ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs IRE: 304 ರನ್‌ಗಳಿಂದ ಗೆದ್ದು ಇತಿಹಾಸ ಬರೆದ ಭಾರತ ವನಿತೆಯರು!

IND vs IRE 3rd ODI Highlights: ಐರ್ಲೆಂಡ್‌ ವಿರುದ್ಧ ಮೂರನೇ ಹಾಗೂ ಮಹಿಳಾ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ 304 ರನ್‌ಗಳ ದಾಖಲೆಯ ಗೆಲುವು ಪಡೆದಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಮೃತಿ ಮಂಧಾನಾ ಪರ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು.

ಮೂರನೇ ಪಂದ್ಯ ಗೆದ್ದು ಒಡಿಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

IND vs IRE 3rd ODI Highlights

Profile Ramesh Kote Jan 15, 2025 7:34 PM

ರಾಜ್ ಕೋಟ್: ಐರ್ಲೆಂಡ್ ವಿರುದ್ಧದ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದೆ. ಸ್ಮೃತಿ ಮಂಧಾನಾ ನಾಯಕತ್ವದಲ್ಲಿ ಭಾರತ ತಂಡ 304 ರನ್‌ಗಳ ಜಯ ಸಾಧಿಸಿದೆ. ಏಕದಿನ ಇತಿಹಾಸದಲ್ಲಿಯೇ ಟೀಮ್‌ ಇಂಡಿಯಾದ ಅತಿ ದೊಡ್ಡ ಗೆಲುವು ಇದಾಗಿದೆ.

ಇಲ್ಲಿನ ನಿರಂಜನ್‌ ಶಾ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಮಹಿಳಾ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 435 ರನ್ ಗಳಿಸಿತ್ತು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಅತಿ ದೊಡ್ಡ ಸ್ಕೋರ್ ಆಗಿದೆ. ಇದಾದ ಬಳಿಕ ಬೌಲರ್‌ಗಳು ಐರ್ಲೆಂಡ್‌ ತಂಡವನ್ನು ಕೇವಲ 131 ರನ್‌ಗಳಿಗೆ ಆಲ್‌ಔಟ್‌ ಮಾಡಿದರು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಭಾರತ ತಂಡ 3-0 ಅಂತರದಿಂದ ಮುಡಿಗೇರಿಸಿಕೊಂಡಿದೆ.

IND vs IRE: ಚೊಚ್ಚಲ ಶತಕ ಸಿಡಿಸಿದ ಪ್ರತೀಕಾ ರಾವಲ್‌ ಯಾರು? ಇಲ್ಲಿದೆ ಮಾಹಿತಿ!

