ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs AUSW: ಆಸ್ಟ್ರೇಲಿಯಾ ವಿರುದ್ದ ಸೆಮಿಫೈನಲ್‌ ಕದನಕ್ಕೆ ಭಾರತ ವನಿತೆಯರು ಸಜ್ಜು!

INDW vs AUSW Semifinal: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನಾಳೆ (ಗುರುವಾರ) ನಡೆಯುವ 2025ರ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

Women's World Cup: ಆಸೀಸ್‌ ಎದುರು ಸೆಮಿಸ್‌ಗೆ ಭಾರತ ವನಿತೆಯರು ಸಜ್ಜು!

ಆಸ್ಟ್ರೇಲಿಯಾ ವಿರುದ್ದ ಸೆಮಿಫೈನಲ್‌ ಪಂದ್ಯಕ್ಕೆ ಭಾರತ ವನಿತೆಯರು ಸಜ್ಜು. -

Profile Ramesh Kote Oct 29, 2025 6:59 PM

ಮುಂಬೈ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು (INDW vs AUSW) 2025ರ ಮಹಿಳಾ ಏಕದಿನ ವಿಶ್ವಕಪ್‌ (ODI World Cup 2025) ಟೂರ್ನಿಯ ಸೆಮಿಫೈನಲ್‌ ಹಣಾಹಣಿಗೆ ಸಜ್ಜಾಗುತ್ತಿವೆ. ಲೀಗ್‌ ಹಂತದಲ್ಲಿ ಒಮ್ಮೆ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ನಾಯಕತ್ವದ ಭಾರತ ತಂಡ, ಇದೀಗ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಈ ಮಹತ್ವದ ಪಂದ್ಯ ಇಲ್ಲಿನ ಡಿ ವೈ ಪಾಟೀಲ್‌ ಸ್ಪೋರ್ಟ್ಸ್‌ ಅಂಗಣದಲ್ಲಿ ನಾಳೆ (ಅಕ್ಟೋಬರ್‌ 30) ನಡೆಯಲಿದೆ. ಭಾರತ ತಂಡಕ್ಕಿಂತ ಆಸ್ಟ್ರೇಲಿಯಾ ತಂಡದ ಆಟಗಾರ್ತಿಯರು ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಭಾರತದ ಎದುರು ಆಸೀಸ್‌ ಪ್ರಾಬಲ್ಯ ಸಾಧಿಸಿರುವುದನ್ನು ನಾವು ಅಂಕಿಅಂಶಗಳ ಮೂಲಕ ತಿಳಿದುಕೊಂಡಿದ್ದೇವೆ. ಹಾಗಾಗಿ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ.

ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಈ ಟೂರ್ನಿಯಲ್ಲಿ ತೋರಿದ ಅದೇ ಲಯವನ್ನು ಇದೀಗ ನಾಕೌಟ್‌ ಪಂದ್ಯದಲ್ಲಿಯೂ ತೋರಲು ಎದುರು ನೋಡುತ್ತಿದೆ. ಈ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆಸ್ಟ್ರೇಲಿಯಾ ಸದ್ಯ 13 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಆದರೆ, ಭಾರತ ಮಹಿಳಾ ತಂಡ ಕೊನೆಯ ಹಂತದಲ್ಲಿ ಸೆಮಿಫೈನಲ್‌ ಅರ್ಹತೆ ಪಡೆದರೂ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Women's ODI ranking: ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಮಂಧಾನ

ಈ ಟೂರ್ನಿಯಲ್ಲಿ ಮೂರನೇ ಅತಿ ಹೆಚ್ಚು ರನ್‌ ಗಳಿಸಿದ ಪ್ರತೀಕಾ ರಾವಲ್‌ ಅವರು ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಶಫಾಲಿ ವರ್ಮಾ ಬಂದಿದ್ದಾರೆ ಹಾಗೂ ಬಹುಶಃ ಅವರು ಸ್ಮೃತಿ ಮಂಧಾನಾ ಜೊತೆ ಇನಿಂಗ್ಸ್‌ ಆರಂಭಿಸಬಹುದು.

ಡಿವೈ ಪಾಟೀಲ್‌ ಕ್ರೀಡಾಂಗಣದ ಪಿಚ್‌ ರಿಪೋರ್ಟ್‌

ಡಾ ಡಿವೈ ಪಾಟೀಲ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ ಹಾಗೂ ಪಂದ್ಯದ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಪಿಚ್‌ ನೆರವು ನೀಡಲಿದೆ. ಹಾಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಈ ಪಂದ್ಯದಲ್ಲಿ ನಾವು ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಬಹುದು. ಇಲ್ಲಿನ ಪಿಚ್‌ ಫ್ಲ್ಯಾಟ್‌ ಆಗಿದ್ದು, ಬೌಂಡರಿಗಳ ಅಂತರ ಕಡಿಮೆ ಇದೆ ಹಾಗೂ ಬ್ಯಾಟ್ಸ್‌ಮನ್‌ಗಳು ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಅನ್ನು ಆನಂದಿಸಲಿದ್ದಾರೆ.

