ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghvendra Pratap Singh: 10 ಮುಸ್ಲಿಂ ಯುವತಿಯರನ್ನು ಕರೆತಂದು ಮದುವೆಯಾಗಿ; ಹಿಂದು ಯುವಕರಿಗೆ ಕರೆಕೊಟ್ಟು ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ನಾಯಕ

ʼʼ10 ಮುಸ್ಲಿಂ ಯುವತಿಯರನ್ನು ಪ್ರೀತಿಸಿ ಅವರನ್ನು ಮದುವೆಯಾಗಿ ಮತಾಂತರ ಮಾಡಿ. ನಿಮಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಮದುವೆ ಎಲ್ಲ ಖರ್ಚು-ವೆಚ್ಚಗಳನ್ನು ನಾವು ನೋಡಿಕೊಳ್ಳುತ್ತೇವೆʼʼ ಎಂದು ಉತ್ತರ ಪದೇಶದ ಬಿಜೆಪಿ ಮುಖಂಡ, ಮಾಜಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಹಿಂದು ಯುವಕರಿಗೆ ಕರೆ ನೀಡಿದ್ದು, ಸದ್ಯ ವಿವಾದಕ್ಕೆ ಕಾರಣವಾಗಿದೆ. ಇಬ್ಬರು ಹಿಂದು ಯುವತಿಯರನ್ನು ಬಲವಂತವಾಗಿ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ ಪ್ರಕರಣವನ್ನು ಖಂಡಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ಯುವತಿಯರನ್ನು ಮದುವೆಯಾಗುವಂತೆ ಕರೆ ನೀಡಿದ ಬಿಜೆಪಿ ನಾಯಕ

ರಾಘವೇಂದ್ರ ಪ್ರತಾಪ್ ಸಿಂಗ್ -

Ramesh B Ramesh B Oct 29, 2025 7:11 PM

ಲಖನೌ, ಅ. 29: ʼʼನೀವು 10 ಮುಸ್ಲಿಂ ಯುವತಿಯರನ್ನು ಪ್ರೀತಿಸಿ ಅವರನ್ನು ಮದುವೆಯಾಗಿ ಮತಾಂತರ ಮಾಡಿ. ನಿಮಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಮದುವೆ ಎಲ್ಲ ಖರ್ಚು-ವೆಚ್ಚಗಳನ್ನು ನಾವು ನೋಡಿಕೊಳ್ಳುತ್ತೇವೆ. ಜತೆಗೆ ನಿಮ್ಮ ರಕ್ಷಣೆಯ ಜವಾಬ್ದಾರಿಯೂ ನಮ್ಮದೇʼʼ-ಇದು ಉತ್ತರ ಪದೇಶದ ಬಿಜೆಪಿ ಮುಖಂಡ, ಮಾಜಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ (Raghvendra Pratap Singh) ಹಿಂದು ಯುವಕರಿಗೆ ಕರೆ ನೀಡಿದ ಪರಿ. ಇಬ್ಬರು ಹಿಂದು ಯುವತಿಯರನ್ನು ಬಲವಂತವಾಗಿ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ ಪ್ರಕರಣವನ್ನು ಖಂಡಿಸಿ ಅವರು ಈ ಹೇಳಿಕೆ ನೀಡಿದ್ದು, ಸದ್ಯ ವಿವಾದ ಹುಟ್ಟು ಹಾಕಿದೆ. ಸಮಾಜವಾದಿ ಪಕ್ಷದ (Samajwadi Party) ಮುಖಂಡರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಸಿದ್ಧಾರ್ಥನಗರ ಜಿಲ್ಲೆಯ ದುಮಾರಿಯಾಗಂಜ್‌ನ ಮಾಜಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಧಂಖರ್‌ಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಧಂಖರ್‌ಪುರ ಗ್ರಾಮದಲ್ಲಿ ಇಬ್ಬರು ಹಿಂದು ಮಹಿಳೆಯರನ್ನು ಮುಸ್ಲಿಂ ಪುರುಷರೊಂದಿಗೆ ಬಲವಂತವಾಗಿ ಮದುವೆಯಾಗಿಸಿ ಮತಾಂತರಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಇಬ್ಬರು ಹಿಂದು ಮಹಿಳೆಯರಿಗೆ ಪ್ರತಿಯಾಗಿ ಕನಿಷ್ಠ 10 ಮುಸ್ಲಿಂ ಮಹಿಳೆಯರನ್ನು ಹಿಂದು ಧರ್ಮಕ್ಕೆ ಮತಾಂತರಿಸಬೇಕು ಎಂದು ಕರೆ ನೀಡಿದರು.

ಮತಾಂತರದ ಬಗ್ಗೆ ಮಾಜಿ ಶಾಸಕ ರಾಘೇಂದ್ರ ಪ್ರತಾಪ್‌ ಸಿಂಗ್‌ ಅವರ ಹೇಳಿಕೆ:



ಈ ಸುದ್ದಿಯನ್ನೂ ಓದಿ: Love Jihad: ಮುಸ್ಲಿಂ ಯುವತಿಯರ ಜೊತೆ ಮದುವೆ ಆಮಿಷ; ಮತಾಂತರಕ್ಕೆ ಹಿಂದೂ ಯುವಕರೇ ಟಾರ್ಗೆಟ್‌!

ರಾಘವೇಂದ್ರ ಪ್ರತಾಪ್ ಸಿಂಗ್ ಹೇಳಿದ್ದೇನು?

ʼʼಯಾವುದೇ ಹಿಂದು ಯುವಕ ಮುಸ್ಲಿಂ ಯುವತಿಯನ್ನು ಕರೆತಂದರೆ ಅವರ ಮದುವೆಯನ್ನು ನಾನು ಮಾಡಿಸುತ್ತೇನೆ. ಅಲ್ಲದೆ ಅವರಿಗೆ ಉದ್ಯೋಗವನ್ನೂ ಕೊಡಿಸುತ್ತೇನೆʼʼ ಎಂದು ಘೋಷಿಸಿದರು. ʼʼಇದು ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಆಡಳಿತವಲ್ಲ. ಹಿಂದುಗಳು ಹೆದರಬೇಕಾಗಿಲ್ಲ. ಇಬ್ಬರು ಹಿಂದು ಯುವತಿಯರನ್ನು ಮುಸ್ಲಿಮರು ಮದುವೆಯಾಗಿದ್ದಾರೆ ಎಂದರೆ ಅದು ಪ್ರಕರಣವೊಂದರ ಕೊನೆ ಅಲ್ಲ. ಆ ಇಬ್ಬರ ಬದಲು ಹಿಂದು ಯುವಕರು ನಮ್ಮ ಧರ್ಮಕ್ಕೆ ಕನಿಷ್ಠ 10 ಮುಸ್ಲಿಂ ಯುವತಿಯನ್ನು ಕರೆತಂದು ಮದುವೆಯಾಗಬೇಕು. ಉಳಿದ ವಿಚಾರವನ್ನು ನಾನು ನೋಡಿಕೊಳ್ಳುತ್ತೇನೆʼʼ ಎಂದು ಹೇಳಿದರು.

ತಮ್ಮ ಈ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ʼʼದುಮಾರಿಯಾಗಂಜ್‌ ಅನ್ನು ಮಿನಿ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ ಪರಿಸ್ಥಿತಿ ಬದಲಾಗಿದೆ. ಅದಾಗ್ಯೂ ಈಗಲೂ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದುಗಳು ಭಯದಿಂದಲೇ ಬದುಕುತ್ತಿದ್ದಾರೆ. ಅಲ್ಲಿನ ಹೆಣ್ಣು ಮಕ್ಕಳು ಸುರಕ್ಷಿತರಾಗಿಲ್ಲ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಧಂಖರ್‌ಪುರದಲ್ಲಿ ಇಬ್ಬರು ಹಿಂದು ಯುವತಿಯರನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼʼಈ ವಿಚಾರದಲ್ಲಿ ಜನರನ್ನು ಎಚ್ಚರಿಸಿದ್ದೇನೆ. ಪ್ರತಿದಾಳಿ ನಡೆಸುವಂತೆ ಕರೆ ನೀಡಿದ್ದೇನೆ. ಇದಕ್ಕಾಗಿ ಹೆದರಬೇಕಾಗಿಲ್ಲ. ನಾವೆಲ್ಲ ನಿಮ್ಮೊಂದಿಗಿದ್ದೇವೆ. ಈಗ ಯೋಗಿ ಆದಿತ್ಯನಾಥ್‌ ಆಡಳಿತವಿದ್ದು, ಹಿಂದುಗಳು ಯಾವುದಕ್ಕೂ ಭಯ ಪಡಬೇಕಾಗಿಲ್ಲ ಎಂದು ಜನರಲ್ಲಿ ಧೈರ್ಯ ತುಂಬಿದ್ದೇನೆʼʼ ಎಂದರು.

ಈ ಸುದ್ದಿಯನ್ನೂ ಓದಿ: Viral News: ಅಮಾಯಕರನ್ನು ನಂಬಿಸಿ ಇಸ್ಲಾಂಗೆ ಮತಾಂತರ; ಅತೀ ದೊಡ್ಡ ಜಾಲ ಬಯಲು, ಆರೋಪಿಗಳ ಬಂಧನ

ಟೀಕಿಸಿದ ಸಮಾಜವಾದಿ ಪಾರ್ಟಿ

ಸದ್ಯ ರಾಘವೇಂದ್ರ ಪ್ರತಾಪ್ ಸಿಂಗ್ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಮಾಜವಾದಿ ಪಕ್ಷದ ಮುಖಂಡರು ಇದನ್ನು ಖಂಡಿಸಿದ್ದಾರೆ. ಬಿಜೆಪಿ ಕೋಮು ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ. "ರಾಘವೇಂದ್ರ ಪ್ರತಾಪ್ ಸಿಂಗ್ ತಮ್ಮ ಹೇಳಿಕೆಯ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ. ಅವರು ಮುಸ್ಲಿಮರನ್ನು ಅವಮಾನಿಸುತ್ತಲೇ ಇದ್ದಾರೆ ಮತ್ತು ಅಗೌರವಿಸುತ್ತಿದ್ದಾರೆ. ಮುಸ್ಲಿಮರು ಭಾರತದ ನಾಗರಿಕರಲ್ಲವೇ? ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲಿಲ್ಲವೇ? ನನ್ನ ದೂರುಗಳ ಹೊರತಾಗಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತವು ಮೂಕ ಪ್ರೇಕ್ಷಕವಾಗಿ ಕೈಕಟ್ಟಿ ಕುಳಿತಿದೆʼʼ ಎಂದು ಸಮಾಜವಾದಿ ಪಕ್ಷದ ದುಮಾರಿಯಾಂಗಂಜ್ ಶಾಸಕಿ ಸಯ್ಯದಾ ಖಾತೂನ್ ದೂರಿದ್ದಾರೆ.