ಫೆ.19 ರಿಂದ ಮಿನಿ ವಿಶ್ವಕಪ್ ಹವಾ; ಚಾಂಪಿಯನ್‌ಗಳ ಪಟ್ಟಿ ಹೀಗಿದೆ
ICC Champions Trophy: ಭದ್ರತಾ ಕಾರಣದಿಂದ ಭಾರತ ತಂಡ ಪಾಕಿಸ್ತಾನಕ್ಕೆ ತೆರಳದ ಕಾರಣ ಟೂರ್ನಿಯನ್ನು ಹೈಬೀಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಭಾರತ ತನ್ನ ಪಾಲಿನ ಎಲ್ಲ ಪಂದ್ಯವನ್ನು ದುಬೈನಲ್ಲೇ ಆಡಲಿದೆ. ಹಿಂದಿನ 8 ಆವೃತಿಯ ಮಿನಿ ವಿಶ್ವಕಪ್ ಪಂದ್ಯಾವಳಿಯ ವಿಜೇತರ ಕುರಿತು ವರದಿ ಇಲ್ಲಿದೆ.


ಕರಾಚಿ: ಬರೋಬ್ಬರಿ 8 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ(ICC Champions Trophy) ಏಕದಿನ ಪಂದ್ಯಾವಳಿಯ ಗಂಟೆ ಪಾಕಿಸ್ತಾನ ಕರಾಚಿಯಲ್ಲಿ ಮೊಳಗಲಾರಂಭಿಸಿದೆ. ಬುಧವಾರದಿಂದಲೇ(ಫೆ.19) ಹಣಾಹಣಿ ಆರಂಭ. ದುಬೈ ಚರಣದ ಪಂದ್ಯಕ್ಕೆ ಗುರುವಾರ ಚಾಲನೆ ಸಿಗಲಿದೆ. ಭದ್ರತಾ ಕಾರಣದಿಂದ ಭಾರತ ತಂಡ ಪಾಕಿಸ್ತಾನಕ್ಕೆ ತೆರಳದ ಕಾರಣ ಟೂರ್ನಿಯನ್ನು ಹೈಬೀಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಭಾರತ ತನ್ನ ಪಾಲಿನ ಎಲ್ಲ ಪಂದ್ಯವನ್ನು ದುಬೈನಲ್ಲೇ ಆಡಲಿದೆ. ಹಿಂದಿನ 8 ಆವೃತಿಯ ಮಿನಿ ವಿಶ್ವಕಪ್ ಪಂದ್ಯಾವಳಿಯ ವಿಜೇತರ ಕುರಿತು ವರದಿ ಇಲ್ಲಿದೆ.
ಈ ಹಿಂದೆ ಟೂರ್ನಿ ನಡೆದಿದ್ದೆಲ್ಲಿ? ಚಾಂಪಿಯನ್ ಆಗಿದ್ದು ಯಾರು?
1998: ಬಾಂಗ್ಲಾದೇಶ(ಆತಿಥ್ಯ)
ತಂಡಗಳು: 09: ಪಂದ್ಯ: 08
ಚಾಂಪಿಯನ್: ದಕ್ಷಿಣ ಆಫ್ರಿಕಾ
ರನ್ನರ್-ಅಪ್: ವೆಸ್ಟ್‌ಇಂಡೀಸ್

2000: ಕೀನ್ಯಾ(ಆತಿಥ್ಯ)
ತಂಡಗಳು: 11. ಪಂದ್ಯ: 10
ಚಾಂಪಿಯನ್: ನ್ಯೂಜಿಲೆಂಡ್
ರನ್ನರ್-ಅಪ್: ಭಾರತ

2002: ಶ್ರೀಲಂಕಾ(ಆತಿಥ್ಯ)
ತಂಡಗಳು: 12. ಪಂದ್ಯ: 15
ಚಾಂಪಿಯನ್: ಭಾರತ-ಶ್ರೀಲಂಕಾ(ಜಂಟಿ ವಿಜೇತರು)

2004: ಇಂಗ್ಲೆಂಡ್(ಆತಿಥ್ಯ)
ತಂಡಗಳು: 12. ಪಂದ್ಯ: 15
ಚಾಂಪಿಯನ್: ವೆಸ್ಟ್‌ಇಂಡೀಸ್
ರನ್ನರ್-ಅಪ್: ಇಂಗ್ಲೆಂಡ್

2006: ಭಾರತ(ಆತಿಥ್ಯ)
ತಂಡಗಳು: 10. ಪಂದ್ಯ: 21
ಚಾಂಪಿಯನ್: ಆಸ್ಟ್ರೇಲಿಯಾ
ರನ್ನರ್-ಅಪ್: ವೆಸ್ಟ್‌ಇಂಡೀಸ್

2009: ದಕ್ಷಿಣ ಆಫ್ರಿಕಾ (ಆತಿಥ್ಯ)
ತಂಡಗಳು: 08. ಪಂದ್ಯ: 15
ಚಾಂಪಿಯನ್: ಆಸ್ಟ್ರೇಲಿಯಾ
ರನ್ನರ್-ಅಪ್: ನ್ಯೂಜಿಲೆಂಡ್

2013: ಇಂಗ್ಲೆಂಡ್ (ಆತಿಥ್ಯ)
ತಂಡಗಳು: 08. ಪಂದ್ಯ: 15
ಚಾಂಪಿಯನ್: ಭಾರತ
ರನ್ನರ್-ಅಪ್: ಇಂಗ್ಲೆಂಡ್

2017: ಇಂಗ್ಲೆಂಡ್ (ಆತಿಥ್ಯ)
ತಂಡಗಳು: 08. ಪಂದ್ಯ: 15
ಚಾಂಪಿಯನ್: ಪಾಕಿಸ್ತಾನ
ರನ್ನರ್-ಅಪ್: ಭಾರತ
