IND vs ENG: ಅಭಿಷೇಕ್ ಶರ್ಮಾಗೆ ಗಾಯ, ಎರಡನೇ ಟಿ20ಐಗೂ ಮುನ್ನ ಭಾರತಕ್ಕೆ ಗಾಯದ ಭೀತಿ!
Abhishek Sharmaʼs injury scare: ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಐ ಪಂದ್ಯದ ನಿಮಿತ್ತ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾಗೆ ಗಾಯದ ಭೀತಿ ಎದುರಾಗಿದೆ.

Abhishek Sharma injury

ಚೆನ್ನೈ: ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ ಉಂಟಾಗಿದೆ. ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಟ್ರೈನಿಂಗ್ ಸೆಷನ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಪಾದ ಉಳುಕಿದೆ. ಕ್ಯಾಚಿಂಗ್ ಅಭ್ಯಾಸದ ವೇಳೆ ಎಡಗೈ ಆಟಗಾರನ ಪಾದ ಉಳುಕಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅವರು ಪಾದ ಉಳುಕಿದ ತಕ್ಷಣ ತಂಡದ ಫಿಸಿಯೊಥೆರಪಿಸ್ಟ್ ಆಗಮಿಸಿದರು. ಈ ವೇಳೆ ನೋವು ಅನುಭವಿಸಿದ್ದ ಅಭಿಷೇಕ್ ಶರ್ಮಾ ಫಿಸಿಯೊ ಸಹಾಯದಿಂದ
ಡ್ರೆಸ್ಸಿಂಗ್ ರೂಂಗೆ ಹಿಂತಿರುಗಿದ್ದರು. ನಂತರ ಅವರು ಮೈದಾನಕ್ಕೆ ಮರಳಲಿಲ್ಲ. 24ರ ವಯಸ್ಸಿನ ಬ್ಯಾಟ್ಸ್‌ಮನ್ 30 ನಿಮಿಷಗಳ ಕಾಲ ಫಿಸಿಯೊ ಅವರ ಸಮಯ ಕಳೆದಿದ್ದರು ಎಂದು ವರದಿಯಾಗಿದೆ.
IND vs ENG: ಎರಡನೇ ಟಿ20ಐಗೆ ಇಂಗ್ಲೆಂಡ್ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ!
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಜನರಿವ 22 ರಂದು ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ನಡೆಸಿ 79 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಭಾರತ ತಂಡದ 7 ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದ್ದರು. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ20 ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾಗೆ ಆರಂಭಿಕ ಸ್ಥಾನವನ್ನು ನಿಯಮಿತವಾಗಿ ನೀಡಲಾಗುತ್ತಿದೆ. ಅಭೀಷೇಕ್ ಶರ್ಮಾ ಆರಂಭಿಕ ಪಂದ್ಯದಲ್ಲಿ 230ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಸಿಡಿಸಿದ್ದರೆ, ಸಂಜು ಸ್ಯಾಮ್ಸನ್ ಕಳೆದ ಆರು ಇನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ.
Ind vs Eng 2nd T20I: ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ ಹೀಗಿದೆ
ತಿಲಕ್ ವರ್ಮಾ ಓಪನರ್?
ಒಂದು ವೇಳೆ ಎರಡನೇ ಟಿ20ಐ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಅಲಭ್ಯರಾದರೆ, ವಾಷಿಂಗ್ಟನ್ ಸುಂದರ್ ಅಥವಾ ಧ್ರುವ್ ಜುರೆಲ್ ಅವರು ಪ್ಲೇಯಿಂಗ್ XIಗೆ ಮರಳುವ ಸಾಧ್ಯತೆ ಇದೆ. ಇದು ನಡೆದರೆ, ತಿಲಕ್ ವರ್ಮಾ ಅವರು ಸಂಜು ಸ್ಯಾಮ್ಸನ್ ಅವರ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಮೊದಲನೇ ಪಂದ್ಯದ ಗೆಲುವಿನ ಮೂಲಕ ಭಾರತ ತಂಡ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
ನೆಟ್ಸ್‌ನಲ್ಲಿ ಬೌಲ್ ಮಾಡಿದ ಮೊಹಮ್ಮದ್ ಶಮಿ
ಮತ್ತೊಂದು ಕಡೆ ಮೊದಲನೇ ಟಿ20ಐ ಪಂದ್ಯಕ್ಕೆ ಅಲಭ್ಯರಾಗಿದ್ದ ಹಿರಿಯ ವೇಗಿ ಮೊಹಮ್ಮದ್ ಶಮಿ, ಅವರು ತಂಡದ ಜೊತೆ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಅವರು ತಮ್ಮ ಲಯವನ್ನು ಕಂಡುಕೊಳ್ಳಲು ಕಠಿಣ ತಾಲೀಮು ನಡೆಸುತ್ತಿದ್ದಾರೆ. ನೆಟ್ಸ್‌ನಲ್ಲಿ ಬೌಲ್ ಮಾಡುವುದಕ್ಕೂ ಮುನ್ನ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು, ಶಮಿಗೆ ಥ್ರೋಯಿಂಗ್ ಡ್ರಿಲ್ಸ್ ಕೊಟ್ಟಿದ್ದರು. ಕಳೆದ ಪಂದ್ಯದಲ್ಲಿ ವಿಶೇಷ ವೇಗದ ಬೌಲರ್ ಆಗಿ ಅರ್ಷದೀಪ್ ಸಿಂಗ್ ಮಾತ್ರ ಆಡಿದ್ದರು.