ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 3rd Test: ಲಾರ್ಡ್ಸ್‌ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

IND vs ENG: ಭಾರತ ತಂಡ ಲಾರ್ಡ್ಸ್‌ನಲ್ಲಿ ಇದುವರೆಗೆ 19 ಟೆಸ್ಟ್‌ ಪಂದ್ಯ ಆಡಿದ್ದು, ಈ ಪೈಕಿ 12 ಸೋಲು, 3 ಗೆಲುವು ಮತ್ತು ಉಳಿದ 4 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಕಳೆದ ಮೂರು ಪಂದ್ಯಗಳ ಫಲಿತಾಂಶ ನೋಡುವುದಾದದರೆ ಭಾರತ 2 ಪಂದ್ಯಗಳನ್ನು ಗೆದ್ದಿರುವುದು ಸ್ಫೂರ್ತಿಯ ಅಂಶವಾಗಿದೆ.

ಲಾರ್ಡ್ಸ್‌ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

Profile Abhilash BC Jul 9, 2025 11:55 AM

ಲಂಡನ್‌: 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಮತ್ತು ಇಂಗ್ಲೆಂಡ್‌ ಮೂರನೇ ಟೆಸ್ಟ್‌(IND vs ENG 3rd Test) ಪಂದ್ಯವನ್ನಾಡಲು ಸಜ್ಜಾಗಿದೆ. ಇತ್ತಂಡಗಳ ನಡುವಣ ಈ ಪಂದ್ಯ ನಾಳೆಯಿಂದ(ಜು.10) ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ಆರಂಭವಾಗಲಿದೆ. ಈ ಪಂದ್ಯದ ಪಿಚ್‌ ರಿಪೋರ್ಟ್‌(Lord's Pitch Report), ಹವಾಮಾನ ವರದಿಯ(London Weather Report) ಮಾಹಿತಿ ಇಲ್ಲಿದೆ.

ಮಳೆ ಭೀತಿ ಇಲ್ಲ

ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಹೀಗಾಗಿ ಐದು ದಿನ ಕೂಡ ಆಟ ನಡೆಯಲಿದೆ. ಗರಿಷ್ಠ ತಾಪಮಾನ 30°C ಮತ್ತು ಕನಿಷ್ಠ ತಾಪಮಾನ 18°C ​​ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡನೇ ಪಂದ್ಯದ ಅಂತಿಮ ದಿನದಾಟಕ್ಕೆ ಸುಮಾರು ಒಂದು ಮುಕ್ಕಾಲು ಗಂಟೆ ಮಳೆ ಅಡ್ಡಿಪಟ್ಟಿಸಿತ್ತು. ಆದರೆ ಈ ಸಮಸ್ಯೆ ಮೂರನೇ ಪಂದ್ಯದಲ್ಲಿ ಕಾಣಸಿಗದು.

ಪಿಚ್‌ ರಿಪೋರ್ಟ್‌

ಲಾರ್ಡ್ಸ್ ಮೈದಾನದ ಪಿಚ್‌ ಹೆಚ್ಚಾಗಿ ವೇಗಿಗಳಿಗೆ ನೆರವು ನೀಡುತ್ತದೆ. ಬೌನ್ಸಿ ಪಿಚ್‌ ಆಗಿದ್ದು ಪಂದ್ಯ ಸಾಗಿದಂತೆ ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗುತ್ತದೆ. ಕಳೆದ ತಿಂಗಳು WTC ಫೈನಲ್ ಸಮಯದಲ್ಲಿ ಪಂದ್ಯ ಮುಂದುವರೆದಂತೆ ಬ್ಯಾಟಿಂಗ್ ಕಷ್ಟಕರವಾಗಿತ್ತು. ಪಿಚ್‌ನ ಫೋಟೊವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದನ್ನು ನೋಡುವಾಗ ಪಿಚ್‌ ಸಾಕಷ್ಟು ಹಸಿರಿನಿಂದ ಕೂಡಿದೆ. ಹೀಗಾಗಿ ಇದು ಬೌಲಿಂಗ್‌ ಪಿಚ್‌ ಎನ್ನಬಹುದು. ಒಂದೊಮ್ಮೆ ಬುಧವಾರ ಹುಲ್ಲನ್ನು ಸವರಿದರೆ ಇಲ್ಲೂ ಸಪಾಟು ವಿಕೆಟ್‌ ಕಾಣಿಸಿಕೊಳ್ಳಬಹುದು. ಆಗ ಕಳೆದ ಎರಡು ಪಂದ್ಯದಂತೆ ರನ್‌ ಪ್ರವಾಹ ಹರಿಯಬಹುದು. ಆದರೆ ಈ ಬಾರಿ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಕಷ್ಟ ಸಾಧ್ಯ ಎನ್ನುವಂತಿದೆ. ಏಕೆಂದರೆ ಈಗಾಗಲೇ ಇಂಗ್ಲೆಂಡ್‌ ತಂಡದ ಕೋಚ್‌ ಮತ್ತು ನಾಯಕ ಸ್ಪೀಡ್‌ ಮತ್ತು ಬೌನ್ಸಿ ಪಿಚ್‌ ಬೇಕೆಂದು ಕ್ಯುರೇಟರ್‌ಗೆ ಬೇಡಿಕೆ ಸಲ್ಲಿದ್ದಾರೆ.

ಇದನ್ನೂ ಓದಿ ENG vs IND: ನೆಟ್ಸ್‌ನಲ್ಲಿ ಬೆಂಕಿ ಬೌಲಿಂಗ್‌ ಅಭ್ಯಾಸ ನಡೆಸಿದ ಬುಮ್ರಾ; 3ನೇ ಪಂದ್ಯಕ್ಕೆ ಲಭ್ಯ

ಭಾರತ ತಂಡ ಲಾರ್ಡ್ಸ್‌ನಲ್ಲಿ ಇದುವರೆಗೆ 19 ಟೆಸ್ಟ್‌ ಪಂದ್ಯ ಆಡಿದ್ದು, ಈ ಪೈಕಿ 12 ಸೋಲು, 3 ಗೆಲುವು ಮತ್ತು ಉಳಿದ 4 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಕಳೆದ ಮೂರು ಪಂದ್ಯಗಳ ಫಲಿತಾಂಶ ನೋಡುವುದಾದದರೆ ಭಾರತ 2 ಪಂದ್ಯಗಳನ್ನು ಗೆದ್ದಿರುವುದು ಸ್ಫೂರ್ತಿಯ ಅಂಶವಾಗಿದೆ.