ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಕೊಂಡ್ರೆ ದುಡ್ಡಿನ ಹೊಳೆ ಹರಿಯೋದು ಪಕ್ಕಾ!

ಉತ್ತರ ದಿಕ್ಕಿನಲ್ಲಿ ವಾಸ್ತು ಸಲಹೆ ಪ್ರಕಾರ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಕುಬೇರ ದೇವನ ಅನುಗ್ರಹ ದೊರೆತು ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಯೂರುತ್ತಾಳೆ. ಮನೆಯಲ್ಲಿ ಶುಭಫಲಗಳು, ಐಶ್ವರ್ಯ ಹಾಗೂ ಸಮೃದ್ಧಿಯ ವೃದ್ಧಿಯಾಗುತ್ತದೆ. ಅಲ್ಲದೇ ದಿಕ್ಕು ಸಂಪತ್ತಿನ ಅಧಿಪತಿಯಾದ ಕುಬೇರನಿಗೆ ಸಂಬಂಧಿಸಿದ್ದಾಗಿರುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಅಲ್ಲದೇ ಉತ್ತರ ದಿಕ್ಕಿನಲ್ಲಿ ವಾಸ್ತುಸಮ್ಮತ ವಸ್ತುಗಳನ್ನು ಇಟ್ಟರೆ, ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿಯ ವಾತಾವರಣ ನಿರ್ಮಾಣವಾಗುತ್ತದೆ

ಅದೃಷ್ಟ ತರಲಿದೆ ಉತ್ತರ ದಿಕ್ಕಿನಲ್ಲಿ ಇಡುವ ಈ ವಸ್ತುಗಳು

ಮನೆ ವಾಸ್ತು -

Profile
Sushmitha Jain Jan 2, 2026 8:02 AM

ಬೆಂಗಳೂರು: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆಗಳನ್ನು ಅತ್ಯಂತ ಶುಭಕರ ಎಂಬ ನಂಬಿಕೆ ಇದ್ದು, ಇದು ಉತ್ತಮ ಆರೋಗ್ಯ ಹಾಗೂ ಮನಸ್ಸಿನ ನೆಮ್ಮದಿಗೆ ಸಹಕಾರಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ ಉತ್ತರ ದಿಕ್ಕು(Nort Direction) ಸಂಪತ್ತಿನ ಅಧಿಪತಿಯಾದ ಕುಬೇರ ದೇವನಿಗೆ ಸಮರ್ಪಿತವಾಗಿದ್ದು, ಕುಬೇರನು ಚಿನ್ನ, ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತ ಆಾಗಿರುವುದರಿಂದ, ಉತ್ತರಮುಖಿ ಮನೆಯನ್ನು ಹೊಂದುವುದರಿಂದ ಧನಸಂಪತ್ತಿ ವೃದ್ಧಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.

ಇದರೊಂದಿಗೆ ಉತ್ತರ ದಿಕ್ಕಿನಲ್ಲಿ ವಾಸ್ತು ಸಲಹೆ(Vastu Tips) ಪ್ರಕಾರ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಕುಬೇರ ದೇವನ ಅನುಗ್ರಹ ದೊರೆತು ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಯೂರಲಿದ್ದು, ಮನೆಯಲ್ಲಿ ಶುಭಫಲಗಳು, ಐಶ್ವರ್ಯ ಹಾಗೂ ಸಮೃದ್ಧಿಯ ವೃದ್ಧಿಯಾಗುತ್ತದೆ. ಅಲ್ಲದೇ ದಿಕ್ಕು ಸಂಪತ್ತಿನ ಅಧಿಪತಿಯಾದ ಕುಬೇರನಿಗೆ ಸಂಬಂಧಿಸಿದ್ದಾಗಿರುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಅಲ್ಲದೇ ಉತ್ತರ ದಿಕ್ಕಿನಲ್ಲಿ ವಾಸ್ತುಸಮ್ಮತ ವಸ್ತುಗಳನ್ನು ಇಟ್ಟರೆ, ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿಯ ವಾತಾವರಣ ನಿರ್ಮಾಣವಾಗುತ್ತದೆ ಮತ್ತು ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ಬನ್ನಿ ಜೀವನದಲ್ಲಿ ಸಮೃದ್ಧಿಯನ್ನು ಹೆಚ್ಚಿಸಲು ಉತ್ತರ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು..? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.


