ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ ಸೋರಿಕೆ ಮಾಡಿದ್ದಾರೆಂದು ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಆರೋಪ ಮಾಡಿದ್ದಾರೆಂದು ವರದಿಯಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನವನ್ನು ತೋರಿತ್ತು. ಅದರಲ್ಲಿಯೂ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಇದರಲ್ಲಿ ಕೆಲವೊಂದು ಸಂಗತಿಗಳಿಂದ ವಿವಾದ ಉಂಟಾಗಿತ್ತು. ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ್ದರು. ಇದಾದ ಬಳಿಕ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ಕೊಠಡಿಯ ವಾತಾವರಣ ಉತ್ತಮವಾಗಿಲ್ಲ ಎಂಬ ಬಗ್ಗೆಯೂ ವರದಿಯಾಗಿತ್ತು.
Karun Nairಗೆ ಅವಕಾಶ ಏಕೆ ನೀಡಿಲ್ಲ?: ಬಿಸಿಸಿಐ ವಿರುದ್ಧ ಹರ್ಭಜನ್ ಸಿಂಗ್ ಪ್ರಶ್ನೆ!
ಐದನೇ ಹಾಗೂ ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದರು. ಭಾರತ ತಂಡದ ಸೋಲಿನ ಕಾರಣ ಆಟಗಾರರ ವಿರುದ್ಧ ಗಂಭೀರ್ ಕಿಡಿಕಾರಿದ್ದಾರೆಂದು ಹಲವು ವರದಿಗಳು ತಿಳಿಸಿದ್ದವು.
ತಂಡದ ನಿಯಮಗಳನ್ನು ಅನುಸರಿಸಿ, ಇಲ್ಲವಾದಲ್ಲಿ ತಂಡದಲ್ಲಿ ಬೆಂಚ್ ಕಾಯಿಸಿ ಎಂದು ಅವರು ಆಟಗಾರರಿಗೆ ಸೂಚನೆ ನೀಡಿದ್ದರು. ಅಲ್ಲದೆ ಮೆಲ್ಬರ್ನ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಬೇಜವಾಬ್ದಾರಿಯುತ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದ್ದ ರಿಷಭ್ ಪಂತ್ ಅವರ ವಿರುದ್ಧ ಕೋಚ್ ಕಿಡಿ ಕಾರಿದ್ದರು ಎಂದು ವರದಿಯಾಗಿತ್ತು. ಡ್ರೆಸ್ಸಿಂಗ್ ಕೊಠಡಿಯ ವಿಷಯಗಳು ವೈರಲ್ ಆದ ಬಳಿಕ ಆಸ್ಟ್ರೇಲಿಯಾದ ಮಾಜಿ ಆಟಗಾರರು ಪ್ರವಾಸಿ ತಂಡವನ್ನು ಅಪಹಾಸ್ಯವನ್ನು ಮಾಡಿದ್ದರು. ಇದೇ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಗೌತಮ್ ಗಂಭೀರ್‌ಗೆ ಕೇಳಲಾಗಿತ್ತು. ಇದಕ್ಕೆ ಗಂಭೀರ್ ನೇರವಾಗಿ ಉತ್ತರವನ್ನು ನೀಡದೆ, ಈ ಎಲ್ಲಾ ಸಂಭಾಷಣೆಗಳು ಮುಚ್ಚಿದ ಬಾಗಿಲುಗಳಲ್ಲಿ ನಡೆಯುತ್ತವೆ ಎಂದಿದ್ದರು.
Champions Trophy ಟೂರ್ನಿಯ ಬಳಿಕ ಗೌತಮ್ ಗಂಭೀರ್ ಭವಿಷ್ಯ ನಿರ್ಧಾರ!
ಸರ್ಫರಾಝ್ ವಿರುದ್ದ ಗಂಭೀರ್ ಆರೋಪ
ಭಾರತ ತಂಡದ ಡ್ರೆಸ್ಸಿಂಗ್ ಕೊಠಾಡಿಯಲ್ಲಿನ ಸಂಭಾಷಣೆಯನ್ನು ಮಾಧ್ಯಮಗಳ ಬಳಿ ಸರ್ಫರಾಝ್ ಖಾನ್ ಸೋರಿಕೆ ಮಾಡಿದ್ದಾರೆಂದು ಗೌತಮ್ ಗಂಭೀರ್ ಆರೋಪ ಮಾಡಿದ್ದಾರೆಂದು ನ್ಯೂಸ್ 24 ವರದಿ ಬಹಿರಂಗಪಡಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸರ್ಫರಾಝ್ ಖಾನ್ ಅವರಿಗೆ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ.
ಬಿಸಿಸಿಐ ಮೀಟಿಂಗ್‌ನಲ್ಲಿ ಸರ್ಫರಾಝ್ ಬಗ್ಗೆ ಮಾತು
ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿನ ಪ್ರದರ್ಶನದ ಬಗ್ಗೆ ಭಾರತದಲ್ಲಿ ನಡೆದಿದ್ದ ಬಿಸಿಸಿಐನ ರಿವ್ಯೂವ್ ಮೀಟಿಂಗ್‌ನಲ್ಲಿ ಸರ್ಫರಾಜ್ ಖಾನ್ ಅವರ ಹೆಸರನ್ನು ಗೌತಮ್ ಗಂಭೀರ್ ಪ್ರಸ್ತಾಪಿಸಿದ್ದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಕೂಡ ಉಪಸ್ಥಿತರಿದ್ದರು.