#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಹ್ಯಾರಿಸ್‌ ರೌಫ್‌ ಸಾರ್ವಕಾಲಿಕ ದಾಖಲೆ ಮೇಲೆ ಅರ್ಷದೀಪ್‌ ಸಿಂಗ್‌ ಕಣ್ಣು!

Arshdeep Singh eye massive T20I record: ಇಂಗ್ಲೆಂಡ್‌ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಬೌಲಿಂಗ್‌ನಲ್ಲಿ ಮಿಂಚುತ್ತಿರುವ ಭಾರತ ತಂಡದ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಟಿ20ಐ ಕ್ರಿಕೆಟ್‌ನ ಸಾರ್ವಕಾಲಿಕ ದಾಖಲೆಯ ಸನಿಹದಲ್ಲಿದ್ದಾರೆ. ಪಾಕ್‌ ವೇಗಿ ಹ್ಯಾರಿಸ್‌ ರೌಫ್‌ ಅವರ ದಾಖಲೆಯನ್ನು ಮುರಿಯಲು ಅರ್ಷದೀಪ್‌ ಸಿಂಗ್‌ ಸಜ್ಜಾಗಿದ್ದಾರೆ.

IND vs ENG: ಟಿ20ಐ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿ ಅರ್ಷದೀಪ್‌ ಸಿಂಗ್‌!

Arshdeep Singh eyes Haris Rauf's all-time T20I record

Profile Ramesh Kote Jan 27, 2025 10:09 PM

ರಾಜ್‌ಕೋಟ್‌: ಭಾರತ ತಂಡದ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಅಂತಾರಾಷ್ಟ್ರೀ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ವೇಗದ ಬೌಲರ್‌ ಎನಿಸಿಕೊಳ್ಳಲು ಅರ್ಷದೀಪ್‌ ಸಿಂಗ್‌ಗೆ ಅತ್ಯುತ್ತಮ ಅವಕಾಶವಿದೆ. 71 ಟಿ20ಐ ಪಂದ್ಯಗಳಿಂದ 100 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇದೀಗ ಪಾಕಿಸ್ತಾನದ ಹ್ಯಾರಿಸ್‌ ರೌಫ್‌ ಸದ್ಯ ಅಗ್ರ ಸ್ಥಾನದಲ್ಲಿದ್ದಾರೆ. 2024ರ ಐಸಿಸಿ ಟಿ20ಐ ವಿಶ್ವಕಪ್‌ ಟೂರ್ನಿಯ ಕೆನಡಾ ವಿರುದ್ಧದ ಪಂದ್ಯದಲ್ಲಿ ಪಾಕ್‌ ವೇಗಿ ಈ ದಾಖಲೆಯನ್ನು ಬರೆದಿದ್ದರು.

2022ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅರ್ಷದೀಪ್‌ ಸಿಂಗ್‌ ಅಂದಿನಿಂದ ಇಲ್ಲಿಯವರೆಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನವನ್ನು ತೋರುತ್ತಾ ಬಂದಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 62 ಟಿ20ಐ ಪಂದ್ಯಗಳಿಂದ 8.27ರ ಸರಾಸರಿಯಲ್ಲಿ 98 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮಂಗಳವಾರ ರಾಜ್‌ಕೋಟ್‌ನಲ್ಲಿ ನಡೆಯುವ ಮೂರನೇ ಪಂದ್ಯದಲ್ಲಿ ಮುಖಾಮುಖಿ ಕಾದಾಟ ನಡೆಸಲಿವೆ. ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಪಡೆದ ನಾಲ್ಕನೇ ಬೌಲರ್‌ ಎನಿಸಿಕೊಳ್ಳಲು ಅದ್ಭುತ ಅವಕಾಶವಿದೆ.

IND vs ENG: ಗೌತಮ್‌ ಗಂಭೀರ್‌ ದಾಖಲೆ ಮುರಿಯುವ ಸನಿಹದಲ್ಲಿ ಸಂಜು ಸ್ಯಾಮ್ಸನ್‌!

