IND vs ENG: ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ಟಿಕೆಟ್ ಇದ್ದರೆ ಉಚಿತ ಮೆಟ್ರೋ ಪ್ರಯಾಣ
IND vs ENG: ಪಂದ್ಯದ ಟಿಕೆಟ್ ಇದ್ದವರಿಗೆ ಸ್ಟೇಡಿಯಂ ಇರುವ ಚೆಪಾಕ್ವರೆಗೆ ಮತ್ತು ಚೆಪಾಕ್ನಿಂದ ಮೆಟ್ರೋ ಪ್ರಯಾಣ ಉಚಿತವಾಗಿರುತ್ತದೆ. ಪಂದ್ಯದ ಟಿಕೆಟ್ಗಳು ಈಗಾಗಲೆ ಬಹುತೇಕ ಸೋಲ್ಡ್ಔಟ್ ಆಗಿವೆ.
![IND vs ENG: ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ಟಿಕೆಟ್ ಇದ್ದರೆ ಉಚಿತ ಮೆಟ್ರೋ ಪ್ರಯಾಣ](https://cdn-vishwavani-prod.hindverse.com/media/original_images/India_vs_England.jpg)
India vs England
![Profile](https://vishwavani.news/static/img/user.png)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಿನ 2ನೇ ಟಿ20 ಪಂದ್ಯಕ್ಕೆ ಅಭಿಮಾನಿಗಳಿಗೆ ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್ಸಿಎ) ಬಿಗ್ ಆಫರ್ ನೀಡಿದೆ. ಈ ಪಂದ್ಯದ ಟಿಕೆಟ್ ಹೊಂದಿದ್ದವರು ಆ ದಿನ ಚೆನ್ನೈ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇತ್ತಂಡಗಳ ನಡುವಣ ಈ ಪಂದ್ಯ ಶನಿವಾರ ನಡೆಯಲಿದೆ.
ಪಂದ್ಯದ ಟಿಕೆಟ್ ಇದ್ದವರಿಗೆ ಸ್ಟೇಡಿಯಂ ಇರುವ ಚೆಪಾಕ್ವರೆಗೆ ಮತ್ತು ಚೆಪಾಕ್ನಿಂದ ಮೆಟ್ರೋ ಪ್ರಯಾಣ ಉಚಿತವಾಗಿರುತ್ತದೆ. ಪಂದ್ಯದ ಟಿಕೆಟ್ಗಳು ಈಗಾಗಲೆ ಬಹುತೇಕ ಸೋಲ್ಡ್ಔಟ್ ಆಗಿವೆ.
ಶಮಿ ಕಣಕ್ಕೆ?
ಮೊದಲ ಟಿ20ಐ ಪಂದ್ಯದಲ್ಲಿ ಮೊಹಮ್ಮದ್ ಶಮಿ ಆಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ಆಡಿರಲಿಲ್ಲ. ಇದೀಗ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾ ವಿರುದ್ದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಗಾಯದ ಹೊರತಾಗಿಯೂ ಅವರು ಈ ಟೂರ್ನಿಯಲ್ಲಿ ಆಡಿದ್ದರು. ಆದರೆ, ಈ ಟೂರ್ನಿಯ ಬಳಿಕ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ದೀರ್ಘಾವಧಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಶಮಿ ಸ್ಥಾನ ಪಡೆದಿದ್ದಾರೆ.