ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಪ್ರಸಕ್ತ ವರ್ಷದಲ್ಲಿ ಭಾರತ vs ಪಾಕಿಸ್ತಾನ ನಡುವೆ ಇನ್ನೂ 3 ಪಂದ್ಯಗಳಿವೆ! ಹೇಗೆ ಗೊತ್ತೆ?

India vs Pakistan: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಪಾಕ್‌ ಎದುರು ಟೀಮ್‌ ಇಂಡಿಯಾ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆದರೆ, ಟೂರ್ನಿಯಲ್ಲಿ ತನ್ನ ಎರಡೂ ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಈ ವರ್ಷ ಭಾರತ ಹಾಗೂ ಪಾಕಿಸ್ತಾನ ನಡುವೆ ಇನ್ನೂ 3 ಪಂದ್ಯಗಳು ನಬಡೆಯಲಿವೆ ಎಂದು ವರದಿಯಾಗಿದೆ.

2025ರಲ್ಲಿ ಪಾಕಿಸ್ತಾನ ಎದುರು ಭಾರತಕ್ಕೆ ಇನ್ನೂ  3 ಪಂದ್ಯಗಳು ಬಾಕಿ ಇವೆ!

ಭಾರತ vs ಪಾಕಿಸ್ತಾನ

Profile Ramesh Kote Feb 27, 2025 7:37 PM

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತಬ ಹಾಗೂ ಪಾಕಿಸ್ತಾನ ತಂಡಗಳು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆದರೆ, ಪಾಕಿಸ್ತಾನ ತಂಡ ನಾಕ್‌ಔಟ್‌ನಿಂದ ಹೊರಬಿದ್ದಿರುವ ಕಾರಣ ಭಾರತ ತಂಡ, ಮತ್ತೊಮ್ಮೆ ಈ ಟೂರ್ನಿಯಲ್ಲಿ ಪಾಕ್‌ ಎದುರು ಆಡುವುದಿಲ್ಲ. ಆದರೆ, ಸಾಂಪ್ರದಾಯಿಕ ಎದುರಾಳಿಗಳು ಪ್ರಸಕ್ತ ವರ್ಷದಲ್ಲಿ ಇನ್ನೂ ಮೂರು ಪಂದ್ಯಗಳಲ್ಲಿ ಕಾದಾಡ ನಡೆಸಲಿವೆ ಎಂದು ವರದಿಯಾಗಿದೆ.

2026ರ ಆರಂಭದಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿಗೂ ಮುನ್ನ 2025ರಲ್ಲಿ ಟಿ20 ಸ್ವರೂಪದಲ್ಲಿ ಏಷ್ಯಾ ಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು ಮೂರು ಬಾರಿ ಕಾದಾಟ ನಡೆಸಲಿವೆ ಎಂದು ಕ್ರಿಕ್‌ಬಝ್‌ ತನ್ನ ವರದಿಯಲ್ಲಿ ತಿಳಿಸಿದೆ. ಅಂದಹಾಗೆ ಮುಂದಿನ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ.

2025ರ ಏಷ್ಯಾ ಕಪ್‌ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಭಾರತಕ್ಕೆ ನೀಡಲಾಗಿದೆ. ಆದರೆ ಕ್ರಿಕ್‌ಬಜ್‌ ವರದಿಯ ಪ್ರಕಾರ ಟೂರ್ನಿಯು ಸ್ವಾಭವಿಕ ದೇಶದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯ ಮೂರನೇ ದೇಶದಲ್ಲಿ(ಭಾರತ, ಪಾಕ್‌ ಹೊರತುಪಡಿಸಿ) ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಿರ್ಧರಿಸಿದೆ.

IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಆತಿಥ್ಯ ವಹಿಸುವ ರಾಷ್ಟ್ರ ಯಾವುದೆಂದು ಎಸಿಸಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಯುಎಇ ಹಾಗೂ ಬಾಂಗ್ಲಾದೇಶವನ್ನು ಜಂಟಿ ಆತಿಥ್ಯ ರಾಷ್ಟ್ರಗಳನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಆದರೆ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ(BCCI) ಏಷ್ಯಾ ಕಪ್‌ ಟೂರ್ನಿಯ ಆತಿಥ್ಯವನ್ನು ನೀಡಲಾಗಿದೆ. 2018ರಲ್ಲಿಯೂ ಭಾರತ ಏಷ್ಯಾ ಕಪ್‌ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಹೊಂದಿತ್ತು. ಆದರೆ, ಪಂದ್ಯಗಳನ್ನು ಯುಎಇನಲ್ಲಿ ನಡೆಸಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆ ಇದೆ. 1991 ರ ಬಳಿಕ ಭಾರತದಲ್ಲಿ ಇನ್ನೂ ಏಷ್ಯಾ ಕಪ್‌ ಟೂರ್ನಿಯನ್ನು ಆಯೋಜಿಸಲಾಗಿಲ್ಲ.

2023ರ ಏಷ್ಯಾ ಕಪ್‌ ಟೂರ್ನಿಯಲ್ಲಿಯೂ ಭಾರತ ತಂಡ, ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿತ್ತು. ಈ ವೇಳೆ ವಿವಾದ ಉಂಟಾಗಿತ್ತು. ಈ ಟೂರ್ನಿಯು ಪಾಕಿಸ್ತಾನದ ಆತಿಥ್ಯದಲ್ಲಿ ನಡೆದರೂ ಭಾರತ ತಂಡದ ಪಂದ್ಯಗಳು ಹೈಬ್ರಿಡ್‌ ಮಾದರಿಯಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ತಂಡದ ಪಂದ್ಯಗಳು ಪಲ್ಲೆಕೆಲೆ ಹಾಗೂ ಕೊಲಂಬೊದಲ್ಲಿ ನಡೆದಿದ್ದವು.

IND vs PAK: 20 ರನ್‌ಗೆ ಔಟಾದರೂ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

ಸೆಪ್ಟಂಬರ್‌ನಲ್ಲಿ ಏಷ್ಯಾ ಕಪ್‌ ಟೂರ್ನಿ ಆರಂಭ?

2025ರ ಏಷ್ಯಾ ಕಪ್‌ ಟೂರ್ನಯು ಸೆಪ್ಟಂಬರ್‌ ಎರಡು ಅಥವಾ ನಾಲ್ಕನೇ ವಾರದಲ್ಲಿ ಆರಂಭವಾಗಲಿದೆ ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಾರಿ ಭಾರತ, ಅಫ್ಘಾನಿಸ್ತಾನ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಒಮಾನ್‌, ಯುಎಇ ಹಾಗೂ ಹಾಂಕಾಂಗ್‌ ಸೇರಿ ಒಟ್ಟು ಎಂಟು ತಂಡಗಳು ಕಾದಾಟ ನಡೆಸಲಿವೆ. 2023ರ ಏಷ್ಯಾ ಕಪ್‌ ಟೂರ್ನಿಯನ್ನು ಆಡಿದ್ದ ನೇಪಾಳ ತಂಡ, ಇದೀಗ 2025ರ ಏಷ್ಯಾ ಕಪ್‌ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

ಈ ಟೂರ್ನಿಯಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಒಂದು ಗುಂಪಿನಲ್ಲಿ ನಾಲ್ಕು ತಂಡಗಳು ಕಾಣಿಸಿಕೊಳ್ಳಲಿವೆ. ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೂಪರ್‌ 4ಕ್ಕೆ ಅರ್ಹತೆ ಪಡೆಯಲಿವ. ಎರಡನೇ ಸುತ್ತಿನಲ್ಲಿ ನಾಲ್ಕೂ ತಂಡಗಳು ಮೂರು ತಂಡಗಳ ವಿರುದ್ಧ ಕಾದಾಟ ನಡೆಸಲಿವೆ. ಈ ಹಂತದಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ.