IND vs ENG: ಅರ್ಧಶತಕ ಸಿಡಿಸಿ ವಿಶೇಷ ಟಿ20ಐ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
Hardik Pandya Creates history in T20Is: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಚುಟಕು ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಪುಣೆ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20ಐ ಕ್ರಿಕೆಟ್‌ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಮೂರನೇ ಟಿ20ಐ ಪಂದ್ಯದಂತೆ ನಾಲ್ಕನೇ ಹಣಾಹಣಿಯಲ್ಲಿ ಜವಾಬ್ದಾರಿಯುತ ಬ್ಯಾಟ್ ಮಾಡಿದ ಹಾರ್ದಿಕ್, ನಿರ್ಣಾಯಕ ಅರ್ಧಶತಕ ಸಿಡಿಸುವ ಮೂಲಕ ಆರಂಭಿಕ ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ ಆಸರೆಯಾಗಿದ್ದರು.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಸಂಜು ಸ್ಯಾಮ್ಸನ್‌ಮ ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರು ಬಹುಬೇಗ ವಿಕೆಟ್ ಒಪ್ಪಿಸಿದ್ದರು. ಆ ಮೂಲಕ ಭಾರತ ಕೇವಲ 12 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಭಿಷೇಕ್ ಶರ್ಮಾ (29) ಹಾಗೂ ರಿಂಕು ಸಿಂಗ್ (30) ಅವರು ತಂಡವನ್ನು ಸ್ವಲ್ಪ ಮೇಲೆತ್ತಿ ಔಟ್ ಆಗಿದ್ದರು.
IND vs ENG: ಶತಕ ಬಾರಿಸುವಂತೆ ಸೂರ್ಯಕುಮಾರ್‌ಗೆ ಮನವಿ ಮಾಡಿದ ಪುಟ್ಟ ಬಾಲಕ
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಜೊತೆ 87 ರನ್‌ಗಳ ಜೊತೆಯಾಟವನ್ನು ಆಡುವುದರ ಜೊತೆಗೆ ಎದುರಿಸಿದ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 53 ರನ್‌ಗಳನ್ನು ಗಳಿಸಿದರು. ಆ ಮೂಲಕ ತಮ್ಮ ಟಿ20ಐ ವೃತ್ತಿ ಜೀವನದ ಐದನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ವಿಶೇಷ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ
ಈ ಅರ್ಧಶತಕದ ಬಲದಿಂದ ಹಾರ್ದಿಕ್ ಪಾಂಡ್ಯ ಅವರು 1803 ರನ್‌ಗಳನ್ನು ಕಲೆ ಹಾಕಿದ್ದಾರೆ ಹಾಗೂ 94 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ 1500 ರನ್‌ಗಳು, 50ಕ್ಕೂ ಅಧಿಕ ವಿಕೆಟ್ ಹಾಗೂ ಐದು ಅರ್ಧಶತಕಗಳನ್ನು ಸಿಡಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಒಟ್ಟಾರೆಯಾಗಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಶಕಿಬ್ ಅಲ್ ಹಸನ್, ಮೊಹಮ್ಮದ್ ನಬಿ ಹಾಗೂ ಸಿಕಂದರ್ ರಾಜಾ ಟಿ20ಐ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.
5⃣th T20I FIFTY for Hardik Pandya 👏 👏
— BCCI (@BCCI) January 31, 2025
This has been a cracker of a knock ⚡️ ⚡️
Follow The Match ▶️ https://t.co/pUkyQwxOA3#TeamIndia | #INDvENG | @IDFCFIRSTBank pic.twitter.com/Quske2zw0Q
ಹಾರ್ದಿಕ್ ಪಾಂಡ್ಯಗೆ 6 ವಿಕೆಟ್ ಅಗತ್ಯ
ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಸದ್ಯ ಹಾರ್ದಿಕ್ ಪಾಂಡ್ಯ 94 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಅವರು 100 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 6 ವಿಕೆಟ್‌ಗಳ ಅಗತ್ಯವಿದೆ. ಇನ್ನು ಕೇವಲ 6 ವಿಕೆಟ್ ಕಿತ್ತರೆ, ಟಿ20ಐ ಕ್ರಿಕೆಟ್‌ನಲ್ಲಿ 1000 ರನ್‌ಗಳು ಹಾಗೂ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಆಲ್‌ರೌಂಡರ್ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಬಾಂಗ್ಲಾದೇಶ ಮಾಜಿ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಲ್‌ರೌಂಡರ್ ಎನಿಸಿಕೊಳ್ಳಲಿದ್ದಾರೆ.
IND vs ENG 4th T20I: ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್!
181 ರನ್‌ಗಳನ್ನು ಕಲೆ ಹಾಕಿದ ಭಾರತ ತಂಡ
ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 182 ರನ್‌ಗಳ ಗುರಿಯನ್ನು ನೀಡಿತು.