ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

IND vs AUS: ಮೊದಲನೇ ಸೆಮಿಫೈನಲ್‌ಗೆ ಟರ್ನಿಂಗ್‌ ಪಾಯಿಂಟ್‌ ತಿಳಿಸಿದ ರಾಬಿನ್‌ ಉತ್ತಪ್ಪ!

Rabin Uthappa on Alex Carey's Runout: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಮೊದಲನೇ ಸೆಮಿಫೈನಲ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಯಾವುದೆಂದು ಮಾಜಿ ಆರಂಭಿಕ ರಾಬಿನ್‌ ಉತ್ತಪ್ಪ ವಿವರಿಸಿದ್ದಾರೆ. ಅಲೆಕ್ಸ್‌ ಕೇರಿ ಅವರನ್ನು ಶ್ರೇಯಸ್‌ ಅಯ್ಯರ್‌ ರನ್‌ಔಟ್‌ ಮಾಡಿದ್ದು ಪಂದ್ಯಕ್ಕೆ ತಿರುವು ತಂದಿದೆ ಎಂದು ಹೇಳಿದ್ದಾರೆ.

ಅಲೆಕ್ಸ್‌ ಕೇರಿ ರನ್‌ಔಟ್‌ ಆಗಿದ್ದು ಟರ್ನಿಂಗ್‌ ಪಾಯಿಂಟ್‌: ಉತ್ತಪ್ಪ!

ಅಲೆಕ್ಸ್‌ ಕೇರಿಯನ್ನು ರನ್‌ಔಟ್‌ ಮಾಡಿದ ಶ್ರೇಯಸ್‌ ಅಯ್ಯರ್‌!

Profile Ramesh Kote Mar 4, 2025 8:11 PM

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಯಾವುದೆಂದು ಟೀಮ್‌ ಇಂಡಿಯಾದ ಮಾಜಿ ಆರಂಭಿಕ ರಾಬಿನ್‌ ಉತ್ತಪ್ಪ ಬಹಿರಂಗಪಡಿಸಿದ್ದಾರೆ. ಅರ್ಧಶತಕ ಸಿಡಿಸಿ ಆಡುತ್ತಿದ್ದ ಅಲೆಕ್ಸ್‌ ಕೇರಿಯನ್ನು ಶ್ರೇಯಸ್‌ ಅಯ್ಯರ್‌ ರನ್‌ಔಟ್‌ ಮಾಡಿದ್ದು, ಈ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಎಂದು ಕ್ರಿಕೆಟ್‌ ವಿಶ್ಲೇಷಕ ತಿಳಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ, 49.3 ಓವರ್‌ಗಳಿಗೆ 264 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆಸ್ಟ್ರೇಲಿಯಾ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ಅಲೆಕ್ಸ್‌ ಕೇರಿ 57 ಎಸೆತಗಳಲ್ಲಿ 61 ರನ್‌ಗಳನ್ನು ಗಳಿಸಿದರು. ಇದಕ್ಕೂ ಮುನ್ನ ಸ್ಟೀವನ್‌ ಸ್ಮಿತ್‌ 96 ಎಸೆತಗಳಲ್ಲಿ 73 ರನ್‌ಗಳನ್ನು ಕಲೆ ಹಾಕಿದ್ದರು. ಅಂದ ಹಾಗೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅಲೆಕ್ಸ್‌ ಕೇರಿ, ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು.

IND vs AUS: ರಾಹುಲ್‌ ದ್ರಾವಿಡ್‌ರ ದೀರ್ಘಾವಧಿ ಕ್ಯಾಚ್‌ಗಳ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

61 ರನ್‌ ಗಳಿಸಿ ಆಡುತ್ತಿದ್ದ ವೇಳೆ 48ನೇ ಓವರ್‌ನ ಮೊದಲನೇ ಎಸೆತದಲ್ಲಿ ರನ್‌ ಕದಿಯಲು ಹೋಗಿ ರನ್‌ ಔಟ್‌ ಆದರು. ಶ್ರೇಯಸ್‌ ಅಯ್ಯರ್‌ ಅವರು ಅದ್ಭುತವಾಗಿ ಕೇರಿಯನ್ನು ರನ್‌ಔಟ್‌ ಮಾಡಿದ್ದರು. ಒಂದು ವೇಳೆ ಅಲೆಕ್ಸ್‌ ಕೇರಿ ಕೊನೆಯವರೆಗೂ ಆಡಿದ್ದರೆ, ಆಸ್ಟ್ರೇಲಿಯಾದ ಮೊತ್ತ 300ರ ಸನಿಹ ಬರುತ್ತಿತ್ತು. ಆದರೆ, ಶ್ರೇಯಸ್‌ ಅಯ್ಯರ್‌ ಅವರು ಮಾಡಿದ ರನ್‌ಔಟ್‌ ಇನ್ನೂ 20 ರನ್‌ಗಳನ್ನು ಕಡಿಮೆಗೊಳಿಸಿತು.

