Ind vs Eng 2nd T20I: ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ ಹೀಗಿದೆ
ಸುಂದರ್ ಚೆನ್ನೈಯವರೇ ಆಗಿರುವ ಕಾರಣ ಈ ಪಿಚ್‌ನಲ್ಲಿ(Pitch Report) ಅವರಿಗೆ ಹೆಚ್ಚಿನ ಹಿಡಿತವಿದೆ. ಅವರು ಆಡುವ ಬಳಗಕ್ಕೆ ಆಯ್ಕೆಯಾದರೆ ನಿತೀಶ್ ರೆಡ್ಡಿ ಜಾಗ ಬಿಡಬೇಕಾಗಬಹುದು.
![Ind vs Eng 2nd T20I: ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ ಹೀಗಿದೆ](https://cdn-vishwavani-prod.hindverse.com/media/original_images/Chennai_Pitch_Report.jpg)
Chennai Pitch Report
![Profile](https://vishwavani.news/static/img/user.png)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಮೊದಲ ಟಿ20(Ind vs Eng 2nd T20I) ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯಿಸಿರುವ ಭಾರತ ತಂಡ, ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ.
ಪಿಚ್ ರಿಪೋರ್ಟ್
ಚೆನ್ನೈನ ಚೆಪಾಲ್ ಟ್ರ್ಯಾಕ್ ಸ್ಪಿನ್ ಟ್ರ್ಯಾಕ್ ಆಗಿದೆ. ಹೀಗಾಗಿ ಉಭಯ ತಂಡಗಳು ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ಮಹತ್ವ ನೀಡಬಹುದು. ಸ್ಪಿನ್ ಟ್ರ್ಯಾಕ್ ಆದರೂ ಕೂಡ ಐಪಿಎಲ್‌ನಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಹೀಗಾಗಿ ಬ್ಯಾಟಿಂಗ್‌ಗೂ ಈ ಪಿಚ್ ಕೊಂಚ ನೆರವು ನೀಡಲಿದೆ ಎಂಬುದನ್ನು ಗಮನಿಸಬೇಕು. ಸ್ಪಿನ್ ಪಿಚ್ ಆದ ಕಾರಣ ಭಾರತ ತಂಡ ಈ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಸುಂದರ್ ಚೆನ್ನೈಯವರೇ ಆಗಿರುವ ಕಾರಣ ಈ ಪಿಚ್‌ನಲ್ಲಿ ಅವರಿಗೆ ಹೆಚ್ಚಿನ ಹಿಡಿತವಿದೆ. ಅವರು ಆಡುವ ಬಳಗಕ್ಕೆ ಆಯ್ಕೆಯಾದರೆ ನಿತೀಶ್ ರೆಡ್ಡಿ ಜಾಗ ಬಿಡಬೇಕಾಗಬಹುದು. ಶಮಿ ಈ ಪಂದ್ಯದಲ್ಲಿಯೂ ಆಡುವುದು ಅನುಮಾನ ಎನ್ನಲಾಗಿದೆ. ಇಂಗ್ಲೆಂಡ್ ಕೂಡ ಆದೀಲ್ ರಶೀದ್‌ಗೆ ಜತೆಯಾಗಿ ಮತೋರ್ವ ಸ್ಪಿನ್ನರ್ ಆಡಿಸಬಹುದು. ರೆಹಾನ್ ಅಹ್ಮದ್ ಆಡಬಹುದು. ಆಗ ಒಬ್ಬ ವೇಗಿ ಹೊರಗುಳಿಯಬೇಕು.
ಇದನ್ನೂ ಓದಿ Venkatesh Iyer: 2025ರ ಐಪಿಎಲ್‌ಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್‌ಗೆ ಗಾಯದ ಭೀತಿ?
ಹವಾಮಾನ ವರದಿ
ಶನಿವಾರ ಚೆನ್ನೈನಲ್ಲಿ ಮಳೆಯಾಗುವ ಯಾವುದೇ ಸಾಧ್ಯತೆ ಇಲ್ಲ. ರಾತ್ರಿ ವೇಳೆ ತಾಪಮಾನವು ತುಲನಾತ್ಮಕವಾಗಿ ತಂಪಾಗಿರುತ್ತದೆ ಮತ್ತು ಗರಿಷ್ಠ 29 ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಂಭಾವ್ಯ ತಂಡ
ಇಂಗ್ಲೆಂಡ್: ಫಿಲ್ ಸಾಲ್ಟ್ (ವಿ.ಕೀ), ಬೆನ್ ಡಕೆಟ್, ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವೀ.ಕಿ), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ.