IND vs ENG: ʻವಿರಾಟ್ ಕೊಹ್ಲಿ ಲಾರ್ಡ್ಸ್ ಟೆಸ್ಟ್ ಆಡಿದ್ದರೆ ಭಾರತ ಸುಲಭವಾಗಿ ಗೆಲ್ಲುತ್ತಿತ್ತುʼ-ಸ್ಟೀವ್ ಹಾರ್ಮಿಸನ್!
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ್ದರೆ ಭಾರತ ತಂಡ ಸುಲಭವಾಗಿ ಗೆಲುವು ಪಡೆಯುತ್ತಿತ್ತು ಎಂದು ಆಂಗ್ಲರ ಮಾಜಿ ವೇಗದ ಬೌಲರ್ ಸ್ಟೀವ್ ಹಾರ್ಮಿಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ರವೀಂದ್ರ ಜಡೇಜಾ ಕಠಿಣ ಹೋರಾಟ ನಡೆಸಿದರೂ ಭಾರತ ತಂಡ 22 ರನ್‌ಗಳಿಂದ ಸೋಲು ಅನುಭವಿಸಿತ್ತು.

ವಿರಾಟ್ ಕೊಹ್ಲಿ ಬಗ್ಗೆ ಸ್ಟೀವ್ ಹಾರ್ಮಿಸನ್ ದೊಡ್ಡ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಇಂಗ್ಲೆಂಡ್ ವಿರುದ್ದ ಮೂರನೇ ಹಾಗೂ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ(IND vs ENG) ವಿರಾಟ್ ಕೊಹ್ಲಿ (Virat Kohli) ಆಡಿದ್ದರೆ ಭಾರತ ತಂಡ ಸುಲಭವಾಗಿ ಗೆಲುವು ಪಡೆಯುತ್ತಿತ್ತು ಎಂದು ಆಂಗ್ಲರ ಮಾಜಿ ವೇಗದ ಬೌಲರ್ ಸ್ಟೀವ್ ಹಾರ್ಮಿಸನ್ (Steve Harmison) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 193 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ, ರವೀಂದ್ರ ಜಡೇಜಾ (61*) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಕೇವಲ 22 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ಸೋಲಿನ ಬಳಿಕ ಭಾರತ ತಂಡ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಹಿನ್ನಡ ಅನುಭವಿಸಿದೆ.
ಈ ಸರಣಿಯಲ್ಲಿ ಭಾರತ ತಂಡದ ಇದುವರೆಗಿನ ಪ್ರದರ್ಶನವನ್ನು ವಿಶ್ಲೇಷಿಸಿದ ಸ್ಟೀವ್ ಹಾರ್ಮಿಸನ್, ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಹೆಚ್ಚಿನ ಭಾಗ ಪ್ರಾಬಲ್ಯ ಸಾಧಿಸಿದ್ದರೂ, ಇಂಗ್ಲೆಂಡ್ ಎರಡು ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸುವ ಮಾರ್ಗವನ್ನು ಕಂಡುಕೊಂಡಿದೆ ಎಂದು ಹೇಳಿದ್ದಾರೆ. ಆದರೆ, ಭಾರತ ತಂಡದ ಆಟಗಾರರು, ತಮ್ಮ-ತಮ್ಮ ಸಾಮರ್ಥ್ಯವನ್ನು ನಂಬಬೇಕಾಗುತ್ತದೆ. ಒಂದು ವೇಳೆ ಈ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ್ದರೆ, ಟೀಮ್ ಇಂಡಿಯಾ ಗೆಲುವು ಪಡೆದಿರುತ್ತಿತ್ತು.
IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಸೂಕ್ತ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!