ಶ್ರೇಯಸ್‌ ಅಯ್ಯರ್‌ ಮಾಡಿದ ರನ್‌ಔಟ್‌ ಟರ್ನಿಂಗ್‌ ಪಾಯಿಂಟ್‌

ಇನಿಂಗ್ಸ್‌ ಬ್ರೇಕ್‌ ವೇಳೆ ಮಾತನಾಡಿದ ರಾಬಿನ್‌ ಉತ್ತಪ್ಪ, ಕಳೆದ ಪಂದ್ಯಕ್ಕೆ ಉಪಯೋಗಿಸಿದ್ದ ಪಿಚ್‌ಗಿಂತ ಈ ವಿಕೆಟ್‌ ಉತ್ತಮವಾಗಿದೆ. 280 ರನ್‌ಗಳನ್ನು ಹೊಡೆದರೆ ಈ ಮೈದಾನಕ್ಕೆ ಸೂಕ್ತವಾಗುತ್ತದೆ. ಆದರೆ, ಶ್ರೇಯಸ್‌ ಅಯ್ಯರ್‌ ರನ್‌ ಔಟ್‌ ಮಾಡಿದ್ದರಿಂದ 15-16 ರನ್‌ಗಳಿಗೆ ಕಡಿವಾಣ ಬಿದ್ದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs AUS: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ

"280 ರನ್‌ಗಳು ಈ ಪಿಚ್‌ನಲ್ಲಿ ಅತ್ಯುತ್ತಮ ಮೊತ್ತ ಎಂದು ನಾನು ಪಂದ್ಯಕ್ಕೂ ಮುನ್ನ ತಿಳಿಸಿದ್ದೆ. ಕಳೆದ 10 ದಿನಗಳಿಂದ ನಾವು ನೋಡಿದ್ದ ಪಿಚ್‌ಗಳಿಗಿಂತ ಇಂದಿನ (ಮಂಗಳವಾರ) ಪಿಚ್‌ ಸ್ವಲ್ಪ ಚೆನ್ನಾಗಿ ಕಾಣುತ್ತಿದೆ. ಈ ವಿಕೆಟ್‌ನಲ್ಲಿ 280 ರನ್‌ಗಳು ಉತ್ತಮ ಮೊತ್ತವಾಗಿ ಹಾಗೂ ಇದು ಮ್ಯಾಚ್‌ ವಿನ್ನಿಂಗ್‌ ಮೊತ್ತ ಇದಾಗಿದೆ. ಆದರೆ, ಶ್ರೇಯಸ್‌ ಅಯ್ಯರ್‌ ಮಾಡಿದ ರನ್‌ಔಟ್‌ 15-16 ರನ್‌ಗಳನ್ನು ಉಳಿಸಿದೆ. ಭಾರತ ತಂಡ ಚೇಸ್‌ ಮಾಡುವಾಗ ಇದು ನೆರವಾಗಲಿದೆ," ಎಂದು ರಾಬಿನ್‌ ಉತ್ತಪ್ಪ ತಿಳಿಸಿದ್ದಾರೆ.



ಉತ್ತಮ ಹೇಳಿಕೆಯನ್ನು ಬೆಂಬಲಿಸಿದ ಪಠಾಣ್‌

ರಾಬಿನ್‌ ಉತ್ತಪ್ಪ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ರನ್‌ಔಟ್‌ ಮಾಡಿದ್ದು, ಪಂದ್ಯದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.



"ಶ್ರೇಯಸ್‌ ಅಯ್ಯರ್‌ ನೇರವಾಗಿ ಸ್ಟಂಪ್‌ಗೆ ಚೆಂಡನ್ನು ಎಸೆದು ಅಲೆಕ್ಸ್‌ ಕೇರಿ ಅವರನ್ನು ರನ್‌ಔಟ್‌ ಮಾಡಿದರು. ಈ ಪಂದ್ಯದಲ್ಲಿ ಇದು ಅತ್ಯಂತ ನಿರ್ಣಾಯಕ ಹಂತವಾಗಿದೆ. ಏಕೆಂದರೆ ಅವರು ತುಂಬಾ ಚೆನ್ನಾಗಿ ಬ್ಯಾಟ್‌ ಮಾಡುತ್ತಿದ್ದರು," ಎಂದು ಇರ್ಫಾನ್‌ ಪಠಾಣ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.