ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israeli Soldiers: ಗಾಜಾ ಕದನ ವಿರಾಮ;ಹಮಾಸ್‌ನಿಂದ ನಾಲ್ವರು ಇಸ್ರೇಲಿ ಸೈನಿಕರ ಬಿಡುಗಡೆ!

ಹಮಾಸ್‌ ಬಂಡುಕೋರ ಪ್ರಾಬಲ್ಯದ ರಾಷ್ಟ್ರಗಳು ಹಾಗೂ ಇಸ್ರೇಲ್‌ ನಡುವೆ ಕಳೆದ 15 ತಿಂಗಳಿನಿಂದ ನಡೆಯುತ್ತಿದ್ದ ಗಾಜಾ ಯುದ್ಧ ಇದೀಗ ಅಂತ್ಯಗೊಂಡಿದೆ. ಹಮಾಸ್ ಶನಿವಾರ ಕದನ ವಿರಾಮ ಒಪ್ಪಂದದಡಿ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದೆ. ನಾಲ್ವರು ಸೈನಿಕರಾದ ಕರೀನಾ ಅರಿವ್, ಡೇನಿಯೆಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಅವರನ್ನು ಗಾಜಾದಲ್ಲಿ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಬಿಡುಗಡೆಗೊಳಿಸಿದ ಹಮಾಸ್!

Israeli Soldiers

Profile Deekshith Nair Jan 25, 2025 5:03 PM

ಜೆರುಸೆಲೆಂ: ಹಮಾಸ್‌(Hamas) ಬಂಡುಕೋರ ಪ್ರಾಬಲ್ಯದ ರಾಷ್ಟ್ರಗಳು ಮತ್ತು ಇಸ್ರೇಲ್‌ ನಡುವೆ ಕಳೆದ 15 ತಿಂಗಳುಗಳಿಂದ ನಡೆಯುತ್ತಿದ್ದ ಗಾಜಾ(Gaza) ಯುದ್ಧ ಇದೀಗ ಅಂತ್ಯಗೊಂಡಿದೆ. ಹಮಾಸ್ ಇಂದು(ಜ.25) ಕದನ ವಿರಾಮ ಒಪ್ಪಂದದಡಿ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು(Israeli Soldiers) ಬಿಡುಗಡೆ ಮಾಡಿದೆ. ನಾಲ್ವರು ಸೈನಿಕರಾದ ಕರೀನಾ ಅರಿವ್, ಡೇನಿಯೆಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಅವರನ್ನು ಗಾಜಾದಲ್ಲಿ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ದಾಳಿಯ ಸಮಯದಲ್ಲಿ, 250 ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ಅಪಹರಿಸಿತ್ತು. ಪ್ರತೀಕಾರವಾಗಿ, ಇಸ್ರೇಲ್ ಭಾರೀ ಬಾಂಬ್ ದಾಳಿಯನ್ನು ಪ್ರಾರಂಭಿಸಿತ್ತು. ಇದರಿಂದಾಗಿ ಗಾಜಾದಲ್ಲಿ ಕನಿಷ್ಠ 45,000 ಜನರು ದಾರುಣವಾಗಿ ಮೃತಪಟ್ಟಿದ್ದರು.



4 ಇಸ್ರೇಲಿ ಮಹಿಳಾ ಸೈನಿಕರ ಬಿಡುಗಡೆ

ಬಿಡುಗಡೆಗೊಂಡ ಇಸ್ರೇಲಿ ಮಹಿಳಾ ಸೈನಿಕರನ್ನು ಮಿಲಿಟರಿ ಸಮವಸ್ತ್ರದಲ್ಲಿ ಕರೆತರಲಾಯಿತು. ಸೈನಿಕರು ವೇದಿಕೆ ಮೇಲೆ ನಿಂತು ಕೈ ಬೀಸಿದ್ದಾರೆ. ಅವರನ್ನು ರೆಡ್ ಕ್ರಾಸ್ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Gaza Ceasefire : ಇಸ್ರೇಲ್-ಹಮಾಸ್ ಕದನ ವಿರಾಮ ; ಮೂವರು ಒತ್ತೆಯಾಳುಗಳು ತಾಯ್ನಾಡಿಗೆ

ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇದು ಎರಡನೇ ವಿನಿಮಯವಾಗಿದೆ. ಒಪ್ಪಂದದ ಪ್ರಕಾರ, ಟೆಲ್ ಅವಿವ್ ನಿಖರವಾದ ಸಂಖ್ಯೆಯನ್ನು ನಿರ್ದಿಷ್ಟಪಡಿಸದಿದ್ದರೂ ಇಸ್ರೇಲ್ ಈಗ ಪ್ಯಾಲೆಸ್ತೇನಿಯನ್ ಕೈದಿಗಳ ಗುಂಪನ್ನು ಬಿಡುಗಡೆ ಮಾಡುತ್ತದೆ.‌

ಉತ್ತರ ಗಾಜಾಗೆ ಪ್ರವೇಶವಿಲ್ಲ;ಇಸ್ರೇಲ್

ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿರುವ 12 ಜನರಲ್ಲಿ ಬಿಡುಗಡೆಗೆ ಉಳಿದಿರುವ ಅರ್ಬೆಲ್ ಯಹೂದ್ ಅವರನ್ನು ಬಿಡುಗಡೆಗೊಳಿಸದ ಹೊರತು ಪ್ಯಾಲೇಸ್ತಿನಿಯರಿಗೆ ಉತ್ತರ ಗಾಜಾಗೆ ಪ್ರವೇಶವಿಲ್ಲ ಎಂದು ಇಸ್ರೇಲ್‌ ಹೇಳಿದೆ. ಕದನ ವಿರಾಮದ ಒಪ್ಪಂದದಂತೆ ಯಹೂದ್‌ ಅವರನ್ನು ಶನಿವಾರ ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. ಆದರೆ ಈವರೆಗೂ ಅವರ ಬಿಡುಗಡೆ ಆಗಿಲ್ಲ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಆತಂಕ ವ್ಯಕ್ತಪಡಿಸಿದೆ.

ನಾಲ್ವರು ಮಹಿಳಾ ಯೋಧರನ್ನು ಹಮಾಸ್‌ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ನ ವಶದಲ್ಲಿದ್ದರುವ 200 ಪ್ಯಾಲೆಸ್ತೇನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿಯನ್ನು ಹಮಾಸ್ ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.