Honey Trap: ಹನಿಟ್ರ್ಯಾಪ್ ವಿಚಾರಕ್ಕೆ ವಿಧಾನಸಭೆಯಲ್ಲಿ ಹೈಡ್ರಾಮಾ, ವಿಪಕ್ಷ ಶಾಸಕರಿಂದ ಗದ್ದಲ
ಇಂದು ಬೆಳಗ್ಗೆ ವಿಧಾನಸಬೆ ಕಲಾಪ ಆರಂಭವಾಗುತ್ತಲೇ ವಿಪಕ್ಷ ಸದಸ್ಯರು ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಗದ್ದಲ, ಗಲಾಟೆ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಸ್ಪೀಕರ್ ಯು.ಟಿ. ಖಾದರ್ 10 ನಿಮಿಷ ಮುಂದೂಡಿದರು. ಇದಕ್ಕೆ ಮುನ್ನ ವಿಧೇಯಕಗಳನ್ನು ಸರಕಾರ ಮಂಡಿಸಿದ್ದು ಅದನ್ನು ಅಂಗೀಕರಿಸಲಾಯಿತು. ಇದಕ್ಕೂ ವಿಪಕ್ಷ ಸದಸ್ಯರು ಅಡ್ಡಿಪಡಿಸಿದರು. ಬಜೆಟ್ ಭಾಷಣದ ಪ್ರತಿಗಳನ್ನು ಹರಿದು ಚೂರು ಮಾಡಿ ಗಾಳಿಯಲ್ಲಿ ತೂರಿದರು.

ಬೆಂಗಳೂರು : ವಿಧಾನಸಭೆಯಲ್ಲಿ (Karnataka vidhana sabha) ಹನಿಟ್ರ್ಯಾಪ್ (Honey Trap) ಹಾಗೂ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲು ವಿಧೇಯಕ (reservation) ವಿರೋಧಿಸಿ ಭಾರೀ ಹೈಡ್ರಾಮಾ (high drama) ನಡೆದಿಯಿತು. ವಿಪಕ್ಷ ಸದಸ್ಯರು (Opposition leaders) ಸದನದ ಬಾವಿಗಿಳಿದು, ಸ್ಪೀಕರ್ ಪೀಠವನ್ನು ಸುತ್ತುವರಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೇ ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಮಾಡಲಾಯಿತು.
ಇಂದು ಬೆಳಗ್ಗೆ ವಿಧಾನಸಬೆ ಕಲಾಪ ಆರಂಭವಾಗುತ್ತಲೇ ವಿಪಕ್ಷ ಸದಸ್ಯರು ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಗದ್ದಲ, ಗಲಾಟೆ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಸ್ಪೀಕರ್ ಯು.ಟಿ. ಖಾದರ್ 10 ನಿಮಿಷ ಮುಂದೂಡಿದರು. ಇದಕ್ಕೆ ಮುನ್ನ ವಿಧೇಯಕಗಳನ್ನು ಸರಕಾರ ಮಂಡಿಸಿದ್ದು ಅದನ್ನು ಅಂಗೀಕರಿಸಲಾಯಿತು. ಇದಕ್ಕೂ ವಿಪಕ್ಷ ಸದಸ್ಯರು ಅಡ್ಡಿಪಡಿಸಿದರು. ಬಜೆಟ್ ಭಾಷಣದ ಪ್ರತಿಗಳನ್ನು ಹರಿದು ಚೂರು ಮಾಡಿ ಗಾಳಿಯಲ್ಲಿ ತೂರಿದರು.
ನಿನ್ನೆ ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುವುದು ಕೆಟ್ಟ ಸಂಸ್ಕೃತಿಯಾಗಿದೆ. ಕೆಲ ರಾಜಕೀಯ ಪಕ್ಷದಲ್ಲಿ ಇರುವವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿಯೋ, ಸಿಎಂ ಆಗಬೇಕೆಂಬ ಕಾರಣಕ್ಕೂ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದರು. ಈ ವೇಳೆ ನಾನು ಹನಿಟ್ರ್ಯಾಪ್ ವಿಚಾರದಲ್ಲಿ ಲಿಖಿತ ದೂರು ಕೊಡುತ್ತೇನೆ. ಅದನ್ನು ತನಿಖೆ ಮಾಡಿ ಎಂಬುದಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು. ಇದಲ್ಲದೇ ನಾನೊಬ್ಬನೇ ಅಲ್ಲ, ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದ 48 ಮಂದಿಯ ಹನಿಟ್ರ್ಯಾಪ್ ಸಿಡಿ, ಪೆನ್ ಡ್ರೈವ್ ಗಳಿದ್ದಾವೆ. ಇದರಲ್ಲಿ ಜಡ್ಜ್ ಗಳದ್ದೂ ಇದೆ. ತನಿಖೆಗೆ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: K.N. Rajanna: 48 ನಾಯಕರ ಹನಿಟ್ರ್ಯಾಪ್ ಸಿಡಿ ಇದೆ: ಸಚಿವ ರಾಜಣ್ಣ ಶಾಕಿಂಗ್ ಹೇಳಿಕೆ