IND vs ENG 1st ODI: ವಿರಾಟ್ ಕೊಹ್ಲಿ ಆಡದೆ ಇರಲು ಕಾರಣ ತಿಳಿಸಿದ ರೋಹಿತ್ ಶರ್ಮಾ!
Why Virat Kohli not playing 1st ODI: ನಾಗ್ಪುರದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮೊದಲನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಇದಕ್ಕೆ ಕಾರಣವೇನೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.
![Virat Kohli-Rohit Sharma](https://cdn-vishwavani-prod.hindverse.com/media/images/Virat_Kohli-Rohit_Sharma.max-1280x720.jpg)
![Profile](https://vishwavani.news/static/img/user.5c7ca8245eec.png)
ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಮೊದಲನೇ ಏಕದಿನ ಪಂದ್ಯದಲ್ಲಿ (IND vs ENG) ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡದೆ ಹೊರಗುಳಿದಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.
ಟಾಸ್ ವೇಳೆ ಮಾತನಾಡಿದ ರೋಹಿತ್ ಶರ್ಮಾ, ಮೊಣಕಾಲು ಗಾಯದ ಕಾರಣ ಮೊದಲನೇ ಏಕದಿನ ಪಂದ್ಯದ ಆಯ್ಕೆಗೆ ವಿರಾಟ್ ಕೊಹ್ಲಿ ಲಭ್ಯರಾಗಿಲ್ಲ. ಮೊದಲನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಯ ಬಲ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಈ ಕಾರಣದಿಂದ ಅವರು ಆಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
IND vs ENG 1st ODI: ಟೀಮ್ ಇಂಡಿಯಾ ಪರ ಇಬ್ಬರು ಪದಾರ್ಪಣೆ; ಕೊಹ್ಲಿ ಅಲಭ್ಯ
ಏಕದಿನ ಕ್ರಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಪದಾರ್ಪಣೆ
ವಿರಾಟ್ ಕೊಹ್ಲಿ ಮೊದಲನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದದಿಂದ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಲಭಿಸಿತು. ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಲಾಗಿದೆ. ಹಿರಿಯ ವೇಗಿ ಮೊಹಮ್ಮದ್ ಶಮಿ ಅವರ ಜೊತೆಗೆ ಏಕದಿನ ಕ್ರಿಕೆಟ್‌ಗೆ ಹರ್ಷಿತ್ ರಾಣಾ ಪದಾರ್ಪಣೆ ಮಾಡಿದ್ದಾರೆ.
🚨 Team News
— BCCI (@BCCI) February 6, 2025
We have 2⃣ ODI debutants in the Playing XI today - Yashasvi Jaiswal and Harshit Rana 🧢 🧢
A look at our line-up 🔽
Follow The Match ▶️ https://t.co/lWBc7oPRcd#TeamIndia | #INDvENG | @IDFCFIRSTBank pic.twitter.com/EFQQJmUFwh
14000 ರನ್‌ಗಳ ಸನಿಹದಲ್ಲಿ ವಿರಾಟ್ ಕೊಹ್ಲಿ
ರನ್ ಮಷೀನ್ ಖ್ಯಾತಿಯ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 14000 ರನ್‌ಗಳ ಸನಿಹದಲ್ಲಿದ್ದಾರೆ. ಮೊದಲನೇ ಪಂದ್ಯದಿಂದ ಹೊಗುಳಿದಿರುವ ಅವರು ಈ ಮೈಲುಗಲ್ಲು ತಲುಪಲು ಇನ್ನಷ್ಟು ದಿನಗಳ ಕಾಲ ಕಾಯಬೇಕಾದ ಅಗತ್ಯವಿದೆ. ಪಂದ್ಯದ ಆರಂಭಕ್ಕೂ ಮುನ್ನ ಅಂಗಣದಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ, ತಮ್ಮ ಬಲ ಮೊಣಕಾಲಿಗೆ ಸ್ಟ್ರ್ಯಾಪ್ ಹಾಕಿಕೊಂಡಿದ್ದರು. ಹರ್ಷಿತ್ ರಾಣಾ ಹಾಗೂ ಯಶಸ್ವಿ ಜೈಸ್ವಾಲ್ ಚೊಚ್ಚಲ ಒಡಿಐ ಕ್ಯಾಪ್ ಸ್ವೀಕರಿಸುವ ವೇಳೆಯೂ ವಿರಾಟ್ ಕೊಹ್ಲಿ ಉಪಸ್ಥಿತರಿದ್ದರು.
ಪಂದ್ಯದ ಟಾಸ್‌ಗೂ ಮುನ್ನ ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದರು. ಆದರೆ ಬಿಸಿಸಿಐ ಮೆಡಿಕಲ್ ತಂಡ ಹಿರಿಯ ಬ್ಯಾಟ್ಸ್‌ಮನ್ ಅನ್ನು ಮೊದಲನೇ ಏಕದಿನ ಪಂದ್ಯದಲ್ಲಿ ಆಡಿಸಿ ಅಪಾಯವನ್ನು ತೆಗೆದುಕೊಳ್ಳುವುದು ಬೇಡವೆಂಬ ಸಲಹೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮೊದಲನೇ ಏಕದಿನ ಪಂದ್ಯದಿಂದ ಹೊರಗಳಿದಿದ್ದಾರೆ.
IND vs ENG: ಯಾವ ರೀತಿಯ ಪ್ರಶ್ನೆ ಇದು? ಪ್ರತ್ರಕರ್ತನ ವಿರುದ್ಧ ಕಿಡಿಕಾರಿದ ರೋಹಿತ್ ಶರ್ಮಾ!
2022ರ ಬಳಿಕ ಇದೇ ಮೊದಲನೇ ಬಾರಿ ವಿರಾಟ್ ಕೊಹ್ಲಿ ಗಾಯದ ಕಾರಣ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಎರಡು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಗ್ರೋಯಿನ್ ಇಂಜುರಿಯಿಂದ ಪಂದ್ಯದಿಂದ ಹೊರಗುಳಿದಿದ್ದರು.
🚨 Toss Update from Nagpur 🚨
— BCCI (@BCCI) February 6, 2025
England have elected to bat against #TeamIndia in the 1⃣st #INDvENG ODI.
Follow The Match ▶️ https://t.co/lWBc7oPRcd@IDFCFIRSTBank pic.twitter.com/KmvYPhvERw
ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