#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gaza Ceasefire : ಇಸ್ರೇಲ್-ಹಮಾಸ್ ಕದನ ವಿರಾಮ ; ಮೂವರು ಒತ್ತೆಯಾಳುಗಳು ತಾಯ್ನಾಡಿಗೆ

ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್ ನಡುವೆ ಕದನ ವಿರಾಮ ಘೋಷನೆಯಾಗಿದೆ. ಮೊದಲ ಹಂತದ ಒಪ್ಪಂದದ ಪ್ರಕಾರ ಉಭಯ ದೇಶಗಳು ಹಂತ ಹಂತವಾಗಿ ಸೆರೆಯಲ್ಲಿದ್ದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿವೆ. ಇದುವರೆಗೆ ಇಸ್ರೇಲ್‌ನ ಮೂವರು ಹಾಗೂ ಪ್ಯಾಲೆಸ್ತೀನ್‌ನ 90 ಜನರನ್ನು ಬಿಡುಗಡೆ ಮಾಡಲಾಗಿದೆ.

ಹಮಾಸ್‌ ಸೆರೆಯಲ್ಲಿದ್ದ ಮೂವರು ಒತ್ತೆಯಾಳುಗಳು ಬರೋಬ್ಬರಿ 15 ತಿಂಗಳ ಬಳಿಕ ತವರಿಗೆ-ವಿಡಿಯೊ ನೋಡಿ

Israel Hamas

Profile Vishakha Bhat Jan 20, 2025 9:31 AM

ಟೆಲ್‌ ಅವಿವ್‌: ಇಸ್ರೇಲ್‌ ಹಾಗೂ ಹಮಾಸ್‌ (Israel-Hamas ) ನಡುವೆ ಯುದ್ಧ ಶುರುವಾಗಿ ಒಂದು ವರ್ಷಕ್ಕಿಂತಲೂ ಹೆಚ್ಚಾಗಿದೆ. ಆದರೆ ಇದೀಗ ಜಗತ್ತಿನ ದಿಗ್ಗಜ ನಾಯಕರ ನೇತೃತ್ವದಲ್ಲಿ ಕದನ ವಿರಾಮವನ್ನು ಘೋಷಿಸಲಾಗಿದೆ. ಇಸ್ರೇಲ್‌ ಹಾಗೂ ಹಮಾಸ್‌ ಕದನ ವಿರಾಮಕ್ಕೆ (Gaza Ceasefire) ಅಸ್ತು ಎಂದು ಹೇಳಿವೆ. ಉಭಯ ದೇಶಗಳು ಒತ್ತೆಯಾಳಾಗಿರಿಸಿಕೊಂಡಿದ್ದವರನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದವು. ಅದರ ಪ್ರತಿಯಾಗಿ ಸೋಮವಾರ ಹಮಾಸ್‌ ಇಸ್ರೇಲ್‌ನ ಮೂವರು ಮಹಿಳೆಯರನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ಇಸ್ರೇಲ್‌ ಸರ್ಕಾರ 90 ಪ್ಯಾಲೆಸ್ತೀನ್ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿದೆ.



ಮೂರು - ಹಂತದ ಒಪ್ಪಂದದ ಅಡಿಯಲ್ಲಿ ಭಾನುವಾರ ಒತ್ತೆಯಾಳುಗಳ ಬಿಡುಗಡೆ ಆಗಿದೆ. ಆರು ವಾರಗಳ ಶಾಂತಿ ಒಪ್ಪಂದ ಈ ಮೂಲಕ ಜಾರಿಗೆ ಬಂದಿದೆ. ಗಾಜಾದ ಆರೋಗ್ಯ ಅಧಿಕಾರಿಗಳ ಪ್ರಕಾರ, 46,900 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಈ ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಒಪ್ಪಂದದ ಪ್ರಕಾರ, ಹಮಾಸ್ ಪ್ರತಿ ವಾರ ಮೂರರಿಂದ ನಾಲ್ಕು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುತ್ತಾ ಬರುತ್ತದೆ. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ತನ್ನ ಜೈಲಿನಲ್ಲಿರುವ ನೂರಾರು ಪ್ಯಾಲೆಸ್ತೀನ್ ಬಂಧಿತರನ್ನು ಬಿಡುಗಡೆ ಮಾಡುತ್ತದೆ. ಯುದ್ಧ ಕೈದಿಗಳು ಬಿಡುಗಡೆಯಾಗಿ ಮನೆಗೆ ಮರಳಿದ ನಂತರ ಕುಟುಂಬಸ್ಥರಲ್ಲಿ ಹರ್ಷೋದ್ಗಾರ ಮೂಡಿದೆ. ಅವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.



ಇಸ್ರೇಲ್‌ನ ಜನರನ್ನು ಬಿಡುಗಡೆ ಮಾಡುವ ಒಂದು ಗಂಟೆ ಮೊದಲು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಒಪ್ಪಂದದ ಮೊದಲ ಹಂತದ ಅಡಿಯಲ್ಲಿ ಬಿಡುಗಡೆ ಮಾಡುವ ಒತ್ತೆಯಾಳುಗಳ ಪಟ್ಟಿಯನ್ನು ಹಮಾಸ್ ತನ್ನ ಸರ್ಕಾರಕ್ಕೆ ಒದಗಿಸದ ಹೊರತು ಗಾಜಾದಲ್ಲಿ ಕದನ ವಿರಾಮ ಪ್ರಾರಂಭವಾಗುವುದಿಲ್ಲ ಎಂದು ಎಚ್ಚರಿಸಿದ್ದರು.

ಈ ಸುದ್ದಿಯನ್ನೂ ಓದಿ : Israel Hamas: ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧಕ್ಕೆ ಬ್ರೇಕ್‌ ! ಕದನ ವಿರಾಮ ಒಪ್ಪಂದದಲ್ಲಿ ಏನೇನಿದೆ?

ಇನ್ನು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ IDF ವಕ್ತಾರ ಡೇನಿಯಲ್ ಹಗರಿ, ಮೂವರು ಒತ್ತೆಯಾಳುಗಳು ಮತ್ತು ಅವರ ಕುಟುಂಬಗಳು ಬಹಳ ಸಮಯದ ನಂತರ ಮತ್ತೆ ಒಂದಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇಸ್ರೇಲಿ ಪಡೆಗಳು ಗಾಜಾದ ಹೊರವಲಯಕ್ಕೆ ಸ್ಥಳಾಂತರಗೊಂಡಿವೆ. ಹಮಾಸ್ ಒಪ್ಪಂದವನ್ನು ಉಲ್ಲಂಘಿಸಿದರೆ ನಾವು ತಕ್ಕ ಪ್ರತ್ಯುತ್ತರ ನೀಡಲು ಸನ್ನದ್ಧವಾಗಿದ್ದೇವೆ ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.