IND vs ENG: ಮೊಹಮ್ಮದ್ ಶಮಿಯ ವಿಶ್ವಾಸ ಹೆಚ್ಚಾಗಿದೆ ಎಂದ ಪಾರ್ಥೀವ್ ಪಟೇಲ್!
Parthiv Patel Praised Mohammed Shami: ಇಂಗ್ಲೆಂಡ್ ವಿರುದ್ಧ ಭಾನುವಾರ (ಫೆಬ್ರವರಿ 2) ನಡೆದಿದ್ದ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ (25ಕ್ಕೆ3) ತೋರಿದ್ದರು. ಈ ಪಂದ್ಯದ ಮೂಲಕ ವಿಶ್ವಾಸ ಗಳಿಸಿರುವ ಟೀಮ್ ಇಂಡಿಯಾದ ವೇಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರುವ ವಿಶ್ವಾಸವನ್ನು ಹೊಂದಿದ್ದಾರೆಂದು ಪಾರ್ಥೀವ್ ಪಟೇಲ್ ಭವಿಷ್ಯ ನುಡಿದಿದ್ದಾರೆ.
ನವದೆಹಲಿ: ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ತೋರಿದ ಪ್ರದರ್ಶನದಿಂದ ಮೊಹಮ್ಮದ್ ಶಮಿ (Mohammad Shami) ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬೈನಲ್ಲಿ ತೋರಿದ ಪ್ರದರ್ಶನದಿಂದ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಿಮಿತ್ತ ಹಿರಿಯ ವೇಗಿಗೆ ಹೆಚ್ಚಿನ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮಾಜಿ ವಿಕೆಟ್ ಕೀಪರ್ ಭವಿಷ್ಯ ನುಡಿದಿದ್ದಾರೆ.
ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬೌಲ್ ಮಾಡಿದ್ದ 2.3 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಆ ಮೂಲಕ ಇಂಗ್ಲೆಂಡ್ ತಂಡವನ್ನು 97 ರನ್‌ಗಳಿಗೆ ಆಲ್‌ಔಟ್ ಮಾಡಲು ಟೀಮ್ ಇಂಡಿಯಾಗೆ ನೆರವು ನೀಡಿದ್ದರು.
2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ನಂತರ ಪಾದದ ಗಾಯದ ಸಮಸ್ಯೆಯಿಂದ ಶಮಿ ಕ್ರಿಕೆಟ್ ಅಂಗಣದಿಂದ ಸಂಪೂರ್ಣವಾಗಿ ವಿಶ್ರಾಂತಿ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದ್ದ ಶಮಿ, ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದ್ದರು. ಆದರೆ, ಅಂತಿಮ ಪಂದ್ಯದಲ್ಲಿ 3 ವಿಕೆಟ್ ಪಡೆದು ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ನಿಮಿತ್ತ ಭಾರತ ತಂಡಕ್ಕೆ ಹಿರಿಯ ವೇಗಿ ಭರವಸೆಯನ್ನು ಮೂಡಿಸಿದ್ದಾರೆ.
IND vs ENG: ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ, ಕೊನೆಯ ಪಂದ್ಯವನ್ನೂ ಗೆದ್ದ ಭಾರತ!
ಮುಂಬೈ ಪಂದ್ಯದಿಂದ ಶಮಿಗೆ ವಿಶ್ವಾಸ ಹೆಚ್ಚಾಗಿದೆ: ಪಟೇಲ್
"ಗಾಯದ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ 444 ದಿನಗಳ ನಂತರ ಮೊದಲ ವಿಕೆಟ್ ಪಡೆದಿದ್ದಾರೆ. ಕಮ್‌ಬ್ಯಾಕ್ ಮಾಡಿದ ಪಂದ್ಯದಲ್ಲಿ ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದ್ದರು. ಆದರೆ, ಸಾಕಷ್ಟು ದಿನಗಳ ನಂತರ ಕಮ್‌ಬ್ಯಾಕ್ ಪಂದ್ಯದಲ್ಲಿ ವಿಕೆಟ್ ಪಡೆಯಲು ಸ್ವಲ್ಪಮಟ್ಟಿಗೆ ಅದೃಷ್ಟ ಬೇಕು. ಆದರೆ ವಿಶೇಷವಾಗಿ ವೇಗದ ಪಿಚ್‌ನಲ್ಲಿ ಎದುರಾಳಿ ತಂಡ 247 ರನ್‌ಗಳ ಗುರಿ ಹಿಂಬಾಲಿಸುವಾಗ ವೇಗದ ಬೌಲರ್‌ಗಳಿಗೆ ವಿಕೆಟ್ ಪಡೆಯುವುದು ಸುಲಭವಾಗುತ್ತದೆ," ಎಂದು ಪಾರ್ಥಿವ್ ಪಟೇಲ್ ತಿಳಿಸಿದ್ದಾರೆ.
