Model Winter Fashion 2025: ಮಾಡೆಲ್ ಶಾರ್ವರಿಯ ಆಕರ್ಷಕ ವಿಂಟರ್ ಫ್ಯಾಷನ್
Model Winter Fashion 2025: ಚಳಿಗಾಲದ ಸೀಸನ್‌ನಲ್ಲಿ ಆಕರ್ಷಕವಾಗಿ ಕಾಣಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದಕ್ಕೆ ಸೂಕ್ತವಾಗಿ ಔಟ್‌ಫಿಟ್ ಸೆಲೆಕ್ಷನ್ ಮಾಡಬೇಕು ಎನ್ನುವ ಮಾಡೆಲ್ ಶಾರ್ವರಿ, ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಬಗ್ಗೆ ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ನಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಲ್ಲಿ ಬೆಚ್ಚಗಿಡುವ ಔಟ್‌ಫಿಟ್‌ಗಳಿಗೆ ಮಾನ್ಯತೆ ನೀಡಬೇಕು (Model Winter Fashion 2025) ಅದರಲ್ಲೂ ನೋಡಲು ಆಕರ್ಷಕವಾಗಿ ಕಾಣಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಮಾಡೆಲ್ ಶಾರ್ವರಿ.
ಸದ್ಯ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಶಾರ್ವರಿಯ ಸದ್ಯದ ಪ್ಯಾಷನ್ ಮಾಡೆಲಿಂಗ್. ಹಿರಿಯ ಪತ್ರಕರ್ತೆ ಮಾಲತಿ ಭಟ್ ಅವರ ಮಗಳಾಗಿರುವ ಶಾರ್ವರಿ ಈಗಾಗಲೇ ಒಂದಿಷ್ಟು ರ‍್ಯಾಂಪ್ ಶೋಗಳನ್ನು ಮಾಡಿದ್ದಾರೆ. ಒಂದಿಷ್ಟು ಫ್ಯಾಷನ್ ಶೂಟ್‌ಗಳಲ್ಲೂ ಪಾಲ್ಗೊಂಡಿದ್ದಾರೆ. ಮಾಡೆಲಿಂಗ್ ನನ್ನ ಸದ್ಯದ ಹವ್ಯಾಸಗಳಲ್ಲೊಂದಾಗಿದೆ ಅಷ್ಟೇ! ಎನ್ನುವ ಶಾರ್ವರಿ, ಈ ಸೀಸನ್‌ನಲ್ಲಿ ತಾವು ಪಾಲಿಸುತ್ತಿರುವ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಬಗ್ಗೆ ವಿವರಿಸಿದ್ದಾರೆ.
ನಿಮ್ಮ ವಿಂಟರ್ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್ ಏನು?
ವಿಂಟರ್ ಸೀಸನ್‌ಗೆ ತಕ್ಕಂತೆ ಲೇಯರ್ ಲುಕ್‌ಗೆ ಸೈ ಎನ್ನುತ್ತೇನೆ. ಅದರಲ್ಲಿ ಕಾರ್ಡಿಗಾನ್ಸ್, ಸ್ವೆಟರ್, ಪುಲ್ಒವರ್ಸ್, ಕೋಟ್ ಸೇರಿರುತ್ತವೆ. ಇನ್ನು ಈ ಫ್ಯಾಷನ್‌ಗೆ ತಕ್ಕಂತೆ ಪ್ರತಿ ಸ್ಟೈಲ್ ಸ್ಟೇಟ್‌ಮೆಂಟ್ ಕೂಡ ಬದಲಾಗುತ್ತದೆ.
ವಿಂಟರ್ ಬ್ಯೂಟಿ ಕೇರ್ ಬಗ್ಗೆ ನೀವು ಹೇಳುವುದೇನು?
ಚಳಿಗಾಲದಲ್ಲಿ ಡ್ರೈ ಸ್ಕಿನ್‌ಗೆ ಆರೈಕೆ ಮುಖ್ಯ. ಸೋ, ಮಾಯಿಶ್ಚರೈಸರ್ ಬಳಕೆ ಹೆಚ್ಚಾಗಬೇಕು. ತುಟಿಗೆ ಲಿಪ್‌ಬಾಮ್ ಲೇಪಿಸಬೇಕು. ಸ್ಕಿನ್ ಡ್ಯಾಮೇಜ್ ತಡೆಯಲು ಸನ್‌ಸ್ಕ್ರೀನ್ ಬಳಸಬೇಕು. ಹೈಡ್ರೇಟಿಂಗ್ ಕ್ಲೆನ್ಸರ್ ಬಳಕೆಯಿಂದಾಗಿ ತ್ವಚೆಯ ಫ್ರೆಶ್ ಲುಕ್ ಕಾಪಾಡಬಹುದು.
ವಿಂಟರ್ ಸೀಸನ್‌ನಲ್ಲಿ ಮೇಕಪ್ ಮಾಡುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ?
ಈ ಸೀಸನ್‌ನಲ್ಲಿ ಆದಷ್ಟೂ ಹೆವಿ ಮೇಕಪ್ ಅವಾಯ್ಡ್ ಮಾಡಬೇಕು. ಅಗತ್ಯವಿದ್ದಲ್ಲಿ ಮಾತ್ರ ಮೇಕಪ್ ಮಾಡಬೇಕು. ಡ್ರೈ ಆಗದಂತಹ ಮೇಕಪ್ ಕ್ರೀಮ್‌ಗಳನ್ನು ಬಳಸಬೇಕು. ಟಿಂಟೆಡ್ ಮಾಯಿಶ್ಚರೈಸರನ್ನು ಕೂಡ ಬಳಸಬಹುದು. ಹವಾಮಾನಕ್ಕೆ ತಕ್ಕಂತೆ ಆರೈಕೆಯ ರೀತಿ-ನೀತಿಗಳನ್ನು ಬದಲಿಸಿಕೊಂಡಲ್ಲಿ ಮಾತ್ರ, ಸುಂದರವಾಗಿ ಕಾಣಿಸಬಹುದು.
ಈ ಸುದ್ದಿಯನ್ನೂ ಓದಿ | Republic Day Fashion 2025: ಗಣರಾಜ್ಯೋತ್ಸವದ ಸಂಭ್ರಮಕ್ಕೆ ಬಂತು ತಿರಂಗಾ ದುಪಟ್ಟಾ
ನಿಮ್ಮ ವಿಂಟರ್ ಟಿಪ್ಸ್?
ಸೀಸನ್‌ಗೆ ತಕ್ಕ ಲೇಯರ್ ಲುಕ್‌ಗೆ ಮೊರೆ ಹೋಗಿ. ಆದಷ್ಟೂ ಆರೋಗ್ಯದತ್ತ ಗಮನ ನೀಡಿ. ಹೆಚ್ಚೆಚ್ಚು ನೀರು ಕುಡಿಯಿರಿ. ಹಣ್ಣು-ತರಕಾರಿ ಸೇವನೆ ಕೂಡ ತ್ವಚೆಯ ಸೌಂದರ್ಯ ಕಾಪಾಡಬಲ್ಲದು. ಜಂಕ್ ಫುಡ್‌ನಿಂದ ದೂರವಿರಿ. ಫಿಟ್‌ನೆಸ್‌ಗಾಗಿ ಯೋಗ ಅಥವಾ ವ್ಯಾಯಾಮ ರೂಢಿಸಿಕೊಳ್ಳುವುದು ಉತ್ತಮ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)