ದುಬೈ: ಪಾಕಿಸ್ತಾನ ವಿರುದ್ಧ ಸಾಗುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟಾಸ್ ಸೋಲುವ ಮೂಲಕ ಭಾರತ ತಂಡ ಕೆಟ್ಟ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಬಾರಿ ಟಾಸ್ ಸೋತ ತಂಡ ಎಂಬ ಹಣೆಪಟ್ಟಿ ತನ್ನದಾಗಿಸಿಕೊಂಡಿದೆ. ಇದು ಸತತವಾಗಿ 12ನೇ ಬಾರಿ ಭಾರತ ಟಾಸ್ ಸೋತ ನಿದರ್ಶನವಾಗಿದೆ. ಇದನ್ನೂ ಮುನ್ನ ಈ ಕೆಟ್ಟ ದಾಖಲೆ ನೆದರ್ಲೆಂಡ್ಸ್ ಹೆಸರಿನಲ್ಲಿತ್ತು. ನೆದರ್ಲೆಂಡ್ಸ್ 11 ಬಾರಿ ಟಾಸ್ ಸೋತ್ತಿತ್ತು.
ಏಕದಿನದಲ್ಲಿ ಸತತ ಹೆಚ್ಚು ಬಾರಿ ಟಾಸ್ ಸೋತ ತಂಡ
ಭಾರತ-12 ಬಾರಿ(2023-2025)
ನೆದರ್ಲೆಂಡ್ಸ್ -11 ಬಾರಿ(2011-2013)
ಇಂಗ್ಲೆಂಡ್-9 ಬಾರಿ (2023)
ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡು ಉತ್ತಮ ರನ್ ಕಲೆ ಹಾಕುತ್ತಿದೆ. ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡರೂ ನಾಯಕ ರಿಜ್ವಾನ್ ಮತ್ತು ಸೌದ್ ಶಕೀಲ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 150ರ ಗಡಿ ದಾಟಿದೆ. ಸೌದ್ ಶಕೀಲ್ ಅರ್ಧಶತಕ ಪೂರ್ತಿಗೊಳಿಸಿದ್ದಾರೆ.
ಬಾಬರ್ ಅಜಂ ಈ ಪಂದ್ಯದಲ್ಲಿಯೂ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲವಾಗಿ 23 ರನ್‌ಗೆ ವಿಕೆಟ್ ಕೈಚೆಲ್ಲಿದರು. ಫಖರ್ ಜಮಾನ್ ಬದಲಿಗೆ ಆಡಲಿಳಿದ ಇಮಾಮ್ ಉಲ್ ಹಕ್ 10 ರನ್ ಗಳಿಸಿದ್ದ ವೇಳೆ ಅಕ್ಷರ್ ಪಟೇಲ್ ಎಸೆತ ಡೈರೆಕ್ಟ್ ಥ್ರೊಗೆ ರನೌಟ್ ಆದರು. ಮೊಹಮ್ಮದ್ ರಿಜ್ವಾನ್ 46 ರನ್ ಬಾರಿಸಿದರು.
ಇದನ್ನೂ ಓದಿ IND vs PAK: ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ
ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್(ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ,ಕುಲ್‌ದೀಪ್ ಯಾದವ್.
ಪಾಕಿಸ್ತಾನ: ಬಾಬರ್ ಅಜಂ, ಇಮಾಮ್-ಉಲ್-ಹಕ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿ.ಕೀ), ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.