IND vs NZ: ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಗಿಲ್ ನಾಯಕ!
Shubman Gill: ಮಾರ್ಚ್ 2 ರಂದು ನಡೆಯುವ ನ್ಯೂಜಿಲ್ಯಾಂಡ್(IND vs NZ) ವಿರುದ್ಧದ ಅಂತಿಮ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಖಾಯಂ ನಾಯಕ ರೋಹಿತ್ ಈ ಪಂದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.


ದುಬೈ: ವೈರಲ್ ಜ್ವರದಿಂದ ಗುಣಮುಖರಾಗಿರುವ ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭಮನ್ ಗಿಲ್(Shubman Gill) ಅವರು ಶುಕ್ರವಾರ ಸಹ ಆಟಗಾರರೊಂದಿಗೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಬುಧವಾರ ಅಭ್ಯಾಸದಿಂದ ಹೊರಗುಳಿದಿದ್ದ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಅಭ್ಯಾಸ ನಿರತರಾಗಿರುವ ಗಿಲ್ ಮಾರ್ಚ್ 2 ರಂದು ನಡೆಯುವ ನ್ಯೂಜಿಲ್ಯಾಂಡ್(IND vs NZ) ವಿರುದ್ಧದ ಅಂತಿಮ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಖಾಯಂ ನಾಯಕ ರೋಹಿತ್ ಈ ಪಂದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ರೋಹಿತ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದು ಸ್ಪಲ್ಪ ಮಟ್ಟಿನ ಫಿಟ್ನೆಸ್ ಸಮಸ್ಯೆ ಹೊಂದಿದ್ದಾರೆ ಎನ್ನಲಾಗಿದೆ. ಸೆಮಿಫೈನಲ್‌ಗೆ ಇವರ ಲಭ್ಯತೆ ಮುಖ್ಯ. ಹೀಗಾಗಿ ಕಿವೀಸ್ ವಿರುದ್ಧದ ಪಂದ್ಯಕ್ಕೆ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ರೋಹಿತ್ ಜತೆ ವೇಗಿ ಮೊಹಮ್ಮದ್ ಶಮಿಗೂ ವಿಶ್ರಾಂತಿ ನೀಡಲಿದ್ದಾರೆ ಎನ್ನಲಾಗಿದೆ. ಇವರಿಬ್ಬರ ಬದಲಿಗೆ ರಿಷಭ್ ಪಂತ್ ಮತ್ತು ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ತಿಳಿದುಬಂದಿದೆ.
Spring hai Rishabh Pant ke Bat me pic.twitter.com/GXorxYRJmH
— Memer (@memerbhoiii) February 28, 2025
ಶುಕ್ರವಾರ ಶಮಿ ಮತ್ತು ರೋಹಿತ್ ಅಭ್ಯಾಸ ನಡೆಸಿಲ್ಲ. ವಿರಾಟ್ ಕೊಹ್ಲಿ ಜತೆ ರಿಷಭ್ ಪಂತ್ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಹೀಗಾಗಿ ಪಂತ್ ನ್ಯೂಜಿಲ್ಯಾಂಡ್ ವಿರುದ್ಧ ಆಡುವುದು ಖಚಿತವಾಗಿದೆ. ರೋಹಿತ್ ಹೊರಗುಳಿದರೆ ಕನ್ನಡಿಗ ಕೆ.ಎಲ್. ರಾಹುಲ್(KL Rahul) ಆರಂಭಿಕನಾಗಿ ಗಿಲ್ ಜತೆ ಇನಿಂಗ್ಸ್ ಆರಂಭಿಸಬಹುದು.
ಕಿವೀಸ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡ
ಶುಭಮನ್ ಗಿಲ್, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಕುಲದೀಪ್ ಯಾದವ್.