IND vs ENG: ರಾಜ್‌ಕೋಟ್‌ನಲ್ಲಿ ಭಾರತ ತಂಡದ ಟಿ20ಐ ಸಾಧನೆ ಹೇಗಿದೆ? ಇಲ್ಲಿದೆ ಮಾಹಿತಿ!
India's T20I Records in Rajkote: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯ ಇಂಗ್ಲೆಂಡ್‌ಗೆ ಮಾಡು ಇಲ್ಲವೇ ಮಡಿ. ಇಂಗ್ಲೆಂಡ್ ತಂಡ ಸರಣಿಯಲ್ಲಿ 2-0 ಹಿನ್ನಡೆಯಲ್ಲಿದೆ. ರಾಜ್‌ಕೋಟ್‌ನಲ್ಲಿ ಭಾರತ ತಂಡದ ಟಿ20ಐ ಕ್ರಿಎಕಟ್ ದಾಖಲೆಗಳು ಉತ್ತಮವಾಗಿವೆ.
![IND vs ENG: ರಾಜ್‌ಕೋಟ್‌ನಲ್ಲಿ 3ನೇ ಟಿ20ಐ ಗೆಲ್ಲುವ ನೆಚ್ಚಿನ ತಂಡ ಯಾವುದು?](https://cdn-vishwavani-prod.hindverse.com/media/original_images/IND_vs_ENG_Rajkot_T20I_Record.jpg)
IND vs ENG 3rd T20I
![Profile](https://vishwavani.news/static/img/user.png)
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಮಂಗಳವಾರ ರಾಜ್ ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲ್ಲುವ ಮೂಲಕ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಹೀಗಿರುವಾಗ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡ, ಇಂಗ್ಲೆಂಡ್ ತಂಡವನ್ನು ಸೋಲಿಸಿ, ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಟಿ20ಐ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ರಾಜ್‌ಕೋಟ್‌ನಲ್ಲಿ ಭಾರತ ತಂಡದ ಟಿ20ಐ ದಾಖಲೆಗಳು ಅತ್ಯುತ್ತಮವಾಗಿದ್ದು, ಇದರ ಆಧಾರದ ಮೇಲೆ ಮೂರನೇ ಟಿ20 ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಂದ ಹಾಗೆ ರಾಜ್‌ಕೋಟ್‌ನಲ್ಲಿ ಭಾರತ ತಂಡದ ಟಿ20ಐ ಕ್ರಿಕೆಟ್ ದಾಖಲೆ ಬಗ್ಗೆ ಇಲ್ಲಿ ವಿವರಿಸಲಾಗಿದೆ.
IND vs ENG: ಹ್ಯಾರಿಸ್ ರೌಫ್ ಸಾರ್ವಕಾಲಿಕ ದಾಖಲೆ ಮೇಲೆ ಅರ್ಷದೀಪ್ ಸಿಂಗ್ ಕಣ್ಣು!
ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-2 ಅಂತರದ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ತಂಡ, ರಾಜ್‌ಕೋಟ್ ಮೈದಾನದಲ್ಲಿ ಮೊದಲ ಟಿ20ಐ ಪಂದ್ಯ ಆಡಲು ಕಣಕ್ಕಿಳಿಯಲಿದೆ. ಸತತ ಎರಡು ಸೋಲುಗಳ ನಂತರ, ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಮೂರನೇ ಟಿ20ಐ ಪಂದ್ಯವನ್ನು ಗೆಲ್ಲುವುದು ಇಂಗ್ಲೆಂಡ್‌ಗೆ ಅನಿವಾರ್ಯವಾಗಿದೆ. ಆದರೆ ಈ ಗೆಲುವು ಆಂಗ್ಲರಿಗೆ ಸುಲಭವಲ್ಲ. ಏಕೆಂದರೆ ಈ ಮೈದಾನದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ದಾಖಲೆಯನ್ನು ಹೊಂದಿದೆ.
ರಾಜ್‌ಕೋಟ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಇದುವರೆಗೆ ಒಟ್ಟು ಐದು ಟಿ20ಐ ಪಂದ್ಯಗಳನ್ನು ಆಡಿದೆ. ಈ ಐದು ಪಂದ್ಯಗಳಲ್ಲಿ ಟೀಮ್ ಇಂಡಿಯಾ ದಿಟ್ಟ ಪ್ರದರ್ಶನ ನೀಡಿ ನಾಲ್ಕರಲ್ಲಿ ಗೆದ್ದು ಒಂದೇ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ವಿಶೇಷವೆಂದರೆ 2020ರ ನಂತರ ರಾಜ್‌ಕೋಟ್ ಮೈದಾನದಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನೂ ಸೋತಿಲ್ಲ.
IND vs ENG: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಸದ್ಯ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಈ ಕ್ರೀಡಾಂಗಣವನ್ನು ತುಂಬಾ ಇಷ್ಟಪಡುತ್ತಾರೆ. ಆದರೆ, ಸೂರ್ಯಕುಮಾರ್ ಯಾದವ್ ರಾಜ್‌ಕೋಟ್‌ನಲ್ಲಿ ಕೇವಲ ಒಂದೇ ಒಂದು ಟಿ20ಐ ಪಂದ್ಯದಲ್ಲಿ ಮಾತ್ರ ಆಡಿದ್ದರು. ಈ ಪಂದ್ಯದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳನ್ನು ಛಿದ್ರಗೊಳಿಸಿದ್ದರು. 2023ರಲ್ಲಿ ರಾಜ್‌ಕೋಟ್‌ನಲ್ಲಿ ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿದಿದ್ದರು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಅವರು 91 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಪಡೆದಿತ್ತು.