ಹೈಕಮಾಂಡ್ ಸಂಸ್ಕೃತಿ ಕಿತ್ತಸೆದು ನವಕರ್ನಾಟಕ ನಿರ್ಮಾಣವೇ ನಮ್ಮ ಗುರಿ: ಮಾರಸಂದ್ರ ಮುನಿಯಪ್ಪ ಆಕೋಶ
ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಇನ್ನೂ ಕೂಡ ನಾಡಿನ ಆಸ್ತಿಯಾದ ರೈತರು, ದಲಿತರು, ಸಾಹಿತಿಗಳು, ಸಾಮಾನ್ಯ ಕನ್ನಡಿಗರು, ಮಹಿಳೆಯರು,ಕಾರ್ಮಿಕರು, ವಿದ್ಯಾರ್ಥಿಗಳು ಯುವ ಜನರು, ಪರಿಸರವಾದಿಗಳು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು ತಮ್ಮ ಹಕ್ಕು ಮತ್ತು ಕನಿಷ್ಠ ಸೌಲತ್ತಿಗಾಗಿ ಬೀದಿಗಿಳಿದು ಹೋರಾಡುತ್ತಲೇ ಬಂದಿದ್ದಾರೆ

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜನಪರ ಸಂಘಟನೆಗಳು ಏರ್ಪಡಿಸಿದ್ದ ನವಕರ್ನಾಟಕ ನಿರ್ಮಾಣ ಆಂದೋಲನ ಜನರ ನಡುವೆ ಜನತಾ ಪ್ರಣಾಳಿಕೆ ಬಹಿರಂಗ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ: 1956ರಿಂದ ಈ ತನಕ ನಮ್ಮನ್ನಾಳಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಹೈ ಕಮಾಂಡ್ ಸಂಸ್ಕೃತಿಗೆ ಜೋತು ಬಿದ್ದು ಈ ದೇಶದ ಬಹುಸಂಖ್ಯಾತರ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ.ಜನತಾ ಪ್ರಣಾಳಿಕೆ ಆದ್ಯತೆಯಾಗಿದ್ದಿದ್ದರೆ ನಾಡಿನ ಬಹುಸಂಖ್ಯಾತರ ಬದುಕು ಹಸನಾಗುವ ಜತೆಗೆ ನೆಲ ಜಲ ಭಾಷೆ ಉದ್ಯೋಗ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಯಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜನಪರ ಸಂಘಟನೆಗಳು ಏರ್ಪಡಿ ಸಿದ್ದ ನವಕರ್ನಾಟಕ ನಿರ್ಮಾಣ ಆಂದೋಲನ ಜನರ ನಡುವೆ ಜನತಾ ಪ್ರಣಾಳಿಕೆ ಬಹಿರಂಗ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ಸಾಲ ಮರುಪಾವತಿಯಾದಲ್ಲಿ ಮಾತ್ರ ಸಹಕಾರಿ ರಂಗ ಬೆಳೆಯಲಿದೆ : ಎಂ.ನರಸಿಂಹಮೂರ್ತಿ
ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಇನ್ನೂ ಕೂಡ ನಾಡಿನ ಆಸ್ತಿಯಾದ ರೈತರು, ದಲಿತರು, ಸಾಹಿತಿಗಳು, ಸಾಮಾನ್ಯ ಕನ್ನಡಿಗರು, ಮಹಿಳೆಯರು,ಕಾರ್ಮಿಕರು, ವಿದ್ಯಾರ್ಥಿಗಳು ಯುವ ಜನರು, ಪರಿಸರವಾದಿಗಳು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು ತಮ್ಮ ಹಕ್ಕು ಮತ್ತು ಕನಿಷ್ಠ ಸೌಲತ್ತಿಗಾಗಿ ಬೀದಿಗಿಳಿದು ಹೋರಾಡುತ್ತಲೇ ಬಂದಿದ್ದಾರೆ. ಇವರ ಬದುಕು ಸುಧಾರಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹುಸಂಖ್ಯಾತರ ಪರವಾದ ಆಯ ವ್ಯಯ ಮಂಡಿಸದೆ, ಬಹುರಾಷ್ಟ್ರೀಯ ಕಂಪನಿಗಳೇ ಮೊದಲಾದ ಕಾರ್ಪೊರೇಟ್ ಸಂಸ್ಕೃತಿಯ ವಾರಸುದಾರರಂತೆ ವರ್ತಿಸುತ್ತಿರುವುದೇ ಇವರೆಲ್ಲರ ದುಸ್ಥಿತಿಗೆ ನೇರ ಕಾರಣವಾಗಿದೆ ಎಂದು ಕಿಡಿ ಕಾರಿದರು.
