Haveri News: ಡಿಸೆಂಬರ್ 5ರಂದು ಹಾವೇರಿ ಜಿಲ್ಲಾ ವಕೀಲರ ಸಂಘದ ಚುನಾವಣೆ; ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳು
Haveri District Bar Association election: ಹಾವೇರಿ ಜಿಲ್ಲಾ ವಕೀಲರ ಸಂಘದ 2025- 2027ನೇ ಸಾಲಿನ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ನ. 19 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಇದೀಗ ಅಂತಿಮವಾಗಿ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ- 3 ಉಪಾಧ್ಯಕ್ಷ ಸ್ಥಾನಕ್ಕೆ- 3, ಕಾರ್ಯದರ್ಶಿ ಸ್ಥಾನಕ್ಕೆ- 4, ಸಹ ಕಾರ್ಯದರ್ಶಿಗೆ - 3 ಖಜಾಂಚಿ- 3, ಆಡಳಿತ ಮಂಡಳಿ ಸ್ಥಾನಕ್ಕೆ 9 ಅಭ್ಯರ್ಥಿಗಳು ಸೇರಿ ಒಟ್ಟು 25 ಸ್ಪರ್ಧಿಗಳಿದ್ದಾರೆ.
ಹೇಮನಗೌಡ ಚನವೀರಗೌಡ ಶಿದ್ದನಗೌಡರ. -
ಹಾವೇರಿ, ನ. 20: ಜಿಲ್ಲಾ ವಕೀಲರ ಸಂಘದ 2025-2027ನೇ ಸಾಲಿನ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ನ. 19ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಇದೀಗ ಅಧ್ಯಕ್ಷ ಸ್ಥಾನಕ್ಕೆ- 3, ಉಪಾಧ್ಯಕ್ಷ ಸ್ಥಾನಕ್ಕೆ- 3, ಕಾರ್ಯದರ್ಶಿ ಸ್ಥಾನಕ್ಕೆ- 4, ಸಹ ಕಾರ್ಯದರ್ಶಿಗೆ - 3 ಖಜಾಂಚಿ- 3, ಆಡಳಿತ ಮಂಡಳಿ ಸ್ಥಾನಕ್ಕೆ 9 ನಾಮಪತ್ರ ಸಲ್ಲಿಕೆಯಾಗಿದ್ದು, ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳಿದ್ದಾರೆ. ಡಿಸೆಂಬರ್ 5ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ (Haveri News). ಜಿಲ್ಲಾ ಕೋರ್ಟ್ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಾರ್ಯಾಲಯದಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಅಂದು ಸಂಜೆ 4.30ರಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.
ಅಧ್ಯಕ್ಷ ಸ್ಥಾನಕ್ಕೆ ಶಂಭಣ್ಣ ಹೇಮಣ್ಣ ಜತ್ತಿ, ಪ್ರಕಾಶ ರಾಮಣ್ಣ ಮುಂಜೋಜಿ ಹಾಗೂ ಹೇಮನಗೌಡ ಚನವೀರಗೌಡ ಶಿದ್ದನಗೌಡರ ಕಣದಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ರಾಮಪ್ಪ ಹಾದಿಮನಿ, ಶಿವಕುಮಾರಗೌಡ ಚನ್ನಬಸವನಗೌಡ ಪಾಟೀಲ ಹಾಗೂ ಮಾರುತಿ ಹನುಮಂತಪ್ಪ ವಾಲಿಕಾರ ಸ್ಪರ್ಧಿಸಿದ್ದಾರೆ.
ಇನ್ನು ಕಾರ್ಯದರ್ಶಿ ಸ್ಥಾನಕ್ಕೆ ಪುಟ್ಟಪ್ಪ ಶಂಭಣ್ಣ ಹೆಬ್ಬಾಳ, ಚಂದ್ರಶೇಖರಯ್ಯ ಚನ್ನಯ್ಯ ಗಬ್ಬೂರಮಠ, ಮಾಹಂತೇಶ ಮಹದೇವಪ್ಪ ಬ್ಯಾಳಿ, ಭರಮನಗೌಡ ರಾಮನಗೌಡ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಸಹ ಕಾರ್ಯದರ್ಶಿ ಸ್ಥಾನಕ್ಕೆ ಚನ್ನವೀರಸ್ವಾಮಿ ಶಿದ್ರಾಮಯ್ಯ ಹಿರೇಮಠ, ಮಹಮ್ಮದ ಉಮರ ಮಹಮ್ಮದ ಸಾಧಿಕ್ ರಜಾಕನವರ, ಭೀಮನಗೌಡ ಮೃತ್ಯುಂಜಯಪ್ಪ ಮಾಳಗಿ, ಅಂತಿಮವಾಗಿ ಕಣದಲ್ಲಿದ್ದಾರೆ. ಖಜಾಂಚಿ ಸ್ಥಾನಕ್ಕಾಗಿ ಅಶ್ವಿನಿ ವಾಮನ ಕೇಳಕರ, ರೆಹಾನಾ ಇಸ್ಮಾಯಿಲಸಾಬ ಚನ್ನಪಟ್ಟಣ, ಚನ್ನಮ್ಮ ಮುಕಪ್ಪ ನೆಗಳೂರ ಸ್ಪರ್ಧಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | DK Suresh: ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ತಪ್ಪುವವರಲ್ಲ: ಡಿ.ಕೆ. ಸುರೇಶ್ ಹೀಗೆ ಹೇಳಿದ್ಯಾಕೆ?
ಆಡಳಿತ ಮಂಡಳಿ ಸ್ಥಾನಗಳಿಗೆ ಚಿದಾನಂದ ವೀರಪ್ಪ ಬಡಿಗೇರ, ಸತೀಶ ಬಸವರಾಜ ಹಳೇಮನಿ, ತಿಮ್ಮಣ್ಣ ವೆಂಕಪ್ಪ ರಟ್ಟಿಹಳ್ಳಿ, ಗುಲಾಬ ಸಾಹೇಬ ಖಾನಸಾಹೇಬ ನಾಗನೂರ, ಶಿವಾನಂದ ಶಿವಪ್ಪ ಸಣ್ಣತಮ್ಮಣ್ಣನವರ, ಕರಬಸಪ್ಪ ಲಕ್ಷ್ಮಪ್ಪ ಅಂಗರಗಟ್ಟಿ, ಶಿವಯೋಗಿ ಚಂದ್ರಶೇಖರ ಕುರವತ್ತಿಗೌಡ, ಶಾಂತಪ್ಪ ಚನ್ನಪ್ಪ ಪೂಜಾರ, ಗುಡ್ಡನಗೌಡ ಬಸನಗೌಡ ಅಂದಾನಿಗೌಡ್ರ ಸ್ಪರ್ಧಿಸಿದ್ದಾರೆ.