ಮೊಹಮ್ಮದ್ ಶಮಿಗೆ ಒಳ್ಳೆಯ ಸಂಗತಿ
"ಪಂದ್ಯದಲ್ಲಿ ಮೊಹಮ್ಮದ್ ಶಮಿ ಎರಡಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವುದು ಅವರ ಪಾಲಿಗೆ ಒಳ್ಳೆಯ ಸಂಗತಿ. ಇದರಿಂದ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಬೌಲಿಂಗ್ ಸಂಯೋಜನೆ ತೋರಲು ಶಮಿ ಅವರಲ್ಲಿ ವಿಶ್ವಾಸ ಹೆಚ್ಚಿಸಿದೆ," ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.
IND vs ENG: ಟಿ20ಐ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ದಾಖಲೆ ಮುರಿದ ಅಭಿಷೇಕ್ ಶರ್ಮಾ!
ಭಾರತಕ್ಕೆ 150 ರನ್ ಗೆಲುವು
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20ಐ ಪಂದ್ಯದಲ್ಲಿ ಎಡಗೈ ವೇಗಿ ಆರ್ಷದೀಪ್ ಸಿಂಗ್ ಬದಲಿಗೆ ಶಮಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದರು. ಅದರಂತೆ ತಮ್ಮ ಮಾರಕ ದಾಳಿಯಿಂದ ಇಂಗ್ಲೆಂಡ್ ಆಟಗಾರರನ್ನು 97 ರನ್‌ಗಳಿಗೆ ಕಟ್ಟಿ ಹಾಕಲು ಮಹತ್ತರ ನೆರವು ನೀಡಿದ್ದರು. ಆ ಮೂಲಕ ಭಾರತ ತಂಡದ 150 ರನ್‌ಗಳ ಗೆಲುವಿಗೆ ನೆರವು ನೀಡಿದ್ದರು. 37 ಎಸೆತಗಳಲ್ಲಿ ದಾಖಲೆ ಶತಕ ಅಲ್ಲದೆ, 54 ಎಸೆತಗಳಲ್ಲಿ 135 ರನ್‌ಗಳ ಕಾಣಿಕೆ ನೀಡಿದ ಅಭಿಷೇಕ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
IND vs ENG: ಮೊದಲನೇ ಎಸೆತದಲ್ಲಿ ಬೌಂಡರಿ ಬಾರಿಸಿ ವಿಶ್ವ ದಾಖಲೆ ಬರೆದ ಫಿಲ್ ಸಾಲ್ಟ್!
ಏಕದಿನ ಸರಣಿಗೆ ಸಜ್ಜು
ಏಕದಿನ ಕ್ರಿಕೆಟ್‌ನಲ್ಲಿ ಅಪ್ರತಿಮ ಸಾಧನೆ ತೋರಿರುವ ಮೊಹಮ್ಮದ್ ಶಮಿ, ಫೆಬ್ರವರಿ 6 ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಉತ್ತಮ ಬೌಲಿಂಗ್ ಸಂಯೋಜನೆ ತೋರಲು ಹೊರಟಿದ್ದಾರೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಶಮಿ ಅವರು ಜಸ್‌ಪ್ರೀತ್ ಬುಮ್ರಾ ಅವರೊಂದಿಗೆ ಚೆಂಡನ್ನು ಹಂಚಿಕೊಳ್ಳಲಿದ್ದಾರೆ.