ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಐಪಿಎಲ್‌ ಆರಂಭಕ್ಕೂ ಮುನ್ನ ಅಕ್ಷರ್‌ ಪಟೇಲ್‌ಗೆ ಎಚ್ಚರಿಕೆ ನೀಡಿದ ಚೇತೇಶ್ವರ್‌ ಪೂಜಾರ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ಗೆ ಮಾಜಿ ಕ್ರಿಕೆಟಿಗ ಚೇತೇಶ್ವರ್‌ ಪೂಜಾರ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸೀಸನ್‌ನಲ್ಲಿ ಅಕ್ಷರ್‌ ಪಟೇಲ್‌ ಅವರು ಸ್ವಲ್ಪ ಎಚ್ಚರಿಕೆಯಿಂದ ತಂಡವನ್ನು ಮುನ್ನಡೆಸಬೇಕೆಂದು ಎಂದು ಸಲಹೆ ಕೊಟ್ಟಿದ್ದಾರೆ.

IPL 2026: ಅಕ್ಷರ್‌ ಪಟೇಲ್‌ಗೆ ಎಚ್ಚರಿಕೆ ನೀಡಿದ ಚೇತೇಶ್ವರ್‌ ಪೂಜಾರ!

ಅಕ್ಷರ್‌ ಪಟೇಲ್‌ಗೆ ಚೇತೇಶ್ವರ್‌ ಪೂಜಾರ ಎಚ್ಚರಿಕೆ. -

Profile
Ramesh Kote Mar 18, 2026 4:46 PM

ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi capitals) ತಂಡವನ್ನು ಮುನ್ನಡೆಸುವಾಗ ಅಕ್ಷರ್‌ ಪಟೇಲ್‌ (Axar Patel) ಅವರು ಸ್ವಲ್ಪ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ (Cheteshwar Pujara) ಸಲಹೆ ನೀಡಿದ್ದಾರೆ. ಕಳೆದ 2025ರ ಐಪಿಎಲ್‌ ಟೂರ್ನಿಯ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅಕ್ಷರ್‌ ಅತ್ಯುತ್ತಮವಾಗಿ ಮುನ್ನಡೆಸಿದ್ದರು ಹಾಗೂ ಆರಂಭಿಕ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭರ್ಜರಿ ಆರಂಭವನ್ನು ಕಂಡಿತ್ತು. ಆದರೂ ಎರಡನೇ ಅವಧಿಯಲ್ಲಿ ಅದೇ ಲಯವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು.

ಮೊದಲ ಅವಧಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಎರಡನೇ ಅವಧಿಯಲ್ಲಿ ಸಂಪೂರ್ಣವಾಗಿ ವಿಫಲವಾಯತು. ಅಂತಿಮವಾಗಿ 15 ಅಂಕಗಳನ್ನು ಕಲೆ ಹಾಕಿದರೂ ಡೆಲ್ಲಿ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಚೇತೇಶ್ವರ್‌ ಪೂಜಾರ, ಅಕ್ಷರ್‌ ಪಟೇಲ್‌ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು ಹಾಗೂ ತಂಡದ ಆವೇಗ ಕಳೆದುಕೊಳ್ಳದಂತೆ ಹಾಗೂ ವಿಷಯಗಳು ಕೈಹಿಂದೆ ಹೊರ ಹೋಗದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಪೂಜಾರ ಸಲಹೆ ನೀಡಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಕೆಎಲ್‌ ರಾಹುಲ್‌ಗೆ ದೊಡ್ಡ ಜವಾಬ್ದಾರಿ!

“ಅಕ್ಷರ್ ಪಟೇಲ್ ತುಂಬಾ ಶಾಂತ ಸ್ವಭಾವದ ನಾಯಕ. ಅವರು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ವಿಶೇಷವಾಗಿ ಐಪಿಎಲ್‌ನಂತಹ ಒತ್ತಡಭರಿತ ಟೂರ್ನಿಯಲ್ಲಿ ಅವರ ವ್ಯಕ್ತಿತ್ವ ಉತ್ತಮವಾಗಿದೆ. ಅವರು ತಮ್ಮ ಆಟಗಾರರಿಗೆ ಬೆಂಬಲ ನೀಡುತ್ತಾರೆ. ಆದರೆ ಅವರು ಹೆಚ್ಚು ರಿಲ್ಯಾಕ್ಸ್ ಆಗದಂತೆ ಎಚ್ಚರಿಕೆಯಿಂದ ಇರಬೇಕು. ಅತಿಯಾದ ಕ್ಯಾಷುವಲ್ ಆಗಬಾರದು, ಇಲ್ಲವಾದರೆ ತಂಡದ ಗೆಲುವಿನ ಲಯ ಕೈತಪ್ಪಬಹುದು. ಕಳೆದ ಸೀಸನ್‌ನಲ್ಲಿ ಡಿಸಿ ಉತ್ತಮ ಲಯವನ್ನು ಹೊಂದಿತ್ತು, ಆದರೆ ಅದನ್ನು ಕಳೆದುಕೊಂಡಿತು. ಈ ಸೀಸನ್‌ನಲ್ಲಿ ಅವರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು,” ಎಂದು ಪೂಜಾರ ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಪಾತ್ರದ ಬಗ್ಗೆ ಕೋಚ್ ಮಹತ್ವದ ಹೇಳಿಕೆ