"ಭಾರತ ತಂಡ ಹೆಚ್ಚು ಶತಕಗಳು, ಹೆಚ್ಚಿನ ರನ್‌ಗಳು ಮತ್ತು ಹೊಸ ಚೆಂಡಿನಲ್ಲಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿದೆ, ಆದರೆ ಇಂಗ್ಲೆಂಡ್ ಗೆಲ್ಲುವ ಮಾರ್ಗವನ್ನು ಕಂಡುಕೊಳ್ಳುವ ಕೌಶಲವನ್ನು ಹೊಂದಿದೆ. ಪಂದ್ಯದ ದಿಕ್ಕನ್ನು ಬದಲಾಯಿಸಲು ಒಂದು ಅವಧಿಯ ಉದ್ದಕ್ಕೂ ಒಂದು ಘಟನೆಯನ್ನು ಸೃಷ್ಟಿಸುವ ಮಾರ್ಗವನ್ನು ಕಂಡುಕೊಳ್ಳುವುದು. ನನ್ನ ಮಟ್ಟಿಗೆ, ಭಾರತ ತಂಡ ತನ್ನನ್ನು ತಾನು ನಂಬಲು ಪ್ರಾರಂಭಿಸಬೇಕು. ವಿರಾಟ್ ಕೊಹ್ಲಿಯಂತಹ ನಂಬಲಾಗದ ಆಟಗಾರರು ಬಂದು ಹೋಗಿದ್ದಾರೆ. ನಾಲ್ಕನೇ ಇನಿಂಗ್ಸ್‌ನ ಚೇಸ್‌ನಲ್ಲಿ ವಿರಾಟ್ ಕೊಹ್ಲಿ ಆಡಿದ್ದರೆ ಭಾರತ ಪಂದ್ಯವನ್ನು ಆರಾಮವಾಗಿ ಗೆಲ್ಲುತ್ತಿದ್ದರು," ಎಂದು ಹಾರ್ಮಿಸನ್ ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಮ್ಯಾಚ್ ಡೇನಲ್ಲಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ನಾಲ್ಕನೇ ಇನಿಂಗ್ಸ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು 32 ಇನಿಂಗ್ಸ್‌ಗಳಿಂದ 42.38ರ ಸರಾಸರಿಯಲ್ಲಿ 1102 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಏಳು ಅರ್ಧಶತಕಗಳು ಅವರಿಂದ ಮೂಡಿ ಬಂದಿವೆ. 2014ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 141 (175) ಗಳಿಸಿದ ಅದ್ಭುತ ಆಟ ವಿರಾಟ್ ಕೊಹ್ಲಿಯವರ ನಾಲ್ಕನೇ ಇನಿಂಗ್ಸ್‌ನ ಶ್ರೇಷ್ಠ ಪ್ರದರ್ಶನವಾಗಿದೆ. ಆದಾಗ್ಯೂ, ದುರದೃಷ್ಟವಶಾತ್ ಅವರ ಇನಿಂಗ್ಸ್ ಸೋಲಿನಲ್ಲಿ ಕೊನೆಗೊಂಡಿತು ಮತ್ತು ಭಾರತ ತಂಡ 48 ರನ್‌ಗಳಿಂದ ಪಂದ್ಯದಲ್ಲಿ ಸೋಲು ಅನುಭವಿಸಿತು.
IND vs ENG 4th Test: ರೋಹಿತ್ ದಾಖಲೆ ಮುರಿಯುವ ಸನಿಹ ರಿಷಭ್ ಪಂತ್
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದ ಬಳಿಕ ಈ ಸರಣಿಯಲ್ಲಿ ಪ್ರವಾಸಿಗರು 1-2 ಹಿನ್ನಡೆಯನ್ನು ಅನುಭವಿಸಿದ್ದಾರೆ. ಇದೀಗ ಈ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕುತ್ತದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಜುಲೈ 23 ರಂದು ಈ ಪಂದ್ಯ ಆರಂಭವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ಟೀಮ್ ಇಂಡಿಯಾ ಈ ಸರಣಿಯಲ್ಲಿ ಸೋಲು ಅನುಭವಿಸಲಿದೆ.