#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್‌ ಸುಧಾರಣೆ ಕಾಣದೇ ಹೋದರೆ ಇಂಗ್ಲೆಂಡ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಬೌಲಿಂಗ್‌ ತಕ್ಕ ಮಟ್ಟಿಗೆ ಓಕೆ.

IND vs ENG: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Suryakumar Yadav and Gautam Gambhir

Profile Abhilash BC Jan 27, 2025 4:53 PM

ರಾಜ್‌ಕೋಟ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ(IND vs ENG 3rd T20) ಮೊದಲೆರಡು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಮೂರನೇ ಪಂದ್ಯವನ್ನಾಡಲು ಸಜ್ಜಾಗಿದೆ. ಮಂಗಳವಾರ ನಡೆಯುವ ಈ ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಸರಣಿ ಸೋಲನ್ನು ತಪ್ಪಿಸಲು ಇಂಗ್ಲೆಂಡ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ಪಂದ್ಯ ತೀವ್ರ ಪೈಪೋಟಿ ಎಂದು ನಿರೀಕ್ಷೆ ಮಾಡಬಹುದು.

ಭಾರತಕ್ಕೆ ನಾಯಕನದ್ದೇ ಚಿಂತೆ

ಭಾರತ ತಂಡಕ್ಕೆ ಚಿಂತೆ ಇರುವುದೆಂದರೆ ನಾಯಕ ಸೂರ್ಯಕುಮಾರ್‌ ಯಾದವ್‌ ಅವರ ಸತತ ಬ್ಯಾಟಿಂಗ್‌ ವೈಫಲ್ಯ. ನಾಯಕನಾದ ಬಳಿಕ ಅಬ್ಬರದ ಬ್ಯಾಟಿಂಗ್‌ ಕೂಡ ಮಂಕಾಗಿದೆ. ಎರಡಂಕಿ ಮೊತ್ತ ಬಾರಿಸಲು ಪರದಾಟ ನಡೆಸುತ್ತಿದ್ದಾರೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆದ ರಾಜ್‌ಕೋಟ್‌ನಲ್ಲಾದರೂ ಅವರ ಬ್ಯಾಟ್‌ ಸದ್ದು ಮಾಡೀತೇ ಎಂದು ಕಾದು ನೋಡಬೇಕಿದೆ.

ಗಾಯದ ಚಿಂತೆ

ಗಾಯದ ಚಿಂತೆ ಕೂಡ ಭಾರತಕ್ಕೆ ಕಾಡಿದೆ. ಅನುಭವಿ ಹಾಗೂ ಚುರುಕಿನ ಆಟಗಾರರಾದ ರಿಂಕು ಸಿಂಗ್‌ ಮತ್ತು ನಿತೀಶ್‌ ಕುಮಾರ್‌ ರೆಡ್ಡಿ ಗಾಯಗೊಂಡು ಸಂಪೂರ್ಣವಾಗಿ ಸರಣಿಯಿಂದ ಹೊರಬಿದ್ದಾರೆ. ಇವರ ಸ್ಥಾನಕ್ಕೆ ಆಯ್ಕೆಯಾದ ರಮಣ್‌ದೀಪ್‌ ಸಿಂಗ್‌ ಮತ್ತು ಶಿವಂ ದುಬೆ ಆಡುವ ಬಳಗದಲ್ಲಿ ಅವಕಾಶ ಪಡೆದರೂ ಇವರ ಫಾರ್ಮ್‌ ಹೇಗಿರಲಿದೆ ಎನ್ನುವುದು ಕೂಡ ಗಮನಾರ್ಹ.



ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ವಿಕೆಟ್‌ ಟೇಕರ್‌ ಅರ್ಶ್‌ದೀಪ್‌ ಸಿಂಗ್‌ ಅವರು ಪವರ್‌ ಪ್ಲೇ ಮುಕ್ತಾಯಕ್ಕೂ ಮುನ್ನವೇ ವಿಕೆಟ್‌ ಉರುಳಿಸಿ ಭಾರತಕ್ಕೆ ಮುನ್ನಡೆ ತಂದುಕೊಡುತ್ತಿದ್ದಾರೆ. ಸ್ಫಿನ್‌ ವಿಭಾಗದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಪ್ರತಿ ಪಂದ್ಯದಲ್ಲಿಯೂ ಗಮನಾರ್ಹ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ. 14 ತಿಂಗಳ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿರುವ ಹಿರಿಯ ವೇಗಿ ಮೊಹಮ್ಮದ್‌ ಶಮಿ ಈ ಪಂದ್ಯದಲ್ಲಿಯೂ ಆಡುವುದು ಅನುಮಾನ.

ಇದನ್ನೂ ಓದಿ IND vs ENG 3rd T20: ಮೂರನೇ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ, ಸಂಭಾವ್ಯ ತಂಡ ಹೀಗಿದೆ

ಇಂಗ್ಲೆಂಡ್‌ಗೆ ಬ್ಯಾಟಿಂಗ್‌ ಸುಧಾರಣೆ ಅಗತ್ಯ

ಕಳೆದ ಎರಡು ಪಂದ್ಯಗಳಲ್ಲಿಯೂ ಇಂಗ್ಲೆಂಡ್‌ಗೆ ಹಿನ್ನಡೆಯಾದದ್ದು ಬ್ಯಾಟಿಂಗ್‌ ವೈಫಲ್ಯ. ನಾಯಕ ಜಾಸ್‌ ಬಟ್ಲರ್‌ ಹೊರತುಪಡಿಸಿ ಉಳಿದವರ ಕೊಡುಗೆ ಶೂನ್ಯ. ಕಳೆದ ವರ್ಷ ಐಪಿಎಲ್‌ ಸೇರಿ ಹಲವು ಟಿ20 ಲೀಗ್‌ನಲ್ಲಿ ಬಿಗ್‌ ಹಿಟ್ಟಿಂಗ್‌ ಪ್ರದರ್ಶನ ತೋರಿದ್ದ ಫಿಲ್‌ ಸಾಲ್ಟ್‌, ಬೆನ್‌ ಡಕೆಟ್‌, ಹ್ಯಾರಿ ಬ್ರೂಕ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಈ ಬಾರಿ ಸಪ್ಪೆಯಾಗಿದ್ದಾರೆ. ಮೂರನೇ ಪಂದ್ಯದಲ್ಲಿಯೂ ಇವರು ಬ್ಯಾಟಿಂಗ್‌ ಸುಧಾರಣೆ ಕಾಣದ ಹೊರತಾಗಿ ತಂಡಕ್ಕೆ ಗೆಲುವು ಕಷ್ಟ ಸಾಧ್ಯ. ಬೌಲಿಂಗ್‌ ತಕ್ಕ ಮಟ್ಟಿಗೆ ಓಕೆ.