ಎರಡನೇ ಸೆಮಿಫೈನಲ್‌ ಪಂದ್ಯದ ವಿವರ

ಭಾರತ ಮಹಿಳಾ ತಂಡ vs ಆಸ್ಟ್ರೇಲಿಯಾ ಮಹಿಳಾ ತಂಡ

2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌

ದಿನಾಂಕ: ಅಕ್ಟೋಬರ್‌ 30, 2025

ಸಮಯ: ಮಧ್ಯಾಹ್ನ 03:00ಕ್ಕೆ

ಸ್ಥಳ: ಡಿ ವೈ ಪಾಟೀಲ್‌ ಕ್ರೀಡಾಂಗಣ, ಮುಂಬೈ

ಲೈವ್‌ ಸ್ಟ್ರೀಮಿಂಗ್‌: ಜಿಯೊ ಹಾಟ್‌ಸ್ಟಾರ್‌

Alyssa Healy: ಸೆಮಿಫೈನಲ್‌ಗೂ ಮುನ್ನ ಆಸೀಸ್‌ ತಂಡಕ್ಕೆ ಆನೆ ಬಲ; ತಂಡಕ್ಕೆ ಮರಳಿದ ನಾಯಕಿ ಹೀಲಿ

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 60

ಭಾರತದ ಗೆಲುವು: 11

ಆಸ್ಟ್ರೇಲಿಯಾದ ಗೆಲುವು: 49

ಭಾರತ ಮಹಿಳಾ ತಂಡದ ಸಂಭಾವ್ಯ ಪ್ಲೇಯಿಂಗ್‌ XI

ಶಫಾಲಿ ವರ್ಮಾ, ಸ್ಮೃತಿ ಮಂಧಾನಾ, ಹರ್ಲೀನ್‌ ಡಿಯೋಲ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೊಡ್ರಿಗಸ್‌, ದೀಪ್ತಿ ಶರ್ಮಾ, ಅಮನ್ಜೋತ್‌ ಕೌರ್‌, ರಿಚಾ ಘೋಷ್‌, ಸ್ನೇಹಾ ರಾಣಾ, ಕ್ರಾಂತಿ ಗೌಡ್‌, ನಲ್ಲಪುರೆಡ್ಡಿ ಚರಣಿ

AUS vs IND 1st T20I: ಮಳೆಯದ್ದೇ ಆಟ; ಭಾರತ-ಆಸೀಸ್‌ ಮೊದಲ ಟಿ20 ಪಂದ್ಯ ರದ್ದು

ಆಸ್ಟ್ರೇಲಿಯಾ ಮಹಿಳಾ ತಂಡದ ಸಂಭಾವ್ಯ ಪ್ಲೇಯಿಂಗ್‌ XI

ಅಲಿಸಾ ಹೀಲಿ (ನಾಯಕಿ/ ವಿಕೆಟ್‌ ಕೀಪರ್), ಫೋಬ್‌ ಲಿಚ್‌ಫೀಲ್ಡ್‌, ಎಲಿಸ್‌ ಪೆರಿ, ಬೆಥ್‌ ಮೂನಿ, ಅನಾಬೆಲ್‌ ಸೌಥರ್ಲೆಂಡ್‌, ಆಶ್ಲೆ ಗಾರ್ಡನರ್‌, ತಹ್ಲಿಯಾ ಮಗ್ರಾಥ್‌, ಜಾರ್ಜಿಯಾ ವಾರೆಹ್ಯಾಮ್‌, ಕಿಮ್‌ ಗಾರ್ಥ್‌, ಅಲಾನಾ ಕಿಂಗ್‌, ಮೆಗನ್‌ ಸ್ಕಾಟ್‌

ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನಾ, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್, ಶಫಾಲಿ ವರ್ಮಾ, ಉಮಾ ಚೆಟ್ರಿ, ರೇಣುಕಾ ಸಿಂಗ್ ಠಾಕೂರ್, ಸ್ನೇಹ ರಾಣಾ, ಶ್ರೀ ಚರಣಿ, ರಾಧಾ ಯಾದವ್, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್‌.

ಮೀಸಲು ಆಟಗಾರ್ತಿಯರು: ತೇಜಲ್‌ ಹಸನ್ಬಿಸ್‌, ಪ್ರೇಮಾ ರಾವತ್‌, ಪ್ರಿಯಾ ಮಿಶ್ರಾ, ಮಿನ್ನು ಮಣಿ, ಸಯಾಲಿ ಸತ್ಘರೆ.