ನಾಗ್ಪುರ: ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಗೂ (IND vs ENG) ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಪತ್ರಕರ್ತ ಕೇಳಿದ ಪ್ರಶ್ನೆಗೆ ಹಿಟ್‌ಮ್ಯಾನ್ ಗರಂ ಆದರು. ನೀವು ಯಾವ ರೀತಿಯ ಪ್ರಶ್ನೆಯನ್ನು ಕೇಳುತ್ತಿದ್ದೀರಿ ಎಂದು ರೋಹಿತ್ ಶರ್ಮಾ ಹೇಳುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲನೇ ಏಕದಿನ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ಈ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮಾಗೆ, ಪತ್ರಕರ್ತರು ಪ್ರಶ್ನೆಗಳ ಸುರಿ ಮಳೆಗೈದರು. ಆದರೆ, ಕೆಲವೊಂದು ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಪತ್ರಕರ್ತರ ವಿರುದ್ಧ ಗರಂ ಆದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬ್ಯಾಟ್ಸ್‌ಮನ್ ಆಗಿ ಹಾಗೂ ನಾಯಕನಾಗಿ ವೈಫಲ್ಯ ಅನುಭವಿಸಿದ್ದರು. ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿ, ಏಕದಿನ ಸರಣಿಯಲ್ಲಿನ ಸವಾಲನ್ನು ಹೇಗೆ ಸ್ವೀಕರಿಸುತ್ತೀರಿ? ಎಂಬ ಪ್ರಶ್ನೆಯನ್ನು ರೋಹಿತ್ ಶರ್ಮಾಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದರು.
IND vs ENG: ಮೊದಲನೇ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ XI ಪ್ರಕಟ!
ವರದಿಗಾರ: "ನಮಸ್ಕಾರ ರೋಹಿತ್. ಟೆಸ್ಟ್ ಸ್ವರೂಪದಲ್ಲಿ ನಿಮ್ಮ ಕಡೆಯಿಂದ ರನ್‌ಗಳು ಮೂಡಿಬಂದಿಲ್ಲವಾದರೂ, ಹಿಟ್‌ಮ್ಯಾನ್ ಆಗಿ ನೀವು 50 ಓವರ್‌ಗಳ ಸ್ವರೂಪದಲ್ಲಿ ಬ್ಯಾಟ್ ಮಾಡುವ ವಿಶ್ವಾಸವನ್ನು ಹೊಂದಿದ್ದೀರಾ?" ಎಂಬ ಪ್ರಶ್ನೆಯನ್ನು ಹಾಕಿದರು.
ರೋಹಿತ್ ಶರ್ಮಾ: "ನಗುತ್ತಾ ಇದು ಯಾರ ರೀತಿಯ ಪ್ರಶ್ನೆ? ಇದು ವಿಭಿನ್ನ ಸ್ವರೂಪ, ವಿಭಿನ್ನ ಸಮಯ.
"ಒಬ್ಬ ಕ್ರಿಕೆಟಿಗನಾಗಿ ತಮ್ಮ ವೃತ್ತಿ ಜೀವದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ ಎಂಬುದು ನಮಗೆ ಗೊತ್ತಿದೆ. ಇದನ್ನು ನಾನು ಸಾಕಷ್ಟು ಬಾರಿ ಅನುಭವಿಸಿದ್ದೇನೆ. ಪ್ರತಿಯೊಂದು ದಿನ ತಾಜಾತನದಿಂದ ಕೂಡಿದೆ, ಪ್ರಯೊಂದು ಸರಣಿ ಹೊಸ ಸರಣಿಯಾಗಿರುತ್ತದೆ ಎಂದು ನಮಗೆ ತಿಳಿದಿದೆ. ನಾವು ಹೊಸ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿದ್ದೇನೆ. ಈ ಹಿಂದೆ ಏನಾಗಿತ್ತು ಎಂಬುದನ್ನು ನೋಡಲು ನಾನು ಹೋಗುವುದಿಲ್ಲ. ಸ್ವಷ್ಟವಾಗಿ ಇದು ಅಗತ್ಯವಿಲ್ಲ," ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
"ಈ ಹಿಂದಿನದನ್ನು ನೋಡಲು ನನಗೆ ಯಾವುದೇ ಕಾರಣಗಳಿಲ್ಲ. ನಿಮ್ಮ ಮುಂದೆ ಏನು ಬರುತ್ತದೆ ಎಂಬುದರ ಕಡೆ ಗಮನ ಕೊಡುವುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ. ಈ ಸರಣಿಯಲ್ಲಿ ಅಗ್ರ ದರ್ಜೆಯೊಂದಿಗೆ ಆಡಲು ಎರು ನೋಡುತ್ತಿದ್ದೇನೆ," ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ಹೇಳಿದ್ದಾರೆ.
IND vs ENG: ಕೊಹ್ಲಿಯಲ್ಲ, ಭಾರತದ ಆಕ್ರಮಣಕಾರಿ ಆಟಕ್ಕೆ ಈ ಆಟಗಾರನೇ ಕಾರಣ ಎಂದ ಜೋಸ್ ಬಟ್ಲರ್!
ನನ್ನ ಭವಿಷ್ಯದ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ತಮ್ಮ ಭವಿಷ್ಯದ ಬಗ್ಗೆ ಮಾಧ್ಯಮಗಳ ವರದಿಗಳ ಬಗ್ಗೆ ಖಚಿತಪಡಿಸಲು ರೋಹಿತ್ ಶರ್ಮಾ ನಿರಾಕರಿಸಿದರು. ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳು ನಮ್ಮ ಮುಂದೆ ಇವೆ. ಇಂಥಾ ಸಮಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.
"ಕಳೆದ ಹಲವು ವರ್ಷಗಳಿಂದ ನನ್ನ ಕ್ರಿಕೆಟ್ ಬಗೆಗಿನ ವರದಿಗಳು ಹರಿದಾಡುತ್ತಿವೆ. ಈ ವರದಿಗಳ ಬಗ್ಗೆ ಸ್ಪಷ್ಟಪಡಿಸಲು ನಾನು ಇಲ್ಲಿಗೆ ಬಂದಿಲ್ಲ," ಎಂದು ರೋಹಿತ್ ಶರ್ಮಾ ಖಾರವಾಗಿ ಸುದ್ದಿಗಾರರಿಗೆ ಉತ್ತರ ನೀಡಿದರು.