ಅಕ್ಷರ್‌ ಪಟೇಲ್‌ ಬೌಲಿಂಗ್‌ನಲ್ಲಿ ಕಮ್‌ಬ್ಯಾಕ್‌ ಮಾಡಿದ್ದಾರೆ: ಮೊಹಮ್ಮದ್‌ ಕೈಫ್

ಅಕ್ಷರ್‌ ಪಟೇಲ್‌ ಅವರಿಗೆ 2025ರ ಐಪಿಎಲ್‌ ಸೀಸನ್‌ನಲ್ಲಿ ಬೌಲಿಂಗ್‌ನಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ಅವರು 12 ಪಂದ್ಯಗಳಲ್ಲಿ ಕೇವಲ 5 ವಿಕೆಟ್‌ಗಳನ್ನು ಪಡೆದು, 57.60ರ ಸರಾಸರಿ ಮತ್ತು 8.47ರ ಎಕಾನಮಿ ರೇಟ್‌ನೊಂದಿಗೆ ಸಾಧಾರಣ ಪ್ರದರ್ಶನ ತೋರಿದ್ದರು. ಇದರ ಹೊರತಾಗಿಯೂ ಮೊಹಮ್ಮದ್ ಕೈಫ್‌ ಅವರು ಡಿಸಿ ನಾಯಕ ಈ ಸೀಸನ್‌ನಲ್ಲಿ ಬೌಲಿಂಗ್‌ನಲ್ಲಿ ಮತ್ತೆ ಕಮ್‌ಬ್ಯಾಕ್‌ ಮಾಡಲಿದ್ದಾರೆಂಬ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಸೀಸನ್‌ನಲ್ಲಿ ಅಕ್ಷರ್‌ ಪಟೇಲ್‌ ಹೊಸ ಚೆಂಡಿನಲ್ಲಿ ಬೌಲ್‌ ಮಾಡಬೇಕು ಹಾಗೂ ವಿಪ್ರಜ್‌ ನಿಗಮ್‌ ಹಾಗೂ ಕುಲ್ದೀಪ್‌ ಯಾದವ್‌ ಇಬ್ಬರಿಗೂ ಆಡಲು ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.

ಆರ್​ಸಿಬಿ ಖರೀದಿಗೆ ಅಂತಿಮ ಸುತ್ತಿನಲ್ಲಿ 2 ಕಂಪನಿಗಳ ನಡುವೆ ಪೈಪೋಟಿ!

“ಅಕ್ಷರ್‌ ಪಟೇಲ್ ಪವರ್‌ಪ್ಲೇನಲ್ಲಿ ಹೊಸ ಚೆಂಡಿನಿಂದ ಬೌಲ್‌ ಮಾಡಬಹುದು. ಆದರೆ ಕಳೆದ ವರ್ಷ ಸಮಸ್ಯೆ ಏನೆಂದರೆ, ರನ್‌ಗಳನ್ನು ಉಳಿಸಲು ಅವರ ಬಳಿ ಸಾಕಷ್ಟು ಸ್ಕೋರ್ ಇರಲಿಲ್ಲ, ಅದರಿಂದಲೇ ಅವರು ಕಡಿಮೆ ವಿಕೆಟ್‌ಗಳನ್ನು ಪಡೆದಿದ್ದರು. ಈ ಬಾರಿ ಕೂಡ ಅವರು ಹೊಸ ಚೆಂಡಿನಿಂದ ಬೌಲ್‌ ಮಾಡುತ್ತಾರೆ. ಇದರ ಜೊತೆಗೆ ಕುಲ್ದೀಪ್‌ ಯಾದವ್‌ ಮತ್ತು ವಿಪ್ರಝ್‌ ನಿಗಮ್‌ ಕೂಡ ಇದ್ದಾರೆ, ಆದ್ದರಿಂದ ಅದರಲ್ಲಿ ನನಗೆ ಯಾವುದೇ ಚಿಂತೆ ಇಲ್ಲ. ಕಳೆದ ಸೀಸನ್ ಉತ್ತಮವಾಗಿರಲಿಲ್ಲ, ಆದರೆ ಈ ಬಾರಿ ಅವರು ಬಲವಾಗಿ ಕಮ್‌ಬ್ಯಾಕ್ ಮಾಡುತ್ತಾರೆ,” ಎಂದು ಮೊಹಮ್ಮದ್‌ ಕೈಫ್ ತಿಳಿಸಿದ್ದಾರೆ.