ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

PAK vs NZ: ನಿಧಾನಗತಿಯ ಅರ್ಧಶತಕ ಸಿಡಿಸಿದ ಬಾಬರ್‌ ಆಝಮ್‌ ವಿರುದ್ದ ಫ್ಯಾನ್ಸ್‌ ಗರಂ!

Fans Slams Babar Azam: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ, ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಪಾಕಿಸ್ತಾನ ಕ್ರಿಕೆಟ್ ತಂಡದ ಈ ಸೋಲಿನಲ್ಲಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ನಿರಾಶಾದಾಯಕ ಪ್ರದರ್ಶನ ತೋರಿದರು. ವಿಶೇಷವಾಗಿ ಮಾಜಿ ನಾಯಕ ಬಾಬರ್‌ ಆಝಮ್‌ ಅವರ ನಿಧಾನಗತಿಯ ಅರ್ಧಶತಕ ಪಾಕಿಸ್ತಾನ ತಂಡಕ್ಕೆ ದುಬಾರಿಯಾಯಿತು.

ʻನಿಮ್ಮಿಂದ ಪಾಕಿಸ್ತಾನ ಸೋತಿದೆʼ: ಬಾಬರ್‌ ಆಝಮ್‌ ವಿರುದ್ದ ಫ್ಯಾನ್ಸ್‌ ಕಿಡಿ!

ಬಾಬರ್‌ ಆಝಮ್‌ ವಿರುದ್ದ ಫ್ಯಾನ್ಸ್‌ ಕಿಡಿ

Profile Ramesh Kote Feb 20, 2025 12:27 AM

ಕರಾಚಿ: ನ್ಯೂಜಿಲೆಂಡ್‌ ವಿರುದ್ಧ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಂಡ 60 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪರ ನಿಧಾನಗತಿಯ ಅರ್ಧಶತಕ ಗಳಿಸಿದ ಬಾಬರ್‌ ಆಝಮ್‌ ವಿರುದ್ದ ಅಭಿಮಾನಿಗಳು ಕಟುವಾಗಿ ಟೀಕಿಸಿದ್ದಾರೆ. ನಿಮ್ಮಿಂದಲೇ ಮೊಹಮ್ಮದ್‌ ರಿಝ್ವಾನ್‌ ಮತ್ತು ಫಖಾರ್‌ ಝಮಾನ್‌ ವಿಕೆಟ್‌ ಒಪ್ಪಿಸಬೇಕಾಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಪಂದ್ಯದಲ್ಲಿ, ಪಾಕಿಸ್ತಾನ ನಾಯಕ ಮೊಹಮ್ಮದ್ ರಿಝ್ವಾನ್ ಟಾಸ್ ಗೆದ್ದ ನಂತರ ಮೊದಲು ಬೌಲ್‌ ಮಾಡಲು ನಿರ್ಧರಿಸಿದರು, ಆದರೆ ಅದು ಅವರಿಗೆ ದುಬಾರಿಯಾಯಿತು. ಪಾಕಿಸ್ತಾನದ ಬೌಲರ್‌ಗಳು 50 ಓವರ್‌ಗಳಲ್ಲಿ 320 ರನ್‌ಗಳನ್ನು ಬಿಟ್ಟುಕೊಟ್ಟರು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಪಾಕಿಸ್ತಾನ ತಂಡವು ಸುಲಭವಾಗಿ ರನ್‌ಗಳನ್ನು ಬೆನ್ನಟ್ಟುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ.

PAK vs NZ: ಯಂಗ್-ಲೇಥಮ್‌ ಶತಕ, ಪಾಕಿಸ್ತಾನಕ್ಕೆ ಸೋಲಿನ ಬರೆ ಎಳೆದ ನ್ಯೂಜಿಲೆಂಡ್‌!

