ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೆನ್ಸೆಕ್ಸ್ 559 ಅಂಕ ಪತನ: ಐಟಿ ಇಂಡೆಕ್ಸ್ ಕುಸಿತ, ಕಾರಣವೇನು?

Share Market: ಮುಂಬೈ ಷೇರು ಮಾರುಕಟ್ಟೆಯಲ್ಲಿ ಗುರುವಾರ (ಫೆ. 12) ಸೆನ್ಸೆಕ್ಸ್ 559 ಅಂಕ ಪತನವಾಗಿ 83,674ಕ್ಕೆ ಸ್ಥಿರವಾಯಿತು. ನಿಫ್ಟಿ 147 ಅಂಕ ಇಳಿಕೆಯಾಗಿ 25,807ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಐಟಿ ಸ್ಟಾಕ್ಸ್ ದರಗಳು ಗಣನೀಯ ಇಳಿಯಿತು.

ಸೆನ್ಸೆಕ್ಸ್ 559 ಅಂಕ ಪತನ: ಐಟಿ ಇಂಡೆಕ್ಸ್ ಕುಸಿತ

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 12, 2026 11:00 PM

ಮುಂಬೈ, ಫೆ. 12: ಸೆನ್ಸೆಕ್ಸ್ ಗುರುವಾರ (ಫೆ. 12) 559 ಅಂಕ ಪತನವಾಗಿ 83,674ಕ್ಕೆ ಸ್ಥಿರವಾಯಿತು. ನಿಫ್ಟಿ 147 ಅಂಕ ಇಳಿಕೆಯಾಗಿ 25,807ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಐಟಿ ಸ್ಟಾಕ್ಸ್ ದರಗಳು ಗಣನೀಯ ಇಳಿಯಿತು. ನಿಫ್ಟಿ 50 ಇಂಡೆಕ್ಸ್‌ನಲ್ಲಿ Bajaj Finance (up 3.31%), Shriram Finance (up 2.48%), and Eicher Motors (up 2.13%) ಷೇರುಗಳು ಲಾಭ ಗಳಿಸಿದವು.

ನಿಫ್ಟಿ 50 ಇಂಡೆಕ್ಸ್‌ನಲ್ಲಿ ನಷ್ಟಕ್ಕೀಡಾದ ಷೇರುಗಳು: Tech Mahindra (down 6.40%), Infosys (down 5.97%), TCS (down 5.77%), HCL Technologies (down 5.20%), and Wipro (down 4.79%) ಎಐ ತಂತ್ರಜ್ಞಾನದ ಟೂಲ್ಸ್ ಗಳಿಂದ ಐಟಿ ಕಂಪನಿಗಳ ಆದಾಯ ಕುಸಿತ ಭೀತಿಯೂ ನಕಾರಾತ್ಮಕ ಪ್ರಭಾವ ಬೀರಿತು.

ರಕ್ಷಣಾ ಇಲಾಖೆಯು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (HAL) ಜತೆಗೆ 2,312 ಕೋಟಿ ರುಪಾಯಿಗಳ ಗುತ್ತಿಗೆಗೆ ಸಹಿ ಹಾಕಿದೆ. ಎಚ್‌ಎಎಲ್ 8 ವಿಮಾನಗಳನ್ನು ರಕ್ಷಣಾ ಇಲಾಖೆಗೆ ನಿರ್ಮಿಸಿ ಕೊಡಲಿದೆ. ಈ ಸ್ವದೇಶಿ ವಿಮಾನದ ಹೆಸರು Dornier 228 Aircraft (ಡೋರ್ನಿಯರ್ 228 ಏರ್ ಕ್ರಾಫ್ಟ್) ಎಚ್‌ಎಎಲ್ನ ಉತ್ಪಾದನಾ ಸಾಮರ್ಥ್ಯ ಇದರಿಂದ ಹೆಚ್ಚಲಿದೆ.

ಷೇರುಗಳ ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಎಸ್‌ಬಿಐ ಇದೀಗ ಟಿಸಿಎಸ್ ಮತ್ತು ಇನ್ಫೋಸಿಸ್ ಅನ್ನು ಹಿಂದಿಕ್ಕಿದೆ. ಐದು ವರ್ಷಗಳ ಹಿಂದೆ ಇದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಸಾರ್ವಜನಿಕ ವಲಯದ ಬ್ಯಾಂಕ್ಗಳ ಪರ್ಫಾಮೆನ್ಸ್ ಸುಧಾರಿಸಿರುವುದಕ್ಕೆ ಇದು ಒಂದು ಉದಾಹರಣೆ.

ಹೊಸ ಕಾಯ್ದೆ ಬಂದರೂ ಹಳೆ ಟ್ಯಾಕ್ಸ್ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ; ಹಳೆ ತೆರಿಗೆ ಇಷ್ಟಪಡುವವರಿಗೆ ಜಾಕ್‌ಪಾಕ್

ಸ್ಟಾಕ್ ಸೂಚ್ಯಂಕ ಕುಸಿತಕ್ಕೆ ಕಾರಣವೇನು?

  • ಐಟಿ ಷೇರುಗಳ ದರ ಕುಸಿತ
  • ಅಮೆರಿಕದ ನಿರುದ್ಯೋಗ ಹೆಚ್ಚಳ
  • ಎಚ್‌ಯುಎಲ್ ಮೂರನೇ ತ್ರೈಮಾಸಿಕ ನೀರಸ ಫಲಿತಾಂಶ
  • ಪ್ರಾಫಿಟ್ ಬುಕಿಂಗ್
  • ಜಿಯೊ ಪೊಲಿಟಿಕಲ್ ಟೆನ್ಷನ್

ಸರ್ಕಾರವು ಬಿಎಚ್‌ಇಎಲ್ ಸಂಸ್ಥೆಯಿಂದ 5 ಪರ್ಸೆಂಟ್ ಷೇರುಗಳನ್ನು ಮಾರಾಟ ಮಾಡಿದೆ. ಇದಕ್ಕೆ ರಿಟೇಲ್ ಮತ್ತು ಸಾಂಸ್ಥಿಕ ಹೂಡಿಕೆದಾರರಿಂದ ಉತ್ತಮ ರೆಸ್ಪಾನ್ಸ್ ಲಭಿಸಿದೆ. 1.34 ಪಟ್ಟು ಓವರ್ ಸಬ್‌ಸ್ಕೃಪ್ಷನ್ ಆಗಿದೆ.

ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.