ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಒಂದೇ ಓವರ್‌ನಲ್ಲಿ 26 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಹರ್ಷಿತ್ ರಾಣಾ!

Harshit Rana creates unwanted record: ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದ ಮೂಲಕ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಹರ್ಷಿತ್ ರಾಣಾ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಒಂದೇ ಓವರ್‌ನಲ್ಲಿ 26 ರನ್ ನೀಡಿದ ಹರ್ಷಿತ್‌ ರಾಣಾ ಅನಗತ್ಯ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಯುವರಾಜ್ ಸಿಂಗ್, ಇಶಾಂತ್ ಶರ್ಮಾ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡಯಾಗಿದ್ದಾರೆ.

ಏಕದಿನ ಪದಾರ್ಪಣೆ ಪಂದ್ಯದಲ್ಲಿಯೇ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಹರ್ಷಿತ್‌ ರಾಣಾ!

Harshit Rana creates unwanted record

Profile Ramesh Kote Feb 6, 2025 6:20 PM

ನಾಗ್ಪುರ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ (IND vs ENG)ಆರಂಭಿಕ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಯುವ ಕ್ರಿಕೆಟಿಗರಾದ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಹರ್ಷಿತ್ ರಾಣಾ (Harshit Rana)ಪದಾರ್ಪಣೆ ಮಾಡಿದ್ದಾರೆ. ಹರ್ಷಿತ್ ರಾಣಾ ಈಗಾಗಲೇ ಟೆಸ್ಟ್ ಕ್ರಿಕೆಟ್‌ ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರೆ, ಯಶಸ್ವಿ ಜೈಸ್ವಾಲ್ ಕೂಡ ಆಡಿದ್ದಾರೆ.

ತಮ್ಮ ಪದಾರ್ಪಣೆ ಪಂದ್ಯದಲ್ಲೇ ಯುವ ವೇಗಿ ಹರ್ಷಿತ್ ರಾಣಾ ಒಂದೇ ಓವರ್‌ನಲ್ಲಿ 26 ರನ್ ನೀಡಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಅಂತಿಮವಾಗಿ ಅವರು ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿ 3 ವಿಕೆಟ್ ಪಡೆದಿದ್ದಾರೆ.

IND vs ENG 1st ODI: ವಿರಾಟ್‌ ಕೊಹ್ಲಿ ಆಡದೆ ಇರಲು ಕಾರಣ ತಿಳಿಸಿದ ರೋಹಿತ್‌ ಶರ್ಮಾ!

ಅನಗತ್ಯ ದಾಖಲೆ ಬರೆದ ಹರ್ಷಿತ್ ರಾಣಾ

ಪಂದ್ಯದ 6ನೇ ಓವರ್ ಬೌಲ್‌ ಮಾಡಿದ ಹರ್ಷಿತ್ ರಾಣಾ, ಇಂಗ್ಲೆಂಡ್‌ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ಎದುರು ಅತ್ಯಂತ ದುಬಾರಿಯಾದರು. ಆ ಓವರ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಾಲ್ಟ್, ಮೂರು ಭರ್ಜರಿ ಸಿಕ್ಸರ್ ಹಾಗೂ ಎರಡು ಮನಮೋಹಕ ಬೌಂಡರಿಗಳನ್ನು ಬಾರಿಸಿದರು. ಆ ಮೂಲಕ ಹರ್ಷಿತ್ ರಾಣಾ ತಮ್ಮ ಒಂದೇ ಓವರ್‌ನಲ್ಲಿ 26 ರನ್ ನೀಡಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ನ ಏಕೈಕ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತದ ಬೌಲರ್‌ಗಳು

* 30 ರನ್- ಯುವರಾಜ್ ಸಿಂಗ್ - 2007- vs ಇಂಗ್ಲೆಂಡ್

* 30 ರನ್- ಇಶಾಂತ್ ಶರ್ಮಾ - 2013- vs ಆಸ್ಟ್ರೇಲಿಯಾ

* 28 ರನ್- ಕೃಣಾಲ್ ಪಾಂಡ್ಯ - 2021- vs ಇಂಗ್ಲೆಂಡ್

* 26 ರನ್- ದಿನೇಶ್ ಮೊಂಗಿಯಾ- 2007- vs ಬಾಂಗ್ಲಾದೇಶ

* 26 ರನ್- ರುದ್ರ ಪ್ರತಾಪ್ ಸಿಂಗ್ - 2008- vs ಬಾಂಗ್ಲಾದೇಶ

* 26 ರನ್- ವಿಆರ್‌ವಿ ಸಿಂಗ್ - 2006- vs ಇಂಗ್ಲೆಂಡ್

* 26 ರನ್- ಹರ್ಷಿತ್ ರಾಣಾ - 2025- vs ಇಂಗ್ಲೆಂಡ್



ಹರ್ಷಿತ್ ರಾಣಾಗೆ ಕೆಕೆಆರ್ ಅಭಿನಂದನೆ

ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹರ್ಷಿತ್ ರಾಣಾಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಅಭಿನಂದನೆ ಸಲ್ಲಿಸಿದೆ. ಹರ್ಷಿತ್ ರಾಣಾ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದಾಗ ಸಂಭ್ರಮಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಮೂರೂ ಸ್ವರೂಪದ ಕ್ರಿಕೆಟ್‌ನ ವಿಕೆಟ್ ಟೇಕರ್ ಎಂದು ಶ್ಲಾಘಿಸಿದೆ.



ನಾಗ್ಪುರ ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 26 ರನ್ ಬಿಟ್ಟುಕೊಟ್ಟು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಹೊರತಾಗಿಯೂ ಸ್ಫೋಟಕ ಆಟಗಾರರಾದ ಬೆನ್ ಡೆಕಟ್, ಹ್ಯಾರಿ ಬ್ರೂಕ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರ ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು 47.4 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಮಾಡಲು ಭಾರತಕ್ಕೆ ನೆರವು ನೀಡಿದ್ದರು.