ʻನಿಮ್ಮ ತಲೆಗೆ ಗುಂಡು ಹೊಡೆಯುತ್ತೇನೆʼ:ಯೋಗರಾಜ್ ಸಿಂಗ್ ಹೇಳಿಕೆಗೆ ಕಪಿಲ್ ದೇವ್ ಪ್ರತಿಕ್ರಿಯೆ!
ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಇತ್ತೀಚಿಗೆ ಕಪಿಲ್ ದೇವ್ ಜತೆಗೆ ನಡೆದಿದ್ದ ಶಾಕಿಂಗ್ ಘಟನೆಯನ್ನು ರಿವೀಲ್ ಮಾಡಿದ್ದರು. ಉತ್ತರ ವಲಯ ತಂಡದಿಂದ ಕೈ ಬಿಟ್ಟಿದ್ದ ಕಾರಣ ಕಪಿಲ್ ದೇವ್ ತಲೆಗೆ ಗುಂಡು ಹಾರಿಸಲು ಹೋಗಿದ್ದೆ ಎಂದು ಯೋಗರಾಜ್ ಸಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಪಿಲ್ ದೇವ್ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: ನಿಮ್ಮ ತಲೆಗೆ ಗುಂಡು ಹೊಡೆಯುತ್ತೇನೆಂದಿದ್ದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಹೇಳಿಕೆಗೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಯೋಗರಾಜ್ ಸಿಂಗ್, ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಸಂಬಂಧಿಸಿದಂತೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದರು.
ಉತ್ತರ ವಲಯ ತಂಡದಿಂದ ಯೋಗರಾಜ್ ಸಿಂಗ್ ಅವರನ್ನು ಅಂದು ಕಪಿಲ್ ದೇವ್ ಮತ್ತು ಬಿಷನ್ ಸಿಂಗ್ ಬೇಡಿ ಕೈ ಬಿಟ್ಟಿದ್ದರು. ಕಪಿಲ್ ದೇವ್ ಅವರ ಈ ನಿರ್ಧಾರದಿಂದ ಯೋಗರಾಜ್ ಸಿಂಗ್‌ಗೆ ಭಾರಿ ನೋವಾಗಿತ್ತು ಹಾಗೂ ಕ್ರಿಕೆಟ್ ವೃತ್ತಿ ಜೀವನವನ್ನು ತ್ಯಜಿಸಬೇಕೆಂಬ ನಿರ್ಧಾರವನ್ನು ಅಂದು ತೆಗೆದುಕೊಳ್ಳಬೇಕೆಂದು ಅನಿಸಿತ್ತು. ಈ ವೇಳೆ ಯೋಗರಾಜ್ ಸಿಂಗ್, ಮಾಜಿ ನಾಯಕ ಕಪಿಲ್ ದೇವ್ ಅವರ ತಲೆಗೆ ಗುಂಡು ಹೊಡೆಯಲು ಬಯಸಿದ್ದರು.ಈ ಘಟನೆಯನ್ನು ಸ್ವತಃ ಯೋಗರಾಜ್ ಸಿಂಗ್ ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಬುಮ್ರಾ
ಇತ್ತೀಚೆಗೆ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಮಾಧ್ಯಮದವರು ಇದೇ ಪ್ರಶ್ನೆಯನ್ನು ಕೇಳಿದ್ದರು. ಯೋಗರಾಜ್ ಸಿಂಗ್ ಅವರು ಹೇಳಿಕೆ ಸರಿಯಾಗಿದೆಯಾ? ಎಂದು ಕೇಳಿದರು. ಈ ವೇಳೆ ಕಪಿಲ್ ದೇವ್, "ಯೋಗರಾಜ್ ಸಿಂಗ್ ಯಾರು? ಎಂದು ಹೇಳಿದರು. ಈ ವೇಳೆ ವರದಿಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಎಂದರು. ತದ ನಂತರ ಕಪಿಲ್ ದೇವ್ ಪ್ರಶ್ನೆಗೆ ಉತ್ತರಿಸದೆ ಹೋದರು.
ಕಪಿಲ್ ದೇವ್ ಬಗ್ಗೆ ಯೋಗರಾಜ್ ಸಿಂಗ್ ಹೇಳಿದ್ದೇನು?