ಅಗ್ರ ಸ್ಥಾನದಲ್ಲಿರುವ ರಶೀದ್‌ ಖಾನ್‌

ಅಫ್ಘಾನಿಸ್ತಾನ ತಂಡದ ರಶೀದ್‌ ಖಾನ್‌ ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎಂಬ ದಾಖಲೆಯನ್ನು ಹೊಂದಿದ್ದಾರೆ. 2021ರಲ್ಲಿ ಪಾಕಿಸ್ತಾನ ವಿರುದ್ಧದ ತಮ್ಮ 53ನೇ ಟಿ20ಐ ಪಂದ್ಯದಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದರು. ನೇಪಾಳ ತಂಡದ ಸಂದೀಪ್‌ ಲಾಮಿಚನ್ನೆ ಮತ್ತು ಶ್ರೀಲಂಕಾ ತಂಡದ ಸ್ಪಿನ್ನರ್‌ ವಾನಿಂದು ಹಸರಂಗ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಿದ್ದಾರೆ. ಇನ್ನೆರಡು ವಿಕೆಟ್‌ಗಳನ್ನು ಕಬಳಿಸಿದರೆ, ಪುರುಷರ ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ ಪೂರ್ಣಗೊಳಿಸಿದ ಭಾರತೀಯ ಬೌಲರ್‌ ಎನಿಸಿಕೊಳ್ಳಲಿದಾರೆ, ಮಹಿಳೆಯರ ಟಿ20ಐ ಕ್ರಿಕೆಟ್‌ನಲ್ಲಿ ದೀಪ್ತಿ ಶರ್ಮಾ ಈ ದಾಖಲೆಯನ್ನು ಹೊಂದಿದ್ದಾರೆ.

ಪುರುಷರ ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್‌ ಕಬಳಿಸಿ ದಬೌಲರ್‌ಗಳು

ರಶೀದ್‌ ಖಾನ್‌-53 ಪಂದ್ಯಗಳು (2021ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ವಿರುದ್ದ)

ಸಂದೀಪ್‌ ಲಾಮಿಚನ್ನೆ-54 ಪಂದ್ಯಗಳು (2024ರ ಜೂನ್ನಲ್ಲಿ ಬಾಂಗ್ಲಾದೇಶ ವಿರುದ್ಧ)

ವಾನಿಂದು ಹಸರಂಗ-63 ಪಂದ್ಯಗಳು (2024ರ ಫೆಬ್ರವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ)

ಹ್ಯಾರಿಸ್‌ ರೌಫ್‌-71 ಪಂದ್ಯಗಳು (2024ರ ಜೂನ್‌ನಲ್ಲಿ ಕೆನಡಾ ವಿರುದ್ಧ)

ಎಹ್ಸಾನ್‌ ಖಾನ್‌-71 ಪಂದ್ಯಗಳು (2024ರ ಆಗಸ್ಟ್‌ನಲ್ಲಿ ಮಲೇಷ್ಯಾ ವಿರುದ್ಧ)

IND vs ENG: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಯುಜ್ವೇಂದ್ರ ಚಹಲ್‌ ದಾಖಲೆ ಮುರಿದಿದ್ದ ಅರ್ಷದೀಪ್‌

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್‌ ಭಾರತದ ಪರ ಅತಿ ಹೆಚ್ಚು ಟಿ20ಐ ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎನಿಸಿಕೊಂಡಿದ್ದರು. ಆ ಮೂಲಕ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಅವರನ್ನು ಎಡಗೈ ವೇಗಿ ಹಿಂದಿಕ್ಕಿದ್ದರು. ಚಹಲ್‌ 80 ಟಿ20ಐ ಪಂದ್ಯಗಳಿಂದ 96 ವಿಕೆಟ್‌ಗಳನ್ನು ಕಬಳಿಸಿದ್ದರು. ಭುವನೇಶ್ವರ್‌ ಕುಮಾರ್‌ ಹಾಗೂ ಹಾರ್ದಿಕ್‌ ಪಾಂಡ್ಯ ಕೂಡ 90 ವಿಕೆಟ್‌ಗಳನ್ನು ಹೊಂದಿದ್ದಾರೆ.