ಇಂಡಿಯಾ ಓಪನ್ ಸೆಮಿಯಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು; ಭಾರತದ ಸವಾಲು ಅಂತ್ಯ
India Open: ಶನಿವಾರ ನಡೆದ ಸೆಮಿ ಕಾದಾಟದಲ್ಲಿ ನೀರಸ ಪ್ರದರ್ಶನ ತೋರಿದ ಭಾರತೀಯ ಜೋಡಿ ಮಲೇಷ್ಯಾದ ಗೋಹ್ ಸ್ಜೆ ಫೀ ಮತ್ತು ನೂರ್ ಇಝುದ್ದೀನ್ ಜೋಡಿಯ ವಿರುದ್ಧ 18-21, 14-21 ಅಂತದ ಹೀನಾಯ ಸೋಲು ಕಂಡರು.

Satwiksairaj-Chirag

ನವದೆಹಲಿ: ಇಂಡಿಯಾ ಓಪನ್ ಸೂಪರ್ 750 ಯಲ್ಲಿ ಭಾರತದ ಕೊನೆಯ ಪದಕ ನಿರೀಕ್ಷೆಯಾಗಿದ್ದ, ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ. 2022 ರಲ್ಲಿ ಈ ಜೋಡಿ ಪ್ರಶಸ್ತಿ ಜಯಿಸಿತ್ತು.
ಶನಿವಾರ ನಡೆದ ಸೆಮಿ ಕಾದಾಟದಲ್ಲಿ ನೀರಸ ಪ್ರದರ್ಶನ ತೋರಿದ ಭಾರತೀಯ ಜೋಡಿ ಮಲೇಷ್ಯಾದ ಗೋಹ್ ಸ್ಜೆ ಫೀ ಮತ್ತು ನೂರ್ ಇಝುದ್ದೀನ್ ಜೋಡಿಯ ವಿರುದ್ಧ 18-21, 14-21 ಅಂತದ ಹೀನಾಯ ಸೋಲು ಕಂಡರು. ಚಿರಾಗ್-ಸಾತ್ವಿಕ್ ಜೋಡಿ ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಿನ್ ಯೋಂಗ್-ಕಾಂಗ್ ಮಿನ್ ಹ್ಯುಕ್ ಅವರನ್ನು 21-10, 21-17 ನೇರ ಗೇಮ್‌ಗಳಿಂದ ಮಣಿಸಿ ಸೆಮಿಗೆ ಲಗ್ಗೆಯಿಟ್ಟಿದ್ದರು. ಆದರೆ ಸೆಮಿಯಲ್ಲಿ ಎಡವಿದರು.
#Badminton: Satwiksairaj Rankireddy and Chirag Shetty faced a setback defeat in men's doubles. They lost to the Malaysian pair of Nur Izzuddin and Goh Sze Fei 18-21, 14-21 in #NewDelhi.#IndiaOpenBadminton | pic.twitter.com/EgdpApIYr9
— All India Radio News (@airnewsalerts) January 18, 2025
ಶುಕ್ರವಾರ ನಡೆದಿದ್ದ ಮಹಿಳಾ ಮತ್ತು ಪುರುಷರ ಕ್ವಾಟರ್ರ ಫೈನಲ್ ಪಂದ್ಯದಲ್ಲಿ ಕ್ರಮವಾಗಿ ಪಿ.ವಿ. ಸಿಂಧು ಮತ್ತು ಕಿರಣ್ ಜಾರ್ಜ್ ಸೋಲು ಕಂಡು ತಮ್ಮ ಅಭಿಯಾನ ಮುಗಿಸಿದ್ದರು.
ವಿದರ್ಭ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ
ವಡೋದರ: ಸ್ಮರಣ್ ರವಿಚಂದ್ರನ್(101) ಅವರ ಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿ ಸೆಣಸಾಟದಲ್ಲಿ ವಿದರ್ಭವನ್ನು 36 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಈ ಕೂಟದಲ್ಲಿ ಕರ್ನಾಟಕ್ಕೆ ಒಲಿದ 5ನೇ ಟ್ರೋಫಿಯಾಗಿದೆ. ಈ ಹಿಂದಿನ ನಾಲ್ಕೂ ಫೈನಲ್‌ನಲ್ಲಿಯೂ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ ಆರಂಭಿಕ ಆಘಾತದ ಹೊರತಾಗಿಯೂ 6 ವಿಕೆಟ್‌ಗೆ 348 ರನ್ ಪೇರಿಸಿ ಬೃಹತ್ ಮೊತ್ತದ ಸವಾಲೊಡ್ಡಿತು. ಜವಾಬಿತ್ತ ವಿದರ್ಭ ಒಂದು ಹಂತದ ವರೆಗೆ ದಿಟ್ಟ ಹೋರಾಟ ನಡೆಸಿದರೂ ಅಂತಿಮವಾಗಿ 48.2 ಓವರ್‌ಗಳಲ್ಲಿ 312 ರನ್‌ಗೆ ಸರ್ವಪತನ ಕಂಡಿತು.