ನಮ್ಮ ರಾಜ್ಯದ ಹಿತವನ್ನು ಕಡೆಗಣಿಸಿ ಕೇವಲ ತಮ್ಮ ಪಕ್ಷಗಳ ಹೈಕಮಾಂಡ್ ದೊರೆಗಳನ್ನು ಮೆಚ್ಚಿ ಸಲು ಮುಂದಾಗುವ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುವ ರಾಜಕಾರಣಿಗಳಿಂದ ಈನಾಡಿನ ದೇಶದ ಹಿತಾಸಕ್ತಿ ಕಾಪಾಡಲು ಸಾಧ್ಯವಿಲ್ಲ. ರಾಜಪ್ರಭುತ್ವ ಇದ್ದ ಕಾಲದಲ್ಲಿ ಬಲಶಾಲಿ ಸಾಮ್ರಾಟ ನಿಗೆ ದುರ್ಬಲರಾದ ಸಾಮಂತರು ಕಪ್ಪಕಾಣಿಕೆ ಒಪ್ಪಿಸುತ್ತಿದ್ದ ಪರಂಪರೆಯನ್ನು,ಪ್ರಜಾಪ್ರಭುತ್ವ ಕಾಲದಲ್ಲಿಯೂ ಮುಂದುವರೆಸುತ್ತಿದ್ದಾರೆ.ಇವರುಗಳ ಬೇಜವಾಬ್ದಾರಿತನ ಸ್ವಾರ್ಥ ರಾಜಕಾರಣ, ಅಧಿಕಾರ ಲಾಲಸೆ,ಕುಟುಂಬ ರಾಜಕಾರಣದ ಫಲವಾಗಿ ಕರ್ನಾಟಕದ ನೆಲೆ ಜಲಗಳು ಬರಡಾ ಗುತ್ತಿವೆ. ಭಾಷೆಯು ಭೀಕರ ಅಲಕ್ಷ್ಯಕ್ಕೆ ಒಳಗಾಗಿ ತನ್ನ ನೆಲದಲ್ಲೇ ಸೊರಗುತ್ತಿದೆ.
ಅತಿ ಹೆಚ್ಚಿನ ತೆರಿಗೆ ಪಾವತಿಸುವ ರಾಜ್ಯಕ್ಕೆ ನೈಸರ್ಗಿಕ ಅನಾಹುತ ಮತ್ತು ಅಭಿವೃದ್ದಿ ಕಾರ್ಯಗಳಿಗೆ ಅತ್ಯಂತ ಕಡಿಮೆ ಅನುದಾನವನ್ನು ಕೇಂದ್ರ ಸರಕಾರಗಳು ನೀಡುತ್ತಿವೆ. ಇದಕ್ಕೆ ಇತಿಶ್ರೀ ಹಾಡ ಬೇಕಾ ದರೆ ಸುಸ್ಥಿರ ಅಭಿವೃದ್ಧಿ ಕಾಣಬೇಕಾದರೆ ಜನತಾ ಪ್ರಣಾಳಿಕೆಗೆ ಕಾರಣವಾಗುವ ನವ ಕರ್ನಾಟಕ ನಿರ್ಮಾಣದ ಆಶಯವುಳ್ಳ ಜನಪರ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದರು.
ಸಮಿತಿ ಸಂಚಾಲಕ ಮೋಹನ್‌ರಾಜ್ ಮಾತನಾಡಿ ಜಾತಿ, ಧರ್ಮ, ಮದ್ಯ, ಹಣಕ್ಕೆ ದಾಸರಾಗಿ ಮತ ನೀಡುವುದಿಲ್ಲ, ಒಂದೇ ಪಕ್ಷ, ಒಂದೇ ಚಿನ್ಹೆಯನ್ನು ಬೆಂಬಲಿಸುತ್ತೇವೆ. ಜನತೆ ವಾಗ್ದಾನ ನೀಡುವಂತೆ ಮಾಡಿ ನವಕರ್ನಾಟಕ ನಿರ್ಮಾಣ ಪಕ್ಷವನ್ನು ಸ್ಥಾಪಿಸಿ ಅಧಿಕಾರಕ್ಕೆ ತರುತ್ತೇವೆ ಎಂದರು.
ಮೋಹನ್ ರಾಜ್ ಮಾತನಾಡಿ, ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಪಕ್ಷಗಳು ದೆಹಲಿಯಲ್ಲಿ ಕೂತು ಆದೇಶ ಮಾಡುತ್ತಾರೆ.ಜೆಡಿಎಸ್ ಬಿಜೆಪಿ ಜತೆ ಕೈಜೋಡಿಸಲು ಮುಂದಾಗಿದ್ದಾರೆ.ಈಗ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಇದೆ.ಇದನ್ನು ಮನಗಂಡು ನವ ಕರ್ನಾಟಕ ನಿರ್ಮಾಣ ಆಂದೋಲನಕ್ಕೆ ನಾವು ಮುಂದಾಗಿದ್ದೇವೆ. ಪಕ್ಷ ಜನ್ಮ ತಾಳಿದೆ.
ಬಿಜೆಪಿ ಜಾತಿ ಮತ್ತು ಕೋಮುಗಲಭೆ ಮಾಡುತ್ತದೆ. ಕಾಂಗ್ರೆಸ್ ದಲಿತರು ಅಲ್ಪಸಂಖ್ಯಾತರ ತುಷ್ಠೀ ಕರಣದಲ್ಲಿ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ 26 ಸಾವಿರ ಕೋಟಿ ಎಸ್ಸಿ ಎಸ್ಟಿ ಅಭಿವೃದ್ದಿಗೆ ಮೀಸಲಾಗಿದ್ದ ಹಣವನ್ನು ಗ್ಯಾರೆಂಟಿಗೆ ಬಳಸಿಕೊಂಡಿದ್ದು ಸಿದ್ದರಾಮಯ್ಯ ಅವರ ದಲಿತ ವಿರೋಧಿ ಧೋರಣೆಗೆ ಸಾಕ್ಷಿ .ನಾವು ಅಧಿಕಾರಕ್ಕೆ ಬಂದರೆ ಕೇಂದ್ರ ಜಾರಿ ಮಾಡಿರುವ ರೈತವಿರೋಧಿ ಕಾಯ್ದೆ ಗಳನ್ನು ವಾಪಸ್ಸು ಮಾಡುತ್ತೇನೆ ಎಂದ ಸಿದ್ದರಾಮಯ್ಯ ೨ ವರ್ಷವಾದರೂ ಸುಮ್ಮನಿದ್ದಾರೆ. ಅಂಬೇ ಡ್ಕರ್ ಸಂವಿಧಾನ ಇಲ್ಲದಿದ್ದರೆ ದಲಿತರ ಬದುಕು ಮೂರಾಬಟ್ಟೆಯಾಗುತ್ತಿತ್ತು. ರಾಜ್ಯ ವಿಧಾನ ಸಭೆ ಚುನಾವಣೆಗೆ ಇನ್ನೂ ೩ ವರ್ಷ ಸಮಯ ಇದೆ. ರಾಜ್ಯದ ಉದ್ದಗಲಕ್ಕೂ ಎರಡು ತಿಂಗಳ ಪ್ರವಾಸ ಮಾಡಿ ಜನರ ಸಮಸ್ಯೆ ಆಲಿಸುತ್ತಾ ರಾಷ್ಟ್ರೀಯ ಪಕ್ಷಗಳ ಮುಖವಾಡಗಳನ್ನು ಜನರ ಮುಂದಿಡು ತ್ತೇವೆ ಎಂದು ಹೇಳಿದರು.
ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಉತ್ತರ ಭಾರತದಲ್ಲಿ ಜನರ ಕೈಯಲ್ಲಿ ನಾವು ಆಳಿಸಿಕೊಳ್ಳಲು ಮುಂದಾಗಿದ್ದೇವೆ.ನಮ್ಮದೇ ಆದ ಸ್ಥಳೀಯ ಪಕ್ಷದ ಅಗತ್ಯವಿದೆ.ಜನಪರ ಸಂಘಟನೆಗಳ ಅಡಿಯಲ್ಲಿ ಪ್ರಾದೇಶಿಕ ಪಕ್ಷ ಬೇಕಿದೆ ಎಂದರು.
ಮಾಜಿ ಶಾಸಕ ಬಸವರಾಜ ಮಾತನಾಡಿ ಹಿಂದಿ ಭಾಷಿಕರ ಗುಲಾಮಗಿರಿ ತೊಡೆದು,ನಮ್ಮದೇ ಪಕ್ಷ ಕಟ್ಟಿ,ನಮ್ಮ ಕೆಲಸ ನಾವೇ ತೀರ್ಮಾನ ಮಾಡಬೇಕು.ದೆಹಲಿಗುಲಾಮರ ಕೈಗೆ ಅಧಿಕಾರ ಕೊಡದಿ ರೋಣ. ಭ್ರಷ್ಟ ದಲ್ಲಾಳಿಗಳನ್ನು ಕಿತ್ತೊಗೆಯಬೇಕು.ಮೊದಲು ಕರ್ನಾಟಕ ಉದ್ದಾರ ಆಗಲಿ, ನಂತರ ಭಾರತ ಎಂದರು.
ರಾಷ್ಟ್ರೀಯ ಪಕ್ಷಗಳ ಸೊಕ್ಕು ಮುರಿಯಬೇಕು.ಇದಾಗಬೇಕಾದರೆ ನವಕರ್ನಾಟಕ ನಿರ್ಮಾಣ ಆಂದೋಲನ ರಾಜಕೀಯ ಶಕ್ತಿ ಪಡೆಯಬೇಕು. ಇದಕ್ಕೆ ನಿಮ್ಮ ಬೆಂಬಲ ಬೇಕು ಎಂದವರು ಆರ್. ಮುನಿಯಪ್ಪ.
ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಪ್ರಶ್ನೇ ಮಾಡು ವವರನ್ನು ಜೈಲಿಗೆ ಕಳುಹಿಸುವುದು ಸಿದ್ದರಾಮಯ್ಯರ ಕೊಡುಗೆ.ತಹಶೀಲ್ದಾರ್ ನನ್ನ ಕಾರ್ಯ ವೈಖರಿಗೆ ಅಡ್ಡಿಮಾಡಿದ್ದಾರೆ ಎಂದು ಹೋರಾಟಗಾರರ ಮೇಲೆಯೇ ದೂರ ನೀಡಿ ಜೈಲಿಗೆ ಹಾಕು ತ್ತಾರೆ. ಇದರ ವಿರುದ್ಧ ನಮ್ಮ ಹೋರಾಟವಿದೆ ಎನ್ನುತ್ತಾ ರಾಮಾಯಣ ದರ್ಶನಂ ಉಲ್ಲೇಖ ಮಾಡಿ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆಯನ್ನು ಕೋಡಿಹಳ್ಳಿ ಒತ್ತಿ ಹೇಳಿದರು.
ರಾಮಾಯಣದಲ್ಲಿ ರಾಮ ಕಾಡಿಗೆ ಹೋಗುವಾಗ ಇಡೀ ಜನತೆ ಆತನ ಹಿಂದೆ ಹೋಗುತ್ತಾರೆ.ಆದರೂ ರಾಜಕುಮಾರ ರಾಮನ ಪರಿಚಯ ನಾಗರೀಕರಿಗೆ ಇರುವುದಿಲ್ಲ. ಅಂತೆಯೇ ಇದಿಂದ ಎಂಎಲ್.ಎ, ಮುಖ್ಯಮಂತ್ರಿ, ಪ್ರಧಾನಿ ಸಂಸದರು ತಮ್ಮ ಕರ್ತವ್ಯವೇನೆಂದು ಅರಿಯದ ಜನ ನಾವಾಗಿದ್ದೇವೆ. ಇದಕ್ಕಾಗಿಯೇ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆ. ಇವರನ್ನು ಕಿತ್ತೊಗೆದು ಜನಪರ ಸರ್ಕಾರ ಕಟ್ಟುವುದು ಜನಪರ ಚಳವಳಿಗೆ ಕರ್ತವ್ಯವಾಗಿದೆ.
ಕೇಂದ್ರ ಸರಕಾರ ಯೂರಿಯಾ ಗೊಬ್ಬರದ ಮೇಲೆ ಬಂಡವಾಳ ಹೂಡಿಕೆ ಮಾಡಲು ಅವಕಾಶ ನೀಡಿದ್ದಾರೆ.ಇದರಿಂದ ರೈತರಿಗೆ ಆರ್ಥಿಕ ಶಕ್ತಿ ಬರುವುದಿಲ್ಲ.ಈ ಬಗ್ಗೆ ರೈತರು ಪ್ರಶ್ನೆ ಮಾಡಬೇಕು. 2020ರಿಂದ ಎಂಎಸ್ಪಿ ಶಾಸನ ಬದ್ಧ ಹಕ್ಕಿಗೆ ಹೋರಾಟ ನಡೆದಿದೆ.ಮೋದಿ ಸರ್ಕಾರ ಮಾಡಿಲ್ಲ.ಇದು ರೈತರಿಗೆ ಕೇಂದ್ರ ಮಾಡುತ್ತಿರುವ ದ್ರೋಹ. ಇನ್ನು ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಲು ಜಾಗತಿಕ ಬಂಡವಾಳಗಾರರು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳು ತ್ತಾರೆ. ಕೆಐಎಡಿಬಿ ರೈತರ ಭೂಮಿ ಕಿತ್ತುಕೊಳ್ಳಲು ಇರುವ ಸರ್ಕಾರಿ ಸಂಸ್ಥೆ.ಇವರಿಗೆ ಬದ್ಧತೆಯಿದ್ದರೆ ಈವರೆಗೆ ರೈತರಿಂದ ವಶಪಡಿಸಿಕೊಂಡಿರುವ ಎಷ್ಟು ಭೂಮಿಯಲ್ಲಿ ಕೈಗಾರಿಕಾಭಿವೃದ್ದಿ ಮಾಡಿ ದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ರೈತರಿಂದ ಭೂಮಿ ಕಿತ್ತು ಸರಕಾರವೇ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕೊಟ್ಟಿದ್ದಾರೆ. ಬಂಡವಾಳ ಗಾರರಿಗೆ ರೈತರ ಭೂಮಿ ಕೊಟ್ಟು ರೈತರ ದಿವಾಳಿ ಮಾಡುವುದು ನಿಲ್ಲಿಸಿ. ನಿಮಗೆ ಬದ್ಧತೆಯಿದ್ದರೆ ಹಿಂದುಳಿದ ಪ್ರದೇಶಗಳಾದ ಬಾಗೇಪಲ್ಲಿ, ಗೌರಿಬಿದನೂರು, ಬೀದರ್, ಚಾಮರಾಜನಗರ ಕಡೇ ಹೋಗಿ ಅಭಿವೃದ್ಧಿ ಮಾಡಿ. ಬೆಂಗಳೂರು ಸುತ್ತಮುತ್ತಲೇ ಯಾಕೆ ನಿಮಗೆ ಭೂಮಿ ಬೇಕು ಎಂದು ಪ್ರಶ್ನಿಸಿದರು.
ಮೋದಿ ಸರಕಾರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದೆ.ಇದು ನಿಜವೇ ಆಗಿದ್ದಲ್ಲಿ ಜಾಗತಿಕ ಮಾರು ಕಟ್ಟೆಯಲ್ಲಿ ಭಾರತದ ರೂಪಾಯಿ 49 ಪೈಸೆ ಕಡಿಮೆ ಆಗಿದ್ದು ಯಾಕೆ?ಮೋದಿ ಅವರೆ ನಿಮ್ಮ 10 ವರ್ಷದ ಅಧಿಕಾರವಧಿಯಲ್ಲಿ ಡಾಲರ್ ಮುಂದೆ ಭಾರತದ ರೂಪಾಯಿ ಎಷ್ಟು ಹೆಚ್ಚಾಗಿದೆ ಹೇಳಿ. ಪ್ರಯಾಗ್ ರಾಜ್‌ಗೆ ಬಂದರೆ ಗಂಗೆಯಲ್ಲಿ ಮಿಂದರೆ ಅಭಿವೃದ್ಧಿ ಆಗಲ್ಲ. ರೈತರ ಬಗ್ಗೆ ಕಾರ್ಮಿಕರ ಬಗ್ಗೆ ಗಮನ ಹರಿಸಿ ಅಭಿವೃದ್ಧಿಗೆ ಯೋಜನೆ ರೂಪಿಸಿದಾಗಲೇ ಭಾರತ ಬೆಳಗಲಿದೆ ಎಂದು ಕುಟುಕಿ ದರು.
ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರದ ಹಣ ಹೈದರಾಬಾದ್ ಲಿಕ್ಕರ್ ಮಾಲಿಕನ ಹೆಸರಿಗೆ ಹೇಗೆ ಹೋಗು ತ್ತದೆ ಎಂಬುದನ್ನು ಸಿದ್ಧರಾಮಯ್ಯ ಹೇಳಬೇಕು. ರೈತರು ಆರ್ಥಿಕವಾಗಿ ಸಬಲೀಕರಣ ಆಗಬೇಕು. ಅಂತರಿಕ್ಷದ ಬೆಳವಣಿಗೆ ರಾಜ್ಯಕ್ಕೆ ಲಾಭ ಇಲ್ಲ.ಟೋಲ್ ಹಣ ರಾಜ್ಯಕ್ಕೆ ಕೊಟ್ಟಿಲ್ಲ.
ರೈಲಿನಲ್ಲಿ ಬಂದರಿ ನಲ್ಲಿ ರಾಜ್ಯಕ್ಕೆ ಪಾಲಿಲ್ಲ.ಬ್ಯಾಂಕಿನಲ್ಲಿ ರಾಜ್ಯಕ್ಕೆ ಸಂಬಂಧ ಇಲ್ಲ. ನಿಮಗೆ ಮನಸ್ಸಿಗೆ ಬಂದಂತೆ ಆಡಳಿತ ಮಾಡಲು ಚಳವಳಿಗಾರರು ಬಿಡುವುದಿಲ್ಲ.
ಕೇಂದ್ರಕ್ಕೆ, ಮೈಕ್ರೋ ಫೈನಾನ್ಸ್ ಬಗ್ಗೆ ಲಗಾಮು ಹಾಕಲು ಸಿದ್ದರಾಮಯ್ಯ ನಿನಗೆ ಧಮ್ಮು ಇಲ್ಲದಿರ ಬಹುದು ನಾವು ಮಾಡುತ್ತೇವೆ. ಸಾಲಗಾರ ನಾನಲ್ಲ, ಸಾಲಕ್ಕೆ ನನಗೆ ಸಂಬಂಧವಿಲ್ಲ ಎಂದೂ ರೈತರು ಹೇಳಬೇಕು. ಸಾಲ ಕೊಟ್ಟಿದ್ದು ಬೆಳೆ ಬೆಳೆಯಲು, ಬೆಳೆದಿದ್ದೇನೆ ಎಂದು ಹೇಳಬೇಕು ಧೈರ್ಯ ತುಂಬಿದರು.
ಧಮ್ಮು ಇರುವವರನ್ನು ಲೋಕಸಭಾ ವಿಧಾನ ಸಭೆಗೆ ಕಳಿಸಬೇಕು.ರಾಷ್ಟ್ರೀಯ ಪಕ್ಷಗಳಿಗೆ ಕುಡಿಯ ಬೇಕು. ರೈತರು ಬೀದಿಗೆ ಬಂದಿದ್ದಾರೆ.
ವೀರೇಂದ್ರ ಹೆಗ್ಗಡೆ ಸ್ಥಾಪಿತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಎಂಬ ಮೈಕ್ರೋ ಫೈನಾನ್ಸ್ ಜನರನ್ನು ಸಾವಿನ ದವಡೆಗೆ ತಳ್ಳಿದೆ. ತಳ್ಳಿದ್ದಾರೆ.ಕ್ರಮ ಕೈಗೊಳ್ಳಬೇಕಾದ ಕಂದಾಯ ಮಂತ್ರಿ ಇದು ಆರ್.ಬಿ.ಐ ಜವಾಬ್ದಾರಿ ಎನ್ನುತ್ತಾನೆ. ರಾಜ್ಯ ಸರ್ಕಾರ ಕಾನೂನು ಬಿಗಿ ಮಾಡಿದರೆ ಇಂತಹವರು ಚಿಗುರಲು ಸಾಧ್ಯವೇ ಇಲ್ಲ.ಹೆಣ್ಣು ಮಕ್ಕಳಿಗೆ ದೈರ್ಯ ಹೇಳಿ.ಧರ್ಮಸ್ಥಳ ಸಂಸ್ಥೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹಣ ನೀಡಿದ್ದಾರೆ.ಇದು ಧರ್ಮಸ್ಥಳ ಸಂಸ್ಥೆಯ ಮಹದುಪಕಾರ. ಈ ಕಂಪನಿಗಳನ್ನು ಪೀಡಿಸಿದರೆ ಒದ್ದು ಹೊರಗೆ ಹಾಕಿ ಎಂದು ಕರೆ ನೀಡಿ ಎಂದ ಅವರು ನೀತಿವಂತ ರಾಜಕಾರಣಕ್ಕೆ ನವಕರ್ನಾಟಕ ನಿರ್ಮಾಣ ಆಂದೋಲನಕ್ಕೆ ಬೆಂಬಲ ನೀಡಿ ಎಂದರು.
ಈ ವೇಳೆ ಬಿಸ್‌ಪಿಯ ಆರ್.ಮುನಿಯಪ್ಪ, ಭಕ್ತರಹಳ್ಳಿ ಬೈರೇಗೌಡ,ರಾಮನಾಥ್,ಮಾಜಿ ಶಾಸಕ ಬಸವರಾಜ್, ಪುಟ್ಟರಾಜು, ಶಿವರಾಮ್, ಎನ್.ರಮೇಶ್, ದಸ್ತಗಿರ್ ಮುಲ್ಲಾ, ರಾಧಕೃಷ್ಣ, ಅರುಣ್ ಗೌಡ, ಚನ್ನಕೃಷ್ಣಪ್ಪ, ಸೇರಿದಂತೆ ಆಲ್ ಇಂಡಿಯಾ ಬಹುಜನ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ಪಕ್ಷದ ಮುಖಂಡರು ಇದ್ದರು.