Chikkaballapur News: ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ್ದ ಅನರ್ಹತೆ ಆದೇಶಕ್ಕೆ ಹೈಕೋರ್ಟಿಂದ ತಡೆ
ನಾಲ್ಕು ತಿಂಗಳ ಹಿಂದೆ ನಡೆದಿದ್ದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಫ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ನೇತ್ರಾವತಿ, ನಿರ್ಮಲಾ ಪ್ರಭು, ಸತೀಶ್, ಸ್ವಾತಿ ಮಂಜುನಾಥ್, ಅಂಬಿಕಾ ಮತ್ತು ರತ್ನಮ್ಮ ಅವರನ್ನು ಜಿಲ್ಲಾಧಿಕಾರಿ ಗಳ ನ್ಯಾಯಾಲಯ ಅನರ್ಹಗೊಳಿಸಿ ಆದೇಶ ನೀಡಿದ್ದರಿಂದ,ಇವರ ಬೆಂಬಲದಲ್ಲಿ ಅಧಿಕಾರಕ್ಕೆ ಏರಿದ್ದ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಅವರ ಆಡಳಿತದ ಮೇಲೆ ಕಾರ್ಮೋಡ ಕವಿದಿತ್ತು

ನಗರಸಭೆಯ ಚಿತ್ರ.

ಬಜೆಟ್ ಮೀಟಿಂಗ್ ನಡೆಯಲು ಹಾದಿ ಸುಗಮ : ಏಪ್ರಿಲ್ ಮೊದಲ ವಾರದಲ್ಲಿ ಸಭೆ ಸಂಭವ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ 6 ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಪಕ್ಷದ ವಿಫ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವುದು ಖಾತರಿಯಾದ ಕಾರಣ ಜಿಲ್ಲಾಧಿಕಾರಿ ಗಳ ನ್ಯಾಯಾಲಯ ಮಾ.20ರಂದು ಅನರ್ಹಗೊಳಿಸಿ ಆದೇಶ ನೀಡಿದ್ದರಿಂದ ಮಾ.26 ರಂದು ನಡೆಯಬೇಕಿದ್ದ ಬಜೆಟ್ ಸಾಮಾನ್ಯ ಸಭೆ ದಿಢೀರನೆ ರದ್ಧಾಗಿ ಪರ ವಿರೋಧದ ಚರ್ಚೆಗಳಿಗೆ ವೇದಿಕೆಯನ್ನೊದಗಿಸಿತ್ತು. ನಾಲ್ಕು ತಿಂಗಳ ಹಿಂದೆ ನಡೆದಿದ್ದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಫ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ ನೇತ್ರಾವತಿ, ನಿರ್ಮಲಾ ಪ್ರಭು, ಸತೀಶ್, ಸ್ವಾತಿ ಮಂಜುನಾಥ್, ಅಂಬಿಕಾ, ಮತ್ತು ರತ್ನಮ್ಮ ಅವರನ್ನು ಜಿಲ್ಲಾಧಿಕಾರಿ ಗಳ ನ್ಯಾಯಾಲಯ ಅನರ್ಹಗೊಳಿಸಿ ಆದೇಶ ನೀಡಿದ್ದ ರಿಂದ ಇವರ ಬೆಂಬಲದಲ್ಲಿ ಅಧಿಕಾರಕ್ಕೆ ಏರಿದ್ದ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಅವರ ಆಡಳಿತದ ಮೇಲೆ ಕಾರ್ಮೋಡ ಕವಿದಿತ್ತು.
ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶ ಸಹಜವಾಗಿ ವಿರೋಧ ಪಕ್ಷದಲ್ಲಿರುವ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಂಬರೀಶ್, ಉಪಾಧ್ಯಕ್ಷ ಸ್ಥಾನದ ಮೀನಾ ಮಿಲ್ಟನ್ ವೆಂಕಟೇಶ್ ಬಳಗ ದಲ್ಲಿ ಸಹಜವಾಗಿ ಸಂತೋಷಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಈ ಎಲ್ಲಾ ಬೆಳವಣಿಗೆಗಳ ನಡುವೆ ಅನರ್ಹತೆಯ ಶಿಕ್ಷೆಗೆ ಗುರಿಯಾಗಿದ್ದ ೬ ಮಂದಿ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.ಬೆಂಗಳೂರಿನ ಹೈಕೋರ್ಟ್ ಏಕಸದಸ್ಯ ಪೀಠವು ಗುರುವಾರ ಈ ಅರ್ಜಿಯನ್ನು ಕೈಗೆತ್ತಿಕೊಂಡು ತುರ್ತು ವಿಚಾರಣೆ ನಡೆಸಿ ಚಿಕ್ಕಬಳ್ಳಾಪುರ ನಗರಸಭೆಯ 6 ಮಂದಿ ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ್ದ ತೀರ್ಪಿಗೆ 7 ದಿನಗಳ ಕಾಲ ತಾತ್ಕಾಲಿಕ ತಡೆಯನ್ನು ನೀಡಿ ವಿಚಾರಣೆಯನ್ನು ಮುಂದೂ ಡಿದೆ. ಈ ಆದೇಶವು ಅನರ್ಹರ ಪಾಲಿಗೆ ಸಂತೋಷವನ್ನು ತಂದಿದ್ದು 6 ಮಂದಿಯೂ ಕೂಡ ನಗರಸಭೆಯ ಸಕ್ರಿಯ ಸದಸ್ಯರಾಗಿ ಮುಂದುವರೆಯಲಿದ್ದಾರೆ. ಈ ಎಲ್ಲಾ ಬೆಳವಣಿಗೆಗೆಳ ನಡುವೆ ಈ ೭ ದಿನಗಳ ಒಳಗೆ ನಗರ ಸಭೆಯ ಬಜೆಟ್ ಅಧಿವೇಶನ ಪೂರ್ಣಗೊಳಿಸುವ ಸನ್ನಾಹದಲ್ಲಿ ನಗರಾಡಳಿತ ನಿರತವಾಗಿದೆ ಎಂಬ ಮಾತುಗಳೂ ಬಲವಾಗಿ ಕೇಳಿ ಬಂದಿವೆ.
ಏನೇ ಆಗಲಿ ನಗಸಭೆಯಲ್ಲಿ 16 ಮಂದಿ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಏನೆಲ್ಲಾ ಪ್ರಯತ್ನ ನಡೆಸಿದರೂ ಅಧಿಕಾರಕ್ಕೆ ಏರುವಲ್ಲಿ ಸಾಧ್ಯವಾಗಿರಲಿಲ್ಲ. ಜಿಲ್ಲಾಧಿಕಾರಿ ಗಳ ನ್ಯಾಯಾಲಯವು ನೀಡಿದ್ದ ತೀರ್ಪು ಇವರ ಆಸೆಗೆ ಪುಷ್ಟಿಯನ್ನು ನೀಡಿತ್ತು. ಕಾಂಗ್ರೆಸ್ ಸದಸ್ಯರು ಕೂಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಮಾರ್ಗದರ್ಶನ ಅಧಿಕಾರ ಹಿಡಿಯುವ ಬಗ್ಗೆ ತೆರೆಮರೆಯ ಕಸರತ್ತು ನಡೆಸಿದ್ದರು. ಆದರೆ ಹೈಕೋರ್ಟ್ ತಡೆ ಆದೇಶ ಮತ್ತು ಸಂಸದ ಸುಧಾಕರ್ ಅವರ ಚಾಣಾಕ್ಷ ನಡೆಯ ಎದುರು ಇವರ ಎಲ್ಲಾ ಪಟ್ಟುಗಳು ತಲೆಕೆಳಗಾಗಿದ್ದು ಗಜೇಂದ್ರ ಅವರ ಆಡಳಿತ ಅಬಾಧಿತವಾಗಿ ಸಾಗುವ ಮುನ್ಸೂಚನೆ ನೀಡಿದೆ.
