ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ ಮೂಲಕ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಬಲ್ಲ ಟಾಪ್‌ 5 ಆಟಗಾರರು!

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಲು ಹಲವು ಹಿರಿಯ ಆಟಗಾರರು ಎದುರು ನೋಡುತ್ತಿದ್ದಾರೆ. ಇದರ ನಡುವೆ ಭಾರತ ತಂಡಕ್ಕೆ ಚೊಚ್ಚಲ ಅವಕಾಶ ಪಡೆಯಲು ಕೂಡ ಯುವ ಆಟಗಾರರು ಕಣ್ಣಿಟ್ಟಿದ್ದಾರೆ.

IPL 2025: ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಬಲ್ಲ ಟಾಪ್‌ 5 ಆಟಗಾರರು!

ಅಜಿಂಕ್ಯಾ ರಹಾನೆ, ನಟರಾಜನ್‌, ಇಶಾನ್‌ ಕಿಶನ್‌

Profile Ramesh Kote Mar 17, 2025 7:01 PM

ನವದೆಹಲಿ: ಐಪಿಎಲ್‌ (IPL 2025) ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಕೆಲ ಯುವ ಆಟಗಾರರು ಭಾರತ (India) ತಂಡಕ್ಕೆ ಪ್ರವೇಶ ಮಾಡಿದ್ದಾರೆ. ಕೆಲವು ಅನುಭವಿ ಆಟಗಾರರು ಕೂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ ಹಲವು ಉದಾಹರಣೆಗಳು ಕೂಡ ನಮ್ಮ ಕಣ್ಣಿನಲ್ಲಿವೆ. 2025ರ ಐಪಿಎಲ್‌ ಟೂರ್ನಿಯು ಮಾರ್ಚ್‌ 22 ರಂದು ಆರಂಭವಾಗಲಿದೆ. ಈ ಮಹತ್ವದ ಟೂರ್ನಿಯಲ್ಲಿ ಮಿಂಚಲು ಎಲ್ಲಾ 10 ತಂಡಗಳ ಆಟಗಾರರು ಎದುರು ನೋಡುತ್ತಿದ್ದಾರೆ. ಇದರ ನಡುವೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಕೆಲವು ಆಟಗಾರರು ಕೂಡ ಹದಿನೆಂಟನೇ ಆವೃತ್ತಿಯಯಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ತಂಡಕ್ಕೆ ಮರಳಲು ಕಾಯುತ್ತಿದ್ದಾರೆ. ಯುವ ಆಟಗಾರರಿಗೆ ಮಾತ್ರವಲ್ಲ, ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಕೆಲ ಹಿರಿಯ ಆಟಗಾರರು ಕೂಡ ಕಣ್ಣಿಟ್ಟಿದ್ದಾರೆ.

ಐಪಿಎಲ್‌ ಟೂರ್ನಿ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್‌ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಟೆಸ್ಟ್‌ ಸರಣಿಯ ಜೊತೆಗೆ ಸೀಮಿತ ಓವರ್‌ಗಳ ಸರಣಿಗಳನ್ನು ಆಡಲಿದೆ. ಅಲ್ಲದೆ ಈ ವರ್ಷದ ಕೊನೆಯಲ್ಲಿ ಏಷ್ಯಾ ಕಪ್‌ ಟಿ20 ಸ್ವರೂಪದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ಹಲವು ಆಟಗಾರರು ಎದುರು ನೋಡುತ್ತಿದ್ದಾರೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಫಾಫ್‌ ಡು ಪ್ಲೆಸಿಸ್‌ ಉಪ ನಾಯಕನಾಗಿ ನೇಮಕ!

ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿರುವ ಟಾಪ್‌ 5 ಆಟಗಾರರು

1.ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ 2025ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ನಾಯಕರಾಗಿದ್ದಾರೆ. ಈ ಆವೃತ್ತಿಯ ಅವರಿಗೆ ಬಹಳ ಮುಖ್ಯವಾಗಿದೆ. ರಹಾನೆ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರೆ, ಅವರನ್ನು ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಬಹುದು. ಇದಕ್ಕೂ ಮೊದಲು, ಅವರು 2023 ರ ಋತುವಿನಲ್ಲೂ ಇದೇ ರೀತಿ ಆಟವನ್ನು ಆಡಿದ್ದರು. 2023ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಂತರ ರಹಾನೆ ಭಾರತದ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದರು.

2.ಟಿ ನಟರಾಜನ್‌

ಭಾರತದ ವೇಗಿ ಟಿ ನಟರಾಜನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಈ ಋತುವಿನಲ್ಲಿ ನಟರಾಜನ್ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ತೋರಿದರೆ ಟೀಮ್ ಇಂಡಿಯಾಗೆ ಮರಳಬಹುದು. ಅವರನ್ನು 2021ರಲ್ಲಿ ಭಾರತ ತಂಡದಿಂದ ಕೈ ಬಿಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.

IPL 2025: ಎಂಎಸ್‌ ಧೋನಿ ಅಲ್ಲ! ತಮ್ಮ ನೆಚ್ಚಿನ ನಾಯಕನನ್ನು ಹೆಸರಿಸಿದ ಶಶಾಂಕ್‌ ಸಿಂಗ್‌!

3. ಯುಜ್ವೇಂದ್ರ ಚಹಲ್‌

ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ 2023 ರಿಂದ ಭಾರತದ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಅವರನ್ನು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಖರೀದಿಸಿತು. ಯುಜ್ವೇಂದ್ರ ಚಹಲ್ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್‌ ಇಂಡಿಯಾದ ಬ್ಲೂ ಜೆರ್ಸಿಯನ್ನು ಮತ್ತೆ ಧರಿಸಲು ಬಯಸುತ್ತಿದ್ದಾರೆ.

4. ಇಶಾನ್‌ ಕಿಶನ್‌

ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರಿಗೂ 2025ರ ಐಪಿಎಲ್ ಟೂರ್ನಿಯು ಅಂತ್ಯಂತ ಮುಖ್ಯವಾಗಿದೆ. ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇಶಾನ್‌ ಕಿಶನ್ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕೆ ಇಳಿಯಲು ಎದುರು ನೋಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಟೀಮ್‌ ಇಂಡಿಯಾಗೆ ಮರಳುವ ನಿರೀಕ್ಷೆಯನ್ನು ಇಶಾನ್‌ ಕಿಶನ್‌ ಹೊಂದಿದ್ದಾರೆ.

IPL 2025: ಉಮ್ರಾನ್‌ ಮಲಿಕ್‌ ಸ್ಥಾನಕ್ಕೆ ಚೇತನ್‌ ಸಕಾರಿಯ ಬದಲಿ ಆಟಗಾರ

5. ದೀಪಕ್‌ ಚಹರ್‌

ಮಧ್ಯಮ ವೇಗಿ ದೀಪಕ್ ಚಹರ್ ಕೂಡ ದೀರ್ಘಾವಧಿಯಿಂದ ಭಾರತ ತಂಡದಿಂದ ದೂರ ಉಳಿದಿದ್ದಾರೆ. ಅವರಿಗೆ ಭಾರತ ತಂಡದಲ್ಲೂ ಅವಕಾಶ ಸಿಗುತ್ತಿಲ್ಲ. ಆದರೆ ಚಹರ್‌ಗೆ 2025ರ ಐಪಿಎಲ್ ಟೂರ್ನಿಯಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಉತ್ತಮ ಅವಕಾಶವಿದೆ. ದೀಪಕ್ ಚಹರ್ 2025ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.