ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಅಜೇಯ 97 ರನ್‌ ಗಳಿಸಿ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಶ್ರೇಯಸ್‌ ಅಯ್ಯರ್‌!

Shreyas Iyer completed 6,000 T20 runs: ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಮಂಗಳವಾರ ಗುಜರಾತ್‌ ಟೈಟನ್ಸ್‌ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳನ್ನು ಸಿಡಿಸಿದರು. ಅವರು ಆಡಿದ 42 ಎಸೆತಗಳಲ್ಲಿ 9 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 97 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಪಂಜಾಬ್‌ ಕಿಂಗ್ಸ್‌ 243 ರನ್‌ ಗಳಿಸಲು ನೆರವು ನೀಡಿದರು.

IPL 2025: ಟಿ20 ಕ್ರಿಕೆಟ್‌ನಲ್ಲಿ 6000 ರನ್‌ ಗಳಿಸಿದ ಶ್ರೇಯಸ್‌ ಅಯ್ಯರ್‌!

6000 ರನ್‌ಗಳನ್ನು ಪೂರ್ಣಗೊಳಿಸಿದ ಶ್ರೇಯಸ್‌ ಅಯ್ಯರ್‌.

Profile Ramesh Kote Mar 25, 2025 9:28 PM

ಅಹಮದಾಬಾದ್‌: ಗುಜರಾತ್‌ ಟೈಟನ್ಸ್‌ ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಐದನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಆ ಮೂಲಕ ತಮ್ಮ ಟಿ20 ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅವರು ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇವರ ಬ್ಯಾಟಿಂಗ್‌ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಅಂದ ಹಾಗೆ ತಮ್ಮ ನಾಯಕನ ಸಾಧನೆಯನ್ನು ಪಂಜಾಬ್‌ ಕಿಂಗ್ಸ್ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ. ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ ಅವರು, ಪಂಜಾಬ್‌ ಕಿಂಗ್ಸ್‌ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು.‌

ಮಂಗಳವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಪಂಜಾಬ್‌ ಕಿಂಗ್ಸ್‌ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಪ್ರಭಸಿಮ್ರಾನ್‌ ಕೇವಲ 5 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಪ್ರಿಯಾಂಶ್‌ ಆರ್ಯ 47 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಅವರು ರಶೀದ್‌ ಖಾನ್‌ ಎಸೆತದಲ್ಲಿ ಸಾಯ್‌ ಸುದರ್ಶನ್‌ಗೆ ಕ್ಯಾಚಿತ್ತು. ಕೇವಲ 3 ರನ್‌ ಅಂತರದಲ್ಲಿ ಅರ್ಧಶತಕವನ್ನು ವಂಚಿತರಾದರು.

IPL 2025: ʻಸೋತ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿʼ-ರಿಷಭ್‌ ಪಂತ್‌ಗೆ ಸಂದೇಶ ರವಾನಿಸಿದ ಸುನೀಲ್‌ ಗವಾಸ್ಕರ್‌!

ಶತಕ ವಂಚಿತ ಶ್ರೇಯಸ್‌ ಅಯ್ಯರ್‌

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಶ್ರೇಯಸ್‌ ಅಯ್ಯರ್‌ ಮೊದಲನೇ ಎಸೆತದಿಂದಲೂ ಆಕ್ರಮಣಕಾರಿ ಆಟಕ್ಕೆ ಕೈ ಹಾಕಿದರು. ಬ್ಯಾಟಿಂಗ್‌ ಸ್ನೇಹಿ ಕಂಡೀಷನ್ಸ್‌ ಅನ್ನು ಚೆನ್ನಾಗಿ ಅರಿತುಕೊಂಡ ಅವರು, ಗುಜರಾತ್‌ ಟೈಟನ್ಸ್‌ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು. ಫೋರ್‌ ಹಾಗೂ ಸಿಕ್ಸರ್‌ಗಳ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದರು. 230.95ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಯ್ಯರ್‌, 42 ಎಸೆತಗಳಲ್ಲಿ ಅಜೇಯ 97 ರನ್‌ಗಳನ್ನು ಸಿಡಿಸಿದರು. ಇದರಲ್ಲಿ ಅವರು 5 ಬೌಂಡರಿಗಳು ಹಾಗೂ ಬರೋಬ್ಬರಿ 9 ಸಿಕ್ಸರ್‌ಗಳನ್ನು ಸಿಡಿಸಿದರು. ಆ ಮೂಲಕ ಗುಜರಾತ್‌ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಅಂದ ಹಾಗೆ ಶತಕ ಸಿಡಿಸಲು ಶ್ರೇಯಸ್‌ ಅಯ್ಯರ್‌ಗೆ ಅವಕಾಶವಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಶಶಾಂಕ್‌ ಸಿಂಗ್‌ ತಮ್ಮ ನಾಯಕನಿಗೆ ಸ್ಟ್ರೈಕ್‌ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೇಯಸ್‌ ಕೇವಲ 3 ರನ್‌ ಅಂತರದಲ್ಲಿ ಶತಕವನ್ನು ಕಳೆದುಕೊಂಡರು.



6000 ಟಿ20 ರನ್‌ ಪೂರ್ಣಗೊಳಿಸಿದ ಶ್ರೇಯಸ್‌

ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ತಮ್ಮ ಸ್ಪೋಟಕ ಇನಿಂಗ್ಸ್‌ ಮೂಲಕ ಶ್ರೇಯಸ್‌ ಅಯ್ಯರ್‌ ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳನ್ನು ಪೂರ್ಣಗೊಳಿಸಿದರು. ತಮ್ಮ 224ನೇ ಟಿ20 ಇನಿಂಗ್ಸ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಈ ಸಾಧನೆಯನ್ನು ಮಾಡಿದ್ದಾರೆ. ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 3127 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 51 ಪಂದ್ಯಗಳಿಂದ 1,104 ರನ್‌ಗಳನ್ನು ಗಳಿಸಿದ್ದಾರೆ. ಒಟ್ಟಾರೆ ಟಿ20 ವೃತ್ತಿ ಜೀವನದಲ್ಲಿ ಮುಂಬೈ ಮೂಲದ ಬ್ಯಾಟ್ಸ್‌ಮನ್‌ ಮೂರು ಶತಕಗಳು ಹಾಗೂ 37 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಪಂಜಾಬ್‌ ಕಿಂಗ್ಸ್‌ 243-5

ಇನ್ನು ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಪಂಜಾಬ್‌ ಕಿಂಗ್ಸ್‌ ತಂಡ, ಶ್ರೇಯಸ್‌ ಅಯ್ಯರ್‌ (97*), ಪ್ರಿಯಾಂಶ್‌ ಆರ್ಯ (47) ಹಾಗೂ ಶಶಾಂಕ್‌ ಸಿಂಗ್‌ (44*) ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 243 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತು.