ನ್ಯಾಯವಾದಿಗಳ ಸಮುದಾಯ ಭವನಕ್ಕೆ ಹೈಕೋರ್ಟ ನ್ಯಾಯಮೂರ್ತಿ, ಜಿಲ್ಲಾ ನ್ಯಾಯಾಧೀಶ ಭೇಟಿ, ಸತ್ಕಾರ
ಸತ್ಕಾರ ಸ್ವೀಕರಿಸಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರು ಮಾತನಾಡಿ, ಇಂಡಿ ವಕೀಲರ ಸಂಘದ ಪದಾಧಿಕಾರಿಗಳು ಇಂಡಿಗೆ ಜಿಲ್ಲಾ ನ್ಯಾಯಾ ಲಯದ ಬೇಂಚ್ ಬೇಡಿಕೆ ಇಟ್ಟಿದ್ದು ಅದಕ್ಕೆ ಸಂಬಂಧಿಸಿದಂತೆ ಕೂಲಂಕಶವಾಗಿ ಪರಿಶೀಲಿಸಿ ಮಂಜೂ ರಾತಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಇಂಡಿ: ಹೈಕೋರ್ಟ ನ್ಯಾಯಾಧೀಶರಾದ ಎಂ.ಐ. ಅರುಣ್‌ಕುಮಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಸ್.ಬಿ. ಬೂದಿಹಾಳ, ಅಜಿತ್ ಧನಶೆಟ್ಟಿ, ಯಲ್ಲಾಲಿಂಗ ಪೂಜಾರಿ ಮತ್ತಿತರರು ಇದ್ದರು. -
Ashok Nayak
Feb 18, 2025 9:48 PM
ಇಂಡಿ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ನ್ಯಾಯವಾದಿಗಳ ಸಮುದಾಯ ಭವನಕ್ಕೆ ಹೈಕೋರ್ಟ ನ್ಯಾಯಮೂರ್ತಿ ಎಂ.ಐ. ಅರುಣ್‌ಕುಮಾರ, ಜಿಲ್ಲಾ ನ್ಯಾಯಾಧೀಶ ಶಿವಾಜಿ ನಲವಡೆ ಅವರು ಭೇಟಿ ನೀಡಿ ಸ್ಥಳೀಯ ನ್ಯಾಯವಾದಿಗಳಿಂದ ಸತ್ಕಾರ ಸ್ವೀಕರಿಸಿ ದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಬೂದಿಹಾಳ ಮಾತನಾಡಿ, ಇಂಡಿ ಪಟ್ಟಣಕ್ಕೆ ಜಿಲ್ಲಾ ನ್ಯಾಯಾಲಯ ಬೆಂಚ್‌ನ ಅವಶ್ಯಕತೆ ಬಹಳಷ್ಟಿದ್ದು ಅದನ್ನು ಮಂಜೂ ರು ಮಾಡಿ ಈ ಭಾಗದ ಜನತೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Vijayapura shootout case: ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ
ಸತ್ಕಾರ ಸ್ವೀಕರಿಸಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರು ಮಾತನಾಡಿ, ಇಂಡಿ ವಕೀಲರ ಸಂಘದ ಪದಾಧಿಕಾರಿಗಳು ಇಂಡಿಗೆ ಜಿಲ್ಲಾ ನ್ಯಾಯಾ ಲಯದ ಬೇಂಚ್ ಬೇಡಿಕೆ ಇಟ್ಟಿದ್ದು ಅದಕ್ಕೆ ಸಂಬಂಧಿಸಿದಂತೆ ಕೂಲಂಕಶವಾಗಿ ಪರಿಶೀ ಲಿಸಿ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ, ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ ಎಸ್.ಎಂ, ಸೇರಿದಂತೆ ಹಿರಿಯ ನ್ಯಾಯವಾದಿಗಳಾದ ಸಮನ್ವಯ ಸಮಿತಿ ಅಧ್ಯಕ್ಷ ಅಜಿತ್ ಧನಶೆಟ್ಟಿ, ಉಪಾಧ್ಯಕ್ಷ ಅಶೋಕ ಗಜಾಕೋಶ, ಕಾರ್ಯದರ್ಶಿ ಎನ್.ಕೆ. ನಾಡಪುರೋಹಿತ, ಖಜಾಂಚಿ ಯಲ್ಲಾಲಿಂಗ ಪೂಜಾರಿ, ಬಿ.ಬಿ. ಬಿರಾದಾರ, ವಿ.ಪಿ.ಪಾಟೀಲ, ಎಸ್.ಆರ್. ಬಿರಾದಾರ, ಡಿ.ಜಿ. ಜೋತಗೊಂಡ, ಪಿ.ಜಿ. ನಾಡಗೌಡ ಸೇರಿದಂತೆ ನ್ಯಾಯವಾದಿ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.