IND vs ENG: ಟಿ20ಐ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ದಾಖಲೆ ಮುರಿದ ಅಭಿಷೇಕ್ ಶರ್ಮಾ!
Abhishek Shram Breaks Shubman Gill's Record: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, ಇಂಗ್ಲೆಂಡ್ ವಿರುದ್ದದ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ 135 ರನ್‌ಗಳನ್ನು ಬಾರಿಸಿದರು. ಆ ಮೂಲಕ ಟಿ20ಐ ಪಂದ್ಯವೊಂದರಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತವನ್ನು ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಮುಂಬೈ: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಂದ ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ ಶತಕವನ್ನು ಸಿಡಿಸಿದರು. ಆ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೇ ಭಾರತೀಯ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಸ್ಪೋಟಕ ಇನಿಂಗ್ಸ್‌ನಲ್ಲಿ ಅಭಿಷೇಕ್ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಭಾರತದ ಪರ ಟಿ20ಐ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಆಟಗಾರ ದಾಖಲೆ ಬರೆಯಲು ಅಭಿಷೇಕ್ ಶರ್ಮಾ ಅವರಿಂದ ಸಾಧ್ಯವಾಗಿಲ್ಲ. ಆದರೆ, ಭಾರತದ ಪರ ಟಿ20ಐ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಶುಭಮನ್ ಗಿಲಕ್ ದಾಖಲೆಯನ್ನು ಮುರಿದಿದ್ದಾರೆ. 54 ಎಸೆತಗಳಲ್ಲಿ 13 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 135 ರನ್‌ಗಳನ್ನು ಸಿಡಿಸಿದರು. ಆದರೆ, ಇದಕ್ಕೂ ಮುನ್ನ ಶುಭಮನ್ ಗಿಲ್ 2023ರಲ್ಲಿ ನ್ಯೂಜಿಲೆಂಡ್ ವಿರುದ್ದ ಅಜೇಯ 126 ರನ್‌ಗಳನ್ನು ಸಿಡಿಸಿದ್ದರು.
IND vs ENG: ಸ್ಪೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ!
ಋತುರಾಜ್ ಗಾಯಕ್ವಾಡ್ 123 ರನ್ ಗಳಿಸಿದ್ದರೆ, ವಿರಾಟ್ 122 ರನ್ ಗಳಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಭಾರತೀಯ ಆಟಗಾರ ಟಿ20ಐ ಪಂದ್ಯವೊಂದರಲ್ಲಿ 130 ರನ್ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಅಭಿಷೇಕ್ ಶರ್ಮಾ 135 ರನ್ ಗಳಿಸಿ ಈ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು
135 ರನ್‌ಗಳು- ಅಭಿಷೇಕ್ ಶರ್ಮಾ vs ಇಂಗ್ಲೆಂಡ್, ವಾಂಖೆಡೆ (2025)
126* ರನ್‌ಗಳು- ಶುಭಮನ್ ಗಿಲ್ vs ನ್ಯೂಜಿಲೆಂಡ್, ಅಹಮದಾಬಾದ್ (2023)
123* ರನ್‌ಗಳು- ಋತುರಾಜ್ ಗಾಯಕ್ವಾಡ್ vs ಆಸ್ಟ್ರೇಲಿಯಾ, ಗುವಾಹಟಿ (2023)
122* ರನ್‌ಗಳು- ವಿರಾಟ್ ಕೊಹ್ಲಿ vs ಅಫ್ಘಾನಿಸ್ತಾನ, ದುಬೈ (2022)
121* ರನ್‌ಗಳು- ರೋಹಿತ್ ಶರ್ಮಾ vs ಅಫ್ಘಾನಿಸ್ತಾನ, ಬೆಂಗಳೂರು (2024)
HUNDRED off 37 Deliveries 💥
— BCCI (@BCCI) February 2, 2025
..And counting!
Keep the big hits coming, Abhishek Sharma! 😎
Live ▶️ https://t.co/B13UlBNdFP#INDvENG | @IDFCFIRSTBank pic.twitter.com/pG60ckOQBB
ಮೂರೂ ಸ್ವರೂಪಗಳಲ್ಲಿ ಭಾರತದ ಪರ ಅತಿ ದೊಡ್ಡ ಇನಿಂಗ್ಸ್ ಆಡಿದವರು
ಟೆಸ್ಟ್ - ವೀರೇಂದ್ರ ಸೆಹ್ವಾಗ್ - ದಕ್ಷಿಣ ಆಫ್ರಿಕಾ ವಿರುದ್ಧ 319 ರನ್‌ಗಳು
ODI- ರೋಹಿತ್ ಶರ್ಮಾ- ಶ್ರೀಲಂಕಾ ವಿರುದ್ಧ 264 ರನ್‌ಗಳು
ಟಿ20- ಅಭಿಷೇಕ್ ಶರ್ಮಾ- ಇಂಗ್ಲೆಂಡ್ ವಿರುದ್ಧ 135 ರನ್‌ಗಳು
🎥 WATCH
— BCCI (@BCCI) February 2, 2025
Abhishek Sharma smashes India's second-fastest T20I TON in Men's Cricket 💯🔽#TeamIndia | #INDvENG | @IDFCFIRSTBank
ಕೇವಲ 27 ಎಸೆತಗಳಲ್ಲಿ ವೇಗದ ಶತಕ
ಟಿ20ಐ ಸ್ವರೂಪದಲ್ಲಿ ಭಾರತ ಪರ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಅವರು 2017 ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಅವರು ಶತಕ ಗಳಿಸಿದ್ದರು. ಟಿ20ಐನಲ್ಲಿ ಅತಿ ವೇಗದ ಶತಕದ ದಾಖಲೆ ಎಸ್ಟೋನಿಯಾದ ಸಾಹಿಲ್ ಚೌಹಾಣ್ ಹೆಸರಿನಲ್ಲಿದೆ, ಅವರು ಕಳೆದ ವರ್ಷ ಸೈಪ್ರಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಟೆಸ್ಟ್ ಆಡುವ ತಂಡಗಳ ನಡುವಿನ ಪಂದ್ಯದಲ್ಲಿ ಅತಿ ವೇಗದ ಟಿ20ಐ ಶತಕದ ದಾಖಲೆಯನ್ನು ರೋಹಿತ್ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಜಂಟಿಯಾಗಿ ಹೊಂದಿದ್ದಾರೆ. 2017 ರಲ್ಲಿ ಬಾಂಗ್ಲಾದೇಶ ವಿರುದ್ಧ ಮಿಲ್ಲರ್ 35 ಎಸೆತಗಳಲ್ಲಿ ಶತಕ ಪೂರೈಸಿದ್ದರು.