ಒಟ್ಟಾರೆ, ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ನಗರಸಭೆಯು ಅಭಿ ವೃದ್ದಿಯ ಮೈಲಿಗಲ್ಲುಗಳನ್ನು ನೆಡಲು ವಿಫುಲ ಅವಕಾಶಗಳು ಇದ್ದರೂ ಕೂಡ, ಇದಕ್ಕೆ ಮುಂದಾಗದೆ, ರಾಜಕೀಯದಲ್ಲಿಯೇ ಮುಳುಗಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರು ವುದು ವಾಡಿಕೆಯಾಗಿ ಬಿಟ್ಟಿದೆ. ಇನ್ನಾದರೂ ಸರಿಯೆ ಒಳ್ಳೆಯ ರೀತಿಯಲ್ಲಿ ಅಧಿಕಾರ ನಡೆಸಿ ನಗರವಾಸಿಗಳ ಪ್ರೀತಿಗೆ ಪಾತ್ರವಾಗಲಿ ಎನ್ನುವುದು ಜನತೆಯ ಆಶಯವಾಗಿದೆ.
*
ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತವು ಜನಪರವಾದ ತೀರ್ಮಾನಗಳನ್ನು ತೆಗೆದು ಕೊಂಡು ನಗರದ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡುತ್ತಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ನಗರವಾಸಿಗಳ ಆಶೋತ್ತರಗಳಿಗೆ ಜೀವತುಂಬುವ ಕೆಲಸ ಮಾಡಲು ಮುಂದಾ ಗಿತ್ತು. ಆದರೆ ದಿಢೀರೆಂದು ಬಂದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಅನರ್ಹತೆಯ ತೀರ್ಪು ಸುಗಮ ಆಡಳಿತಕ್ಕೆ ಬ್ರೇಕ್ ಹಾಕುವಲ್ಲಿ ಸಫಲವಾಗಿತ್ತು.ಹೀಗಾಗಿ ಇದನ್ನು ಪ್ರಶ್ನಿಸಿ ನಮ್ಮೊಂದಿಗಿರುವ 6 ಮಂದಿ ಸದಸ್ಯರು ಹೈಕೋರ್ಟ್ಗೆ ಅಪೀಲು ಸಲ್ಲಿಸಿದ್ದರು.ಅಲ್ಲಿ ಇವರಿಗೆ ನ್ಯಾಯ ಸಿಕಿದ್ದು ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪಿಗೆ 7 ದಿನಗಳ ತಡೆಯನ್ನು ನೀಡಲಾಗಿರುವುದು ಸಂತೋಷ ತಂದಿದೆ
ಎ.ಗಜೇಂದ್ರ. ನಗರಸಭಾಧ್ಯಕ್ಷರು ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ನಗರಸಭೆಯ ಆಯವ್ಯಯದ ಸಭೆ ಮಾ.೨೬ಕ್ಕೆ ನಿಗಧಿಯಾಗಿತ್ತು.ಆದರೆ ಕೆಲ ಸದಸ್ಯರು ಅಜೆಂಡಾ ಕಳಿಸಿಲ್ಲ ಎಂದು ತಗಾದೆ ತೆಗೆದ ಕಾರಣ ನೀಡಿ ಸಭೆಯನ್ನು ಮುಂದೂ ಡಬೇಕಾಯಿತು. ಈ ನಡುವೆ 6 ಮಂದಿ ಸದಸ್ಯರ ಅನರ್ಹತೆ ತೀರ್ಪು ಕೂಡ ಸಭೆಯ ಮೇಲೆ ಪರಿಣಾಮ ಬೀರಿತ್ತು. ಅಧ್ಯಕ್ಷರ ಸೂಚನೆ ಮೇಲೆ ಸದರಿ ಸಭೆಯನ್ನು ಮುಂದೂಡಬೇಕಾ ಯಿತು. ಇಂದು ಹೈಕೋರ್ಟ್ ಈ 6 ಸದಸ್ಯರ ಅನರ್ಹತೆ ತೀರ್ಪಿಗೆ 7 ದಿನಗಳ ಕಾಲ ತಡೆ ನೀಡಿದ್ದು,ಇವರೆಲ್ಲರ ಸಮ್ಮುಖದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬಜೆಟ್ ಸಭೆ ನಡೆಯ ಲಿದೆ.
-ಮನ್ಸೂರ್ ಅಲಿ ಆಯುಕ್ತರು ನಗರಸಭೆ ಚಿಕ್ಕಬಳ್ಳಾಪುರ.