IND vs ENG: ಆದಿಲ್ ರಶೀದ್ ಎದುರು ಮುಂದುವರಿದ ವಿರಾಟ್ ಕೊಹ್ಲಿಯ ವೈಫಲ್ಯ! ಇಂಗ್ಲೆಂಡ್ ಸ್ಪಿನ್ನರ್‌ಗೆ ಔಟಾಗಿರುವುದು ಎಷ್ಟನೇ ಬಾರಿ ಗೊತ್ತೆ?
Virat Kohli vs Adil Rashid: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕವನ್ನು ಸಿಡಿಸಿದ್ದಾರೆ. ದೊಡ್ಡ ಇನಿಂಗ್ಸ್ ಕಟ್ಟುವ ಭರವಸೆ ನೀಡಿದರೂ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕೈಚೆಲ್ಲಿದರು. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 5 ಬಾರಿ ಆದಿಲ್ ರಶೀದ್‌ಗೆ ಕೊಹ್ಲಿ ವಿಕೆಟ್ ಕೈಚೆಲ್ಲಿದ್ದಾರೆ.

Adil Rashid-Virat Kohli

ಅಹಮದಾಬಾದ್: ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಎದುರು ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವೈಫಲ್ಯ ಮುಂದುವರಿದಿದೆ. ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಆಡುವ ಭರವಸೆಯನ್ನು ಮೂಡಿಸಿದ್ದರು. ಆದರೆ, ಅದೇ ರಾಗ-ಅದೇ ತಾಳ ಎಂಬಂತೆ ಆದಿಲ್ ರಶೀದ್ ಸ್ಪಿನ್ ಮೋಡಿಗೆ ಶರಣಾದರು.
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ವಿರಾಟ್ ಕೊಹ್ಲಿ, 55 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 52 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಶತಕ ಸಿಡಿಸುವ ಮೂಲಕ ಭರವಸೆಯವನ್ನು ಮೂಡಿಸಿದ್ದರು. ಆದರೆ, ಆದಿಲ್ ರಶೀದ್ ಎಸೆದಿದ್ದ ಚೆಂಡು ಲೆಗ್ ಸ್ಟಂಪ್‌ನಿಂದ ತಿರುಗಿ ವಿರಾಟ್ ಕೊಹ್ಲಿಗೆ ತಾಗಿ ವಿಕೆಟ್ ಕೀಪರ್ ಫಿಲ್ ಸಾಲ್ಡ್ ಕೈ ಸೇರಿತು. ಆ ಮೂಲಕ ವಿರಾಟ್ ಕೊಹ್ಲಿ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
IND vs ENG: ರೋಹಿತ್,ಕೊಹ್ಲಿಯಿಂದ ಸಾಧ್ಯವಾಗದ ಅಪರೂಪದ ದಾಖಲೆ ಬರೆದ ಶುಭಮನ್ ಗಿಲ್!
ಕಟಕ್‌ನ ಬಾರಬತಿ ಸ್ಟಡಿಯಂನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ, ಇದೇ ರೀತಿ ವಿಕೆಟ್ ಒಪ್ಪಿಸಿದ್ದರು. ಆರು ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಮರಳಿದ್ದ ಕೊಹ್ಲಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇಂಗ್ಲೆಂಡ್ ಎದುರು ಒಡಿಐನಲ್ಲಿ ಒಟ್ಟು 10 ಬಾರಿ ಔಟ್ ಆಗಿರುವ ಪೈಕಿ 5 ಬಾರಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಆದಿಲ್ ರಶೀದ್‌ಗೆ 11 ಬಾರಿ ಔಟ್ ಆಗಿರುವ ಕೊಹ್ಲಿ
ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಆದಿಲ್ ರಶೀದ್ ಅವರು ಒಟ್ಟು 11 ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಜಾಶ್ ಹೇಝಲ್‌ವುಡ್ ಹಾಗೂ ಟಿಮ್ ಸೌಥಿ ಅವರೊಂದಿಗೆ ಜಂಟಿ ದಾಖಲೆಯನ್ನು ಹೊಂದಿದ್ದಾರೆ.
Adil Rashid in 3rd ODI at Narendra Modi Stadium in Ahmedabad..!!!
— MANU. (@Manojy9812) February 12, 2025
- Virat Kohli
- Shubman Gill
- Shreyas Iyer
- Hardik Pandya
(10-0-64-4) WHAT A INCREDIBLE BOWLING SPELL BY ADIL RASHID GREAT NEWS FOR ENGLAND AHEAD OF CHAMPIONS TROPHY 2025.!!!!
pic.twitter.com/x59Mz1JlIs
ಆಸ್ಟ್ರೇಲಿಯಾ ವಿರುದ್ದ ಪರ್ತ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಎಂಟು ಇನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ, ಅವರಿಂದ ಒಂದೂ ಅರ್ಧಶತಕ ಮೂಡಿ ಬಂದಿರಲಿಲ್ಲ. ಪ್ರಸ್ತುತ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಅವರು 2024 ರಿಂದ ಮೂರೂ ಸ್ವರೂಪದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಇದರ ನಡುವೆ ಅಹಮದಾಬಾದ್‌ನಲ್ಲಿ ಶತಕ ಸಿಡಿಸಿದ ಬಳಿಕ ಕೊಹ್ಲಿ, ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಫಾರ್ಮ್‌ಗೆ ಮರಳುವ ಭರವಸೆಯನ್ನು ನೀಡಿದ್ದಾರೆ.
IND vs ENG: ತಮ್ಮ 7ನೇ ಶತಕದ ಮೂಲಕ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್!
ಶುಭಮನ್ ಗಿಲ್ ಜತೆ 116 ರನ್ ಜೊತೆಯಾಟ
ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸುವ ಜೊತೆಗೆ ಶುಭಮನ್ ಗಿಲ್ ಜೊತೆ ಮುರಿಯದ ಎರಡನೇ ವಿಕೆಟ್‌ಗೆ 107 ಎಸೆತಗಳಲ್ಲಿ 116 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಎರಡನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಅನ್ನು ಕಳೆದುಕೊಂಡಿದ್ದ ಭಾರತ ತಂಡಕ್ಕೆ ಉತ್ತಮ ಆರಂಭ ಪಡೆಯಲು ನೆರವು ನೀಡಿದ್ದರು. ಅಂತಿಮವಾಗಿ ಭಾರತ ತಂಡ ಶುಭಮನ್ ಗಿಲ್ ಶತಕ ಹಾಗೂ ಶ್ರೇಯಸ್ ಅಯ್ಯರ್ ಶತಕದ ಬಲದಿಂದ 50 ಓವರ್‌ಗಳಿಗೆ 356 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.