MLA K H Puttaswamy Gowda: ನನ್ನ ಅವಧಿಯಲ್ಲಿ ತಾಲೂಕನ್ನು ಮಾದರಿಯಾಗಿ ರೂಪಿಸುವ ಸಂಕಲ್ಪ ಮಾಡಿದ್ದೇನೆ
ಗೌರಿಬಿದನೂರು ನಗರ ವ್ಯಾಪ್ತಿಯ ಕೆ.ಇ.ಬಿ.ವಾರ್ಡ್, ಗೊಟಕನಾಪುರ,ಹಾಗೂ ಕೋಟೆ ಶಾಲೆ ಯ ಬಳಿ ಉರ್ದು ಶಾಲೆಯ ಬಳಿ ನೂತನವಾಗಿ ನಿರ್ಮಿಸಲಾಗಿದ್ದ ಶಾಲಾ ಕೊಠಡಿಗಳನ್ನು ಉದ್ಘಾಟಿ ಸಲಾಯಿತು. ಅಲ್ಲೀಪುರ ಹುಣಸೇಕುಂಟೆ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದರು.

ತಾಲ್ಲೂಕಿನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಗೆದರೆ ಗ್ರಾಮದಲ್ಲಿ ಶಾಸಕ ಕೆ. ಎಚ್. ಪುಟ್ಟಸ್ವಾಮಿಗೌಡ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಗೌರಿಬಿದನೂರು: ತಾಲ್ಲೂಕಿನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಗೆದರೆ ಗ್ರಾಮ ದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಭೂಮಿಪೂಜೆಯನ್ನು ನೆರವೇರಿಸಿ ಮಾತ ನಾಡಿದರು. ನಾನು ಪಕ್ಷೇತರ ಶಾಸಕ ಆಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯ ಮಂತ್ರಿಗಳು, ಉಪಮುಖ್ಯಮಂತ್ರಿಗಳ ಮನವೊಲಿಸಿ ಅನುದಾನವನ್ನು ತರುತ್ತಿದ್ದೇನೆ. ನನ್ನ ಅವಧಿಯಲ್ಲಿ ತಾಲೂಕನ್ನು ಮಾದರಿಯಾಗಿ ರೂಪಿಸುವ ಸಂಕಲ್ಪ ಮಾಡಿದ್ದೇನೆ. ಹೀಗಾಗಿ, ಕ್ಷೇತ್ರದ ಎಲ್ಲಾ ಭಾಗಗಳಿಗೂ ಸಮಾನ ಆದ್ಯತೆ ನೀಡಲಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ್ದ ಅನರ್ಹತೆ ಆದೇಶಕ್ಕೆ ಹೈಕೋರ್ಟಿಂದ ತಡೆ
ಗೌರಿಬಿದನೂರು ನಗರ ವ್ಯಾಪ್ತಿಯ ಕೆ.ಇ.ಬಿ.ವಾರ್ಡ್, ಗೊಟಕನಾಪುರ,ಹಾಗೂ ಕೋಟೆ ಶಾಲೆ ಯ ಬಳಿ ಉರ್ದು ಶಾಲೆಯ ಬಳಿ ನೂತನವಾಗಿ ನಿರ್ಮಿಸಲಾಗಿದ್ದ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಅಲ್ಲೀಪುರ ಹುಣಸೇಕುಂಟೆ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದರು.
ಅಲ್ಲಿಪುರ ರಸ್ತೆಯಿಂದ ಕಾಮಗಾನಹಳ್ಳಿ, ಗೆದರೆ, ಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ್‌ಮೂರ್ತಿ, ರಾಧ, ಚಂದ್ರಕಲ, ಗ್ರಾಮಪಂಚಾಯಿತಿ ಅಧ್ಯಕ್ಷೆ ಗೀತಾ, ಬೊಮ್ಮಣ್ಣ, ರಾಕೇಶ್, ಚಂದ್ರಣ್ಣ, ಕೆಹೆಚ್ಪಿ ಬಣದ ಮುಖಂಡರಾದ ಲಕ್ಷ್ಮಣ್ ರಾವ್, ಶ್ರೀನಿವಾಸ್‌ಗೌಡ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.