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡದ ಅತಿ ದೊಡ್ಡ ಗೆಲುವು

ಐರ್ಲೆಂಡ್ ವಿರುದ್ಧ 304 ರನ್ ಜಯ, ರಾಜ್‌ಕೋಟ್, 2025

ಐರ್ಲೆಂಡ್ ವಿರುದ್ಧ 249 ರನ್‌ಗಳ ಜಯ, ಪಾಚೆಫ್‌ಸ್ಟ್ರೂಮ್, 2017

ವೆಸ್ಟ್ ಇಂಡೀಸ್ ವಿರುದ್ಧ 211 ರನ್ ಜಯ, ವಡೋದರಾ, 2024

ಪಾಕಿಸ್ತಾನ ವಿರುದ್ಧ 207 ರನ್‌ ಜಯ, ದಾಂಬುಲಾ, 2008

ಪಾಕಿಸ್ತಾನ ವಿರುದ್ಧ 193 ರನ್ ಜಯ, ಕರಾಚಿ, 2005



ವೇಗದ ಶತಕ ಸಿಡಿಸಿದ ಸ್ಮೃತಿ ಮಂಧಾನಾ

ಈಗಾಗಲೇ ಸರಣಿ ಗೆದ್ದಿರುವ ಭಾರತ ತಂಡ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಲು ನಿರ್ಧರಿಸಿತ್ತು ಮೊದಲನೇ ವಿಕೆಟ್‌ಗೆ ಸ್ಮೃತಿ ಮಂಧಾನಾ ಮತ್ತು ಯುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 26.4 ಓವರ್‌ಗಳಲ್ಲಿ 233 ರನ್ ಸೇರಿಸಿದರು. ಈ ವೇಳೆ ಸ್ಮೃತಿ ಮಂಧಾನಾ 70 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಮಹಿಳಾ ಏಕದಿನದಲ್ಲಿ ಭಾರತದ ಅತಿ ವೇಗದ ಶತಕದ ದಾಖಲೆಯಾಗಿದೆ. 80 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 135 ರನ್ ಗಳಿಸಿ ಔಟಾದರು.

ಇದಾದ ಬಳಿಕ ಪ್ರತೀಕಾ ರಾವಲ್‌ ಕೂಡ ಶತಕವನ್ನು ಪೂರ್ಣಗೊಳಿಸಿದರು. ಅವರು 129 ಎಸೆತಗಳಲ್ಲಿ 154 ರನ್ ಗಳಿಸಿದರು. ಹರ್ಮನ್‌ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ನಂತರ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ 150 ರನ್ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ವುಮೆನ್‌ ಎನಿಸಿಕೊಂಡರು. ರಿಚಾ ಘೋಷ್ 42 ಎಸೆತಗಳಲ್ಲಿ 59 ರನ್ ಗಳಿಸಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಭಾರತ ತಂಡ ಎದುರಾಳಿ ಐರ್ಲೆಂಡ್‌ಗೆ 436 ರನ್‌ ಗುರಿ ನೀಡಿತು.



ಐರ್ಲೆಂಡ್ ಬ್ಯಾಟಿಂಗ್ ಸಂಪೂರ್ಣ ವಿಫಲ

ಬಳಿಕ ಗುರಿ ಹಿಂಬಾಲಿಸಿದ ಐರ್ಲೆಂಡ್‌ ಕಳಪೆ ಆರಂಭ ಪಡೆದಿತ್ತು. ಮೂರನೇ ಓವರ್‌ನಲ್ಲಿ ನಾಯಕ ಜಬ್ಬಿ ಲೂಯಿಸ್ (1) ಅವರನ್ನು ಟಿಟಾಸ್ ಸಧು ಔಟ್ ಮಾಡಿದರು. ಕೌಲ್ಟರ್ ರೈಲಿಗೆ ಖಾತೆ ತೆರೆಯಲೂ ಸಯಾಲಿ ಸತ್ಘರೆ ಅವಕಾಶ ನೀಡಲಿಲ್ಲ. ಇದರ ನಂತರ, ಮೂರನೇ ವಿಕೆಟ್‌ಗೆ ಸಾರಾ ಫೋರ್ಬ್ಸ್ (41) ಮತ್ತು ಓರ್ಲಾ ಪ್ರೆಂಡರ್‌ಜೆಸ್ಟ್ (36) ನಡುವೆ 64 ರನ್‌ಗಳ ಜೊತೆಯಾಟವಿತ್ತು. ಒರ್ಲಾ ಅವರನ್ನು ಔಟ್ ಮಾಡುವ ಮೂಲಕ ತನುಜಾ ಕನ್ವರ್ 88 ಸ್ಕೋರ್‌ನಲ್ಲಿ ಈ ಜೊತೆಯಾಟವನ್ನು ಮುರಿದರು. ಇದಾದ ಬಳಿಕ ವಿಕೆಟ್ ಪತನದ ಪ್ರಕ್ರಿಯೆ ಆರಂಭವಾಯಿತು. ಅಂತಿಮವಾಗಿ ಐರ್ಲೆಂಡ್ ಇನಿಂಗ್ಸ್ 32ನೇ ಓವರ್‌ನಲ್ಲಿ 131 ರನ್‌ಗಳಿಗೆ ಕುಸಿಯಿತು. ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್ ಪಡೆದರು.