#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಟಿ20ಐ ಸರಣಿಯ ಇನ್ನುಳಿದ ಭಾಗದಿಂದ ರಿಂಕು ಸಿಂಗ್‌, ನಿತೀಶ್‌ ರೆಡ್ಡಿ ಔಟ್‌!

India vs England: ಪ್ರತ್ಯೇಕ ಗಾಯಗಳಿಂದಾಗಿ ಭಾರತ ತಂಡದ ರಿಂಕು ಸಿಂಗ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಅವರು ಇಂಗ್ಲೆಂಡ್‌ ವಿರುದ್ದದ ಟಿ20ಐ ಸರಣಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಶಿವಂ ದುಬೆ ಮತ್ತು ರಮಣ್‌ದೀಪ್‌ ಸಿಂಗ್‌ ಅವರು ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಟಿ20ಐ ಸರಣಿಯ ಕೊನೆಯ 3 ಪಂದ್ಯಗಳಿಂದ ರಿಂಕು ಸಿಂಗ್‌, ನಿತೀಶ್‌ ರೆಡ್ಡಿ ಔಟ್‌!

Rinku Singh, Nitish Kumar Reddy ruled out of remainder T20I series

Profile Ramesh Kote Jan 25, 2025 6:29 PM

ಚೆನ್ನೈ: ವಿಭಿನ್ನ ಗಾಯಗಳ ಕಾರಣ ಭಾರತ ತಂಡದ ಆಲ್‌ರೌಂಡರ್‌ ನಿತೀಶ್‌ ರೆಡ್ಡಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಮುಂಬೈ ತಂಡದ ಶಿವಂ ದುಬೆ ಮತ್ತು ಪಂಜಾಬ್‌ ತಂಡದ ರಮಣ್‌ದೀಪ್‌ ಸಿಂಗ್‌ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಶನಿವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ನಿತೀಶ್‌ ರೆಡ್ಡಿ ಅವರು ಸೈಡ್‌ ಸ್ಟ್ರೈನ್‌ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಟಿ20ಐ ಸರಣಿಯ ಇನ್ನುಳಿದ ಭಾಗದಿಂದ ಹೊರಬಿದ್ದಿದ್ದಾರೆ. ಅವರು ಬೆಂಗಳೂರಿನಲ್ಲಿರುವ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಗೆ ತೆರಳಿದ್ದು, ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ.

IND vs ENG: ಮೊಹಮ್ಮದ್‌ ಶಮಿ ಇಲ್ಲ, ಎರಡನೇ ಟಿ20ಐಗೆ ಭಾರತದ‌ ಸಂಭಾವ್ಯ ಪ್ಲೇಯಿಂಗ್ XI

ಇಂಗ್ಲೆಂಡ್‌ ವಿರುದ್ಧ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ರಿಂಕು ಸಿಂಗ್‌ ಅವರು ಕೆಳ ಬೆನ್ನು ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಅವರ ಚೇತರಿಕೆ ಉತ್ತಮವಾಗುದ್ದು, ಅವರನ್ನು ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅವರು 2 ಮತ್ತು 3ನೇ ಟಿ20ಐ ಪಂದ್ಯಗಳಿಂದ ಹೊರ ನಡೆದಿದ್ದಾರೆ.

ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡಕ್ಕೆ ಶಿವಂ ದುಬೆ ಹಾಗೂ ರಮಣ್‌ದೀಪ್‌ ಅವರನ್ನು ಆಯ್ಕೆ ಮಾಡಿದೆ. 2024-25ರ ರಣಜಿ ಟ್ರೋಫಿ ಟೂರ್ನಿಯ ತಮ್ಮ-ತಮ್ಮ ಪಂದ್ಯಗಳ ಬಳಿಕ ಈ ಇಬ್ಬರೂ ಆಟಗಾರರು ಭಾರತ ತಂಡ ಡ್ರೆಸ್ಸಿಂಗ್‌ ಕೊಠಡಿಗೆ ಸೇರ್ಪಡೆಯಾಗಲಿದ್ದಾರೆ.



ಶಿವಂ ದುಬೆ ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ್ದರು. ಈ ಪಂದ್ಯದಲ್ಲಿ ಮುಂಬೈ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ.

ಇನ್ನು ರಮಣ್‌ದೀಪ್‌ ಪ್ರತಿನಿಧಿಸುವ ಪಂಜಾಬ್‌ ತಂಡ, ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ವಿರುದ್ದ ಇನಿಂಗ್ಸ್‌ ಹಾಗೂ 207 ರನ್‌ಗಳಿಂದ ಸೋಲು ಅನುಭವಿಸಿದೆ. ಮುಂಬೈ ಹಾಗೂ ಪಂಜಾಬ್‌ ತಂಡಗಳ ಪ್ರತ್ಯೇಕ ಎರಡೂ ಪಂದ್ಯಗಳು ಕೇವಲ ಮೂರೇ ದಿನಗಳ ಅಂತ್ಯ ಕಂಡಿವೆ. ಈ ಇಬ್ಬರೂ ಆಲ್‌ರೌಂಡರ್‌ಗಳು ಇದೀಗ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿ ಕಡೆಗೆ ಗಮನ ಕೊಡಲಿದ್ದಾರೆ.

IND vs ENG: ಭಾರತ-ಇಂಗ್ಲೆಂಡ್​ ಟಿ20 ಪಂದ್ಯದ ಟಿಕೆಟ್​ ಇದ್ದರೆ ಉಚಿತ ಮೆಟ್ರೋ ಪ್ರಯಾಣ

ಇಂಗ್ಲೆಂಡ್‌ ವಿರುದ್ಧ ಟಿ20ಐ ಸರಣಿಯ ಇನ್ನುಳಿದ ಭಾಗದ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪ ನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ ಜುರೆಲ್ (ವಿಕೆಟ್‌ ಕೀಪರ್‌), ಶಿವಂ ದುಬೆ, ರಮಣ್‌ದೀಪ್ ಸಿಂಗ್