ಅದರಲ್ಲೂ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತೀವ್ರ ನಿರಾಶೆ ಮೂಡಿಸಿದರು. ಪಾಕಿಸ್ತಾನ ಪರ ಮಾಜಿ ನಾಯಕ ಬಾಬರ್ ಆಝಮ್ 64 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಈ ಇನಿಂಗ್ಸ್‌ನಲ್ಲಿ ಅವರು ಒಟ್ಟು 90 ಎಸೆತಗಳನ್ನು ಆಡಿದರು. ಇದು ಬಾಬರ್ ಆಝಮ್ ಅವರ ಏಕದಿನ ಪಂದ್ಯಗಳಲ್ಲಿ ಅತ್ಯಂತ ನಿಧಾನಗತಿಯ ಅರ್ಧಶತಕಗಳಲ್ಲಿ ಒಂದಾಗಿದೆ. ಬಾಬರ್ ತಮ್ಮ ಇನಿಂಗ್ಸ್‌ನಲ್ಲಿ 6 ಬೌಂಡರಿಗಳು ಮತ್ತು ಕೇವಲ ಒಂದು ಸಿಕ್ಸರ್ ಬಾರಿಸಿದರು. ಈ ನಿಧಾನಗತಿಯ ಇನಿಂಗ್ಸ್‌ಗೆ ಪಾಕಿಸ್ತಾನ ದುಬಾರಿ ಬೆಲೆ ತೆರಬೇಕಾಯಿತು ಮತ್ತು ಮೊದಲ ಪಂದ್ಯದಲ್ಲೇ ಸೋಲನ್ನು ಎದುರಿಸಬೇಕಾಯಿತು.



ನಿಧಾನಗತಿಯ ಬ್ಯಾಟಿಂಗ್‌ ಪ್ರದರ್ಶನ ತೋರಿದ ಬಾಬರ್‌ ಆಝಮ್‌ ವಿರುದ್ದ ಅಭಿಮಾನಿಗಳು ಕಿಡಿಕಾರಿಸಿದ್ದಾರೆ. ನಿಮ್ಮ ನಿಧಾನಗತಿಯ ಇನಿಂಗ್ಸ್‌ನಿಂದಾಗಿ ಮೊಹಮ್ಮದ್‌ ರಿಝ್ವಾನ್‌ ಮತ್ತು ಫಖಾರ್‌ ಝಮಾನ್‌ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿ ವಿಕೆಟ್‌ ಒಪ್ಪಿಸಿದ್ದಾರೆಂದು ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೀವು ನಂಬರ್‌ 1 ಬ್ಯಾಟ್ಸ್‌ಮನ್‌ ಅಲ್ಲವೇ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.



ಶತಕ ಬಾರಿಸಿದ ಟಾಮ್‌ ಲೇಥಮ್‌

ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ವಿಶೇಷವಾಗಿ ಟಾಮ್ ಲೇಥಮ್ ಮತ್ತು ವಿಲ್ ಯಂಗ್ ಅದ್ಭುತವಾಗಿ ಆಡಿದರು ಮತ್ತು ತಮ್ಮ ಶತಕಗಳನ್ನು ಪೂರ್ಣಗೊಳಿಸಿದರು. ಕಿವೀಸ್ ತಂಡದ ಪರ ಟಾಮ್ ಲೇಥಮ್ ಅಜೇಯ 118 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ 104 ಎಸೆತಗಳನ್ನು ಎದುರಿಸಿದರು, ಇದರಲ್ಲಿ 10 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿವೆ. ಚಾಂಪಿಯನ್ಸ್ ಟ್ರೋಫಿಗೆ ಮೊದಲು ನ್ಯೂಜಿಲೆಂಡ್ ಆಟಗಾರ ಕೆಟ್ಟ ಫಾರ್ಮ್ ಎದುರಿಸುತ್ತಿದ್ದರು, ಆದರೆ ಲೇಥಮ್ ಸರಿಯಾದ ಸಮಯದಲ್ಲಿ ತಮ್ಮ ಫಾರ್ಮ್‌ಗೆ ಮರಳಿದ್ದಾರೆ.



ಇದಲ್ಲದೆ, ವಿಲ್ ಯಂಗ್ ಆರಂಭಿಕನಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಮತ್ತು ತಂಡಕ್ಕಾಗಿ 113 ಎಸೆತಗಳಲ್ಲಿ 107 ರನ್‌ಗಳ ಇನಿಂಗ್ಸ್‌ ಅನ್ನು ಆಡಿದರು. ವಿಲ್ ಯಂಗ್ ಅವರ ಇನಿಂಗ್ಸ್‌ನಲ್ಲಿ 12 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಮೂಡಿಬಂದಿದೆ. ಪಾಕಿಸ್ತಾನದ ಬೌಲಿಂಗ್ ಬಗ್ಗೆ ಹೇಳುವುದಾದರೆ, ಹ್ಯಾರಿಸ್ ರೌಫ್ ಅತ್ಯಂತ ದುಬಾರಿ ಬೌಲರ್ ಆದರು, ಅವರು 10 ಓವರ್‌ಗಳಲ್ಲಿ 83 ರನ್‌ಗಳನ್ನು ನೀಡಿದರು.