IND vs ENG: ಆಡಮ್ ಗಿಲ್‌ಕ್ರಿಸ್ಟ್‌ಗೆ ರಿಷಭ್ ಪಂತ್ ಹೋಲಿಕೆ ಇಲ್ಲ ಎಂದ ಆರ್ ಅಶ್ವಿನ್!
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಮೊದಲನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅವಳಿ ಶತಕವನ್ನು ಬಾರಿಸಿದ್ದರು. ಈ ಹಿನ್ನೆಲೆಯಲ್ಲಿ ರಿಷಭ್ ಪಂತ್ ಅವರನ್ನು ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಶ್ಲಾಘಿಸಿದ್ದಾರೆ.

ರಿಷಭ್ ಪಂತ್ ಬಗ್ಗೆ ಆರ್ ಅಶ್ವಿನ್ ಹೇಳಿಕೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ(IND vs ENG) ಭಾರತ ತಂಡದ (India) ವಿಕೆಟ್ ಕೀಪರ್ ರಿಷಭ್ ಪಂತ್ (Rishabh pant) ಅದ್ಭುತ ಲಯದಲ್ಲಿದ್ದಾರೆ. ಅವರು ಮೊದಲನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅವಳಿ ಶತಕಗಳನ್ನು ಬಾರಿಸಿದ್ದರು. ನಂತರ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅವಳಿ ಶತಕಗಳನ್ನು ಬಾರಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ರಿಷಭ್ ಪಂತ್ ಹೆಸರಿನಲ್ಲಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೂಡ ಪಂತ್ ಬರೆದಿದ್ದಾರೆ.
ಇಂಗ್ಲೆಂಡ್ ಎದುರು ಶತಕಗಳನ್ನು ಬಾರಿಸಿದರೂ ರಿಷಭ್ ಪಂತ್ ಅವರು ತಮ್ಮ ಆಟದಲ್ಲಿ ಇನ್ನೂ ಸುಧಾರಣ ಕಾಣಬೇಕಾಗಿದೆ ಎಂದು ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಂತ್ ಆಕ್ರಮಣಕಾರಿ ಕ್ರಿಕೆಟ್ ಆಡಬೇಕು, ಆದರೆ ಅಗತ್ಯವಿದ್ದಾಗ ತನ್ನ ಪ್ರವೃತ್ತಿಯನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅಶ್ವಿನ್ ತಿಳಿಸಿದ್ದಾರೆ.
IND vs ENG 3rd Test: ಲಾರ್ಡ್ಸ್ ಟೆಸ್ಟ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, "ರಿಷಭ್ ಪಂತ್ ತನ್ನ ಸಾಮರ್ಥ್ಯವನ್ನು ಸಾಧಿಸುವುದನ್ನು ನಾನು ನೋಡಲು ಬಯಸುತ್ತೇನೆ. ಅವರು ತಮ್ಮನ್ನು ರಂಜಿಸಬೇಕೆಂದು ನಾವು ಬಯಸುತ್ತೇವೆ, ಆದರೆ ಅವರು ಅದನ್ನು ಮಾಡಬಹುದು ಮತ್ತು ಅಗತ್ಯವಿದ್ದಾಗ ಸಂಯಮವನ್ನು ತೋರಿಸಬಹುದು. ಪಂತ್ ಇನ್ನು ಮುಂದೆ ಹೊಸಬರಲ್ಲ. ಪಂತ್ ಅವರ ಮಾನದಂಡಗಳಿಗೆ ಅನುಗುಣವಾಗಿರಬೇಕೆಂದು ನಾನು ಬಯಸುತ್ತೇನೆ," ಎಂದು ಹೇಳಿದ್ದಾರೆ.
ಆಡಮ್ ಗಿಲ್‌ಕ್ರಿಸ್ಟ್‌ಗೆ ಹೋಲಿಕೆ ಇಲ್ಲ
ರಿಷಭ್ ಪಂತ್ ಅವರನ್ನು ಆಸ್ಟ್ರೇಲಿಯಾದ ಅನುಭವಿ ಆಟಗಾರ ಆಡಮ್ ಗಿಲ್‌ಕ್ರಿಸ್ಟ್‌ಗೆ ಹೋಲಿಸಲಾಗುತ್ತದೆ, ಆದರೆ ಪಂತ್ ಅವರ ಗುಣಮಟ್ಟ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರರಿಗಿಂತ ತುಂಬಾ ಹೆಚ್ಚಾಗಿದೆ ಎಂದು ಅಶ್ವಿನ್ ಭಾವಿಸುತ್ತಾರೆ. ಪಂತ್ ಉತ್ತಮ ರಕ್ಷಣಾತ್ಮಕ ಆಟವನ್ನು ಹೊಂದಿದ್ದಾರೆ, ಆದರೆ ಗಿಲ್‌ಕ್ರಿಸ್ಟ್‌ಗೆ ಅದು ಕೊರತೆಯಿದೆ ಎಂದು ಅಶ್ವಿನ್ ತಿಳಿಸಿದ್ದಾರೆ. ಆದ್ದರಿಂದ ಅವರನ್ನು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ಹೋಲಿಸಬೇಕು ಎಂದಿದ್ದಾರೆ.
IND vs ENG: ʻನಿಮ್ಮ ನಾಯಕತ್ವಕ್ಕೆ ಕಠಿಣ ಸವಾಲುʼ-ಬೆನ್ ಸ್ಟೋಕ್ಸ್‌ಗೆ ಮೈಕಲ್ ಅಥರ್ಟನ್ ವಾರ್ನಿಂಗ್!
"ಅವರು ಅದ್ಭುತ ಆಟಗಾರ. ಅವರು ಆಡಮ್ ಗಿಲ್‌ಕ್ರಿಸ್ಟ್ ಅಲ್ಲ, ಅನೇಕರು ಅವರನ್ನು ಗಿಲ್‌ಕ್ರಿಸ್ಟ್‌ಗೆ ಹೋಲಿಸುತ್ತಾರೆ. ಅವರ (ಗಿಲ್‌ಕಿಸ್ಟ್) ಬಳಿ ಅಷ್ಟು ಉತ್ತಮ ರಕ್ಷಣಾತ್ಮಕ ಆಡ ಇರಲಿಲ್ಲ. ಪಂತ್ ಉತ್ತಮ ಗುಣಮಟ್ಟದ ರಕ್ಷಣಾತ್ಮಕ ಆಟವನ್ನು ಹೊಂದಿದ್ದಾರೆ. ಅವರನ್ನು ಗಿಲ್‌ಕ್ರಿಸ್ಟ್ ಅಲ್ಲ, ಕೆಲವು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳೊಂದಿಗೆ ಹೋಲಿಸಬೇಕು. ರಿಷಭ್ ಪಂತ್ ತಮ್ಮದೇ ಆದ ಕೆಲಸಗಳನ್ನು ಮಾಡಬಹುದು" ಎಂದು ಅಶ್ವಿನ್ ತಿಳಿಸಿದ್ದಾರೆ.