ಜಲಕ್ಕೆ ಸಂಬಂಧಪಟ್ಟ ವಸ್ತುಗಳು

ವಾಸ್ತು ಪ್ರಕಾರ ಉತ್ತರ ದಿಕ್ಕು ಜಲ ದೇವನ ದಿಕ್ಕು ಆಗಿದ್ದು, ಈ ದಿಕ್ಕಿನಲ್ಲಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಇಡುವುದು ಅತ್ಯಂತ ಮಂಗಳಕರ. ಮನೆಯ ಉತ್ತರ ಭಾಗದಲ್ಲಿ ಸಣ್ಣ ಕಾರಂಜಿ ಇಟ್ಟರೆ ಹಣದ ಹರಿವು ಹೆಚ್ಚಾಗಿ, ಧನಲಾಭಕ್ಕೆ ಸಹಕಾರಿ ಆಗುತ್ತದೆ. ಜೊತೆಗೆ ಸ್ವಚ್ಛವಾದ ನೀರು ತುಂಬಿದ ಹೂಜಿ ಅಥವಾ ಮಡಕೆಯನ್ನು ಇಡುವುದೂ ಶುಭಕರವಾಗಿದ್ದು, ಆದರೆ ನೀರನ್ನು ನಿಯಮಿತವಾಗಿ ಬದಲಾಯಿಸಿ ಸ್ವಚ್ಛತೆ ಕಾಪಾಡುವುದು ಅಗತ್ಯ.

Vastu tips: ಮಲಗುವ ಕೋಣೆಯಲ್ಲಿ ಈ ಒಂದು ಮೂರ್ತಿ ಇಟ್ಟರೆ ದಾಂಪತ್ಯ ಜೀವನ ಸುಖಕರವಾಗುತ್ತದೆ
ಅಕ್ವೇರಿಯಂ:

ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಮನೆಯ ಅಥವಾ ಕಚೇರಿಯ ಉತ್ತರ ದಿಕ್ಕಿನಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಅಂದರೆ ಈಶಾನ್ಯ ಮೂಲೆಯಲ್ಲಿ ಇಡಬಹುದು. ಮನೆಯ ಉತ್ತರ ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದು ಎನ್ನಲಾಗಿದೆ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಉತ್ತಮ ವಾತಾವರಣ ಉಂಟಾಗಲಿದೆ.

ಕುಬೇರ ಯಂತ್ರ ಅಥವಾ ವಿಗ್ರಹ:

ದೇವರು ಮತ್ತು ದೇವತೆಗಳ ನಿಧಿಪತಿಯಾದ ಕುಬೇರ ದೇವನನ್ನು ಪೂಜಿಸುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳು ದೂರಾಗುತ್ತದೆ. ಹಾಗೇ ಮನೆಯ ಉತ್ತರ ದಿಕ್ಕಿನಲ್ಲಿ ಕುಬೇರ ಯಂತ್ರವನ್ನು ಪ್ರತಿಷ್ಠಾಪಿಸುವುದರಿಂದ ಐಶ್ವರ್ಯ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ವಿಗ್ರಹವನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಆ ಮನೆಯು ಅದೃಷ್ಟವನ್ನು ಪಡೆದುಕೊಳ್ಳಲಿದ್ದು, ಮನೆಯಲ್ಲಿ ಸಂಪತ್ತಿನ ನಿರಂತರ ಹರಿವು ಉಂಟಾಗುತ್ತದೆ ಎಂಬ ನಂಬಿಕೆಯಿದೆ.

ಆಮೆ:

ವಾಸ್ತು ಶಾಸ್ತ್ರದ ಪ್ರಕಾರ ಆಮೆಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದ್ದು, ಸುಖ, ಸಮೃದ್ಧಿ, ಬಲವಾದ ಪರಿಸ್ಥಿತಿ ಮತ್ತು ಆರ್ಥಿಕ ಪ್ರಗತಿಯನ್ನು ನೀಡುವುದು. ಹಿತ್ತಾಳೆ ಅಥವಾ ಕಂಚಿನಿಂದ ಮಾಡಿದ ಲೋಹದ ಆಮೆಯನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಬಹಳ ಶುಭಕರವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ಸ್ಥಿರತೆ, ದೀರ್ಘಾಯುಷ್ಯ ಹಾಗೂ ಹೆಚ್ಚಿದ ಐಶ್ವರ್ಯವನ್ನು ತರುತ್ತದೆ ಎಂದು ನಂಬಲಾಗಿದೆ.