IND vs ENG: ಎರಡನೇ ಟಿ20ಐಗೆ ಇಂಗ್ಲೆಂಡ್ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ!
England Playing XI: ಶನಿವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ನಡೆಯುವ ಎರಡನೇ ಟಿ20ಐ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ ಪ್ಲೇಯಿಂಗ್ XI ಅನ್ನು ಪ್ರಕಟಿಸಿದೆ. ಜೋಸ್ ಬಟ್ಲರ್ ನಾಯಕತ್ವದ ಪ್ರವಾಸಿ ತಂಡ, ಎರಡನೇ ಪಂದ್ಯಕ್ಕೆ ಒಂದು ಬದಲಾವಣೆಯನ್ನು ಮಾಡಿಕೊಂಡಿದೆ.
ಚೆನ್ನೈ: ಭಾರತದ ವಿರುದ್ಧ ಶನಿವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಟಿ20ಐ ಪಂದ್ಯಕ್ಕೆ (IND vs ENG 2nd T20I) ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI (England Playing XI) ಪ್ರಕಟವಾಗಿದೆ. ಪ್ರವಾಸಿ ತಂಡದ ಆಡುವ ಬಳಗದಲ್ಲಿ ಒಂದು ಬದಲಾವಣೆಯನ್ನು ತರಲಾಗಿದ್ದು, ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಗಸ್ ಅಟ್ಕಿನ್ಸನ್ ಅವರ ಸ್ಥಾನಕ್ಕೆ ಬ್ರೈಡನ್ ಕಾರ್ಸ್ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಜೇಮಿ ಸ್ಮಿತ್ 12 ಆಟಗಾರರ ತಂಡಕ್ಕೆ ಸೇರ್ಪಡಯಾಗಿದ್ದಾರೆ.
ಜನವರಿ 22 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ ಬೌಲ್ ಮಾಡಿದ್ದ ಕೇವಲ ಎರಡು ಓವರ್‌ಗಳಲ್ಲಿ ಗಸ್ ಅಟ್ಕಿನ್ಸನ್ ಅವರು ಬರೋಬ್ಬರಿ 38 ರನ್‌ಗಳನ್ನು ಬಿಟ್ಟು ಕೊಟ್ಟಿದ್ದರು. ಅದರಂತೆ ಇಂಗ್ಲೆಂಡ್ ನೀಡಿದ್ದ 133 ರನ್‌ಗಳನ್ನು ಟೀಮ್ ಇಂಡಿಯಾ ಇನ್ನೂ 8 ಓವರ್‌ಗಳು ಬಾಕಿ ಇರುವಾಗಲೇ ಚೇಸ್ ಮಾಡಿತ್ತು. 7 ವಿಕೆಟ್‌ಗಳ ಗೆಲುವು ಪಡೆದಿದ್ದ ಆತಿಥೇಯರು 5 ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದ್ದಾರೆ.
Ind vs Eng 2nd T20I: ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ ಹೀಗಿದೆ
ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಇಂಗ್ಲೆಂಡ್ ತಂಡ, ವರುಣ್ ಚಕ್ರವರ್ತಿ ಹಾಗೂ ಟೀಮ್ ಇಂಡಿಯಾ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಗೆ ನಲುಗಿ ಕೇವಲ 132 ರನ್‌ಗಳಿಗೆ ಸೀಮಿತವಾಗಿತ್ತು. ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ 68 ರನ್‌ಗಳನ್ನು ಸಿಡಿಸಿದ್ದು ಬಿಟ್ಟರೆ, ಇನ್ನುಳಿದ ಪ್ರವಾಸಿ ಬ್ಯಾಟ್ಸ್‌ಮನ್‌ಗಳು ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯುವಲ್ಲಿ ವಿಫಲರಾಗಿದ್ದರು. ಭಾರತದ ಪರ ಸ್ಪಿನ್ ಮೋಡಿ ಮಾಡಿದ್ದ ವರುಣ್ ಚಕ್ರವರ್ತಿ ಬೌಲ್ ಮಾಡಿದ್ದ ನಾಲ್ಕು ಓವರ್‌ಗಳಲ್ಲಿ 23 ರನ್ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಿತ್ತಿದ್ದರು. ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದರು.
🚨 Team news for tomorrow's second T20I v India
— England Cricket (@englandcricket) January 24, 2025
🔁 Brydon Carse comes in for Gus Atkinson
🆕 Jamie Smith has also been added to the 12 player squad pic.twitter.com/Fr4Hju00qs
ಬಳಿಕ 133 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೇವಲ 34 ಎಸೆತಗಳಲ್ಲಿ 79 ರನ್‌ಗಳನ್ನು ಸಿಡಿಸಿದ್ದರು. ಅಂತಿಮವಾಗಿ ಭಾರತ ತಂಡ 12. 5 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತ್ತು. ಪ್ರವಾಸಿಗರ ಪರ ಜೋಫ್ರಾ ಆರ್ಚರ್ ಎರಡು ವಿಕೆಟ್ ಪಡೆದಿದ್ದರೆ, ಆದಿಲ್ ರಶೀದ್ ಒಂದು ವಿಕೆಟ್ ಕಿತ್ತಿದ್ದರು.
ಟಿ20ಐ ಸರಣಿಯಲ್ಲಿ ಹಿನ್ನಡೆಯನ್ನು ಅನುಭವಿಸಿರುವ ಇಂಗ್ಲೆಂಡ್ ತಂಡ, ಶನಿವಾರ ಚೆನ್ನೈನಲ್ಲಿ ಗೆಲುವು ಪಡೆಯುವ ಮೂಲಕ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ. ಆದರೆ, ಇನ್‌ಫಾರ್ಮ್ ಬ್ಯಾಟರ್ ಜೋಸ್ ಬಟ್ಲರ್‌ಗೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಸಾಥ್ ನೀಡಬೇಕಾದ ಅಗತ್ಯವಿದೆ.
IND vs ENG: ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ಟಿಕೆಟ್ ಇದ್ದರೆ ಉಚಿತ ಮೆಟ್ರೋ ಪ್ರಯಾಣ
ಎರಡನೇ ಟಿ20ಐ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ XI
ಫಿಲ್ ಸಾಲ್ಟ್ (ವಿ.ಕೀ), ಬೆನ್ ಡಕೆಟ್, ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮಿ ಓವರ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್
ಪಂದ್ಯದ ವಿವರ
ಭಾರತ vs ಇಂಗ್ಲೆಂಡ್
ಎರಡನೇ ಟಿ20ಐ ಪಂದ್ಯ
ದಿನಾಂಕ: ಜನವರಿ 25, 2025
ಸಮಯ: ಸಂಜೆ 07: 00ಕ್ಕೆ
ಸ್ಥಳ: ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್