"ಕಪಿಲ್ ದೇವ್ ಅವರು ಭಾರತ, ಹರಿಯಾಣ ಮತ್ತು ಉತ್ತರ ವಲಯಕ್ಕೆ ನಾಯಕರಾಗಿದ್ದ ವೇಳೆ ಯಾವುದೇ ಕಾರಣವಿಲ್ಲದೆ ನನ್ನನ್ನು ತಂಡದಿಂದ ಕೈ ಬಿಟ್ಟಿದ್ದರು. ಇದಕ್ಕೆ ಕಾರಣವೇನೆಂದು ಕಪಿಲ್ ದೇವ್‌ಗೆ ಪ್ರಶ್ನೆ ಕೇಳಿ ಎಂದು ನನ್ನ ಪತ್ನಿ ಹೇಳಿದ್ದರು. ಈ ಮನುಷ್ಯನಿಗೆ ನಾನೇ ಬುದ್ದಿ ಕಲಿಸುತ್ತೇನೆಂದು ನನ್ನ ಪತ್ನಿಗೆ ಹೇಳಿದ್ದೆ. ನಾನು ನನ್ನ ಪಿಸ್ತೂಲ್ ಅನ್ನು ತೆಗೆದುಕೊಂಡು 9ನೇ ಸೆಕ್ಟರ್‌ನಲ್ಲಿರುವ ಕಪಿಲ್ ದೇವ್ ಅವರ ಮನೆಗೆ ಹೋಗಿದ್ದೆ. ಕಪಿಲ್ ದೇವ್ ತಮ್ಮ ತಾಯಿಯೊಂದಿಗೆ ಹೊರಗಡೆ ಬಂದಿದ್ದರು. ಈ ವೇಳೆ ನಾನು ಸಾಕಷ್ಟು ನಿಂಧಿಸಿದ್ದೆ. ನಿಮ್ಮಿಂದ ನಾನು ನನ್ನ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಇದಕ್ಕೆ ನೀವು ಪರಿಹಾರ ಕೊಡುತ್ತೀರಾ? ಎಂದು ಕೇಳಿದ್ದೆ," ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
Yograj Singh kaun hai?
— Mini (@perfectminz) January 14, 2025
Says Kapil Dev 👏👏🔥🔥 pic.twitter.com/6MSCHIgYeb
"ನಾನು ನಿಮ್ಮ ತಲೆಗೆ ಗುಂಡು ಹೊಡೆಯುತ್ತೇನೆಂದು ಅವರಿಗೆ ಹೇಳಿದ್ದೆ, ಆದರೆ ಆ ಕೆಲಸವನ್ನು ನಾನು ಮಾಡಿರಲಿಲ್ಲ. ಏಕೆಂದರೆ ಧರ್ಮನಿಷ್ಠೆ ಹೊಂದಿರುವ ಅವರ ತಾಯಿ ಕೂಡ ಅಲ್ಲಿ ನಿಂತಿದ್ದರು. ಹಾಗಾಗಿ ನಡೆ ಹೋಗೋಣ ಶಬ್ನಮ್ ಎಂದು ನನ್ನ ಪತ್ನಿ ಹೇಳಿ ಹೊರಟ್ಟಿದ್ದೆವು," ಎಂದು ಯೋಗರಾಜ್ ಸಿಂಗ್ ಬಹಿರಂಗಪಡಿಸಿದ್ದರು.
"2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದಿತ್ತು, ಈ ವೇಳೆ ಅಳುತ್ತಿದ್ದ ಏಕೈಕ ವ್ಯಕ್ತಿ ಕಪಿಲ್ ದೇವ್. ವಿಶ್ವಕಪ್ ಟೂರ್ನಿಯಲ್ಲಿ ನಿಮಗಿಂತ ನನ್ನ ಮಗ ಉತ್ತಮ ಪ್ರದರ್ಶನ ತೋರಿದ್ದಾರೆಂದು ಪೇಪರ್ ಕಟ್ಟಿಂಗ್ ಅನ್ನು ಅವರಿಗೆ ಕಳುಹಿಸಿದ್ದೆ," ಎಂದು ಯುವರಾಜ್ ಸಿಂಗ್ ತಂದೆ ತಿಳಿಸಿದ್ದಾರೆ.