ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Dr Pathanjali Acharya Column: ಪಚನಕ್ರಿಯೆಗೆ ನೆರವಾಗುವ ಹಲಾಸನ

ಮೊದಲು ಕೈಕಾಲುಗಳನ್ನು ಚಾಚಿ ಸರಳರೇಖೆಯಂತೆ ಅಂಗಾತವಾಗಿ ಮಲಗಬೇಕು. ಹೀಗೆ ಮಲಗಿಕೊಂಡಿರು ವಂತೆ ಬೆನ್ನನ್ನು ಮತ್ತು ಕಾಲುಗಳನ್ನು ಮೇಲಕ್ಕೆತ್ತಿ ಚಿತ್ರದಲ್ಲಿ ತೋರಿಸಿರು ವಂತೆ ಹಿಂದಕ್ಕೆ ಬಾಗಿಸಿ. ನಂತರ ಕಾಲಿನ ಹೆಬ್ಬೆರಳುಗಳನ್ನು ನೆಲಕ್ಕೆ ಮುಟ್ಟಿಸಿ. ಎರಡೂ ಕೈಗಳ ಮುಷ್ಟಿಗಳನ್ನು ಸೇರಿಸಿ ಹಿಡಿಯಿರಿ. ಈ ಭಂಗಿಯಲ್ಲಿರುವಾಗ ಕಾಲು ಮತ್ತು ಕಾಲುಗಂಟು ಬಾಗದೆ ನೆಟ್ಟಗಿರಬೇಕು. 30 ಸೆಕೆಂಡು ಅಥವಾ ಒಂದು ನಿಮಿಷ ದ ನಂತರ ಪುನಃ ಮೊದಲಿನ ಸ್ಥಿತಿಗೆ ಬನ್ನಿ. ಆ ಬಳಿಕ ಕಾಲು ಗಳನ್ನು ಪುನಃ ಮೇಲಕ್ಕೆತ್ತಿ ಆಸನವನ್ನು ಆಚರಿಸಿ

ಪಚನಕ್ರಿಯೆಗೆ ನೆರವಾಗುವ ಹಲಾಸನ

ಹಲಾಸನ

Profile Ashok Nayak Mar 1, 2025 7:29 AM

ವಿಶ್ವಯೋಗ

ಡಾ.ಪತಂಜಲಿ ಆಚಾರ್ಯ

‘ಹಲ’ ಎಂದರೆ ನೇಗಿಲು ಎಂದರ್ಥ. ಈ ಆಸನವನ್ನು ಆಚರಿಸುವಾಗ ದೇಹದ ಭಂಗಿಯು ನೇಗಿಲಿನ ಆಕಾರವನ್ನು ತಳೆಯುವುದರಿಂದ ಈ ಆಸನಕ್ಕೆ ಹಲಾಸನ ಎಂಬ ಹೆಸರು ಬಂದಿದೆ.

ಅಭ್ಯಾಸಕ್ರಮ: ಮೊದಲು ಕೈಕಾಲುಗಳನ್ನು ಚಾಚಿ ಸರಳರೇಖೆಯಂತೆ ಅಂಗಾತವಾಗಿ ಮಲಗಬೇಕು. ಹೀಗೆ ಮಲಗಿಕೊಂಡಿರು ವಂತೆ ಬೆನ್ನನ್ನು ಮತ್ತು ಕಾಲುಗಳನ್ನು ಮೇಲಕ್ಕೆತ್ತಿ ಚಿತ್ರದಲ್ಲಿ ತೋರಿಸಿರುವಂತೆ ಹಿಂದಕ್ಕೆ ಬಾಗಿಸಿ. ನಂತರ ಕಾಲಿನ ಹೆಬ್ಬೆರಳುಗಳನ್ನು ನೆಲಕ್ಕೆ ಮುಟ್ಟಿಸಿ. ಎರಡೂ ಕೈಗಳ ಮುಷ್ಟಿಗಳನ್ನು ಸೇರಿಸಿ ಹಿಡಿಯಿರಿ. ಈ ಭಂಗಿಯಲ್ಲಿರುವಾಗ ಕಾಲು ಮತ್ತು ಕಾಲುಗಂಟು ಬಾಗದೆ ನೆಟ್ಟಗಿರಬೇಕು. 30 ಸೆಕೆಂಡು ಅಥವಾ ಒಂದು ನಿಮಿಷ ದ ನಂತರ ಪುನಃ ಮೊದಲಿನ ಸ್ಥಿತಿಗೆ ಬನ್ನಿ. ಆ ಬಳಿಕ ಕಾಲು ಗಳನ್ನು ಪುನಃ ಮೇಲಕ್ಕೆತ್ತಿ ಆಸನವನ್ನು ಆಚರಿಸಿ.

ಪ್ರಯೋಜನಗಳು: ಈ ಆಸನದ ಆಚರಣೆಯಿಂದಾಗಿ ಬೆನ್ನೆಲುಬಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ದೇಹದ ಶಕ್ತಿ, ಸಾಮರ್ಥ್ಯ, ಚೈತನ್ಯ ಹೆಚ್ಚಾಗುತ್ತವೆ. ಪಚನಕ್ರಿಯೆ ಮತ್ತು ಮಲ ವಿಸರ್ಜನೆ ಸಮರ್ಪಕವಾಗಿ ನೆರವೇರುತ್ತವೆ. ಜಠರದಲ್ಲಿರುವ ಕರುಳಿನ ನಾಳದ ಚಟುವಟಿಕೆಯು ಚುರುಕಾಗುತ್ತದೆ. ವಾಯು ತುಂಬಿದ ಕರುಳಿನ ನಿರ್ಮಲೀಕರಣವಾಗಿ ದೇಹ ಮತ್ತು ಮನಸ್ಸು ಗಳಿಗೆ ಉತ್ಸಾಹ, ನೆಮ್ಮದಿ ಸಿಗುತ್ತವೆ.