ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಕಟ್ಟಿದ ಗಿಲ್‌ಕ್ರಿಸ್ಟ್!

Adam Gilchrist picks all-time IPL XI: ಆಸ್ಟ್ರೇಲಿಯಾ ಮಾಜಿ ವಿಕೆಟ್‌ ಕೀಪರ್‌ ಆಡಂ ಗಿಲ್‌ಕ್ರಿಸ್ಟ್, ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಪ್ಲೇಯಿಂಗ್ ‌XI ಅನ್ನು ಪ್ರಕಟಿಸಿದ್ದಾರೆ. ಆದರೆ, ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿರುವ ವಿರಾಟ್‌ ಕೊಹ್ಲಿಯನ್ನು ಕೈ ಬಿಡುವ ಮೂಲಕ ಆಸೀಸ್‌ ಮಾಜಿ ಆಟಗಾರ ಅಚ್ಚರಿ ಮೂಡಿಸಿದ್ದಾರೆ.

ಗಿಲ್‌ಕ್ರಿಸ್ಟ್‌ ಕಟ್ಟಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ಪ್ಲೇಯಿಂಗ್‌ XI

ಐಪಿಎಲ್‌ ಟೂರ್ನಿಯ ಸಾರ್ವಕಾಲಿಕ ಶ್ರೇಷ್ಠ ತಂಡ ಕಟ್ಟಿದ ಆಡಂ ಗಿಲ್‌ಕ್ರಿಸ್ಟ್‌.

Profile Ramesh Kote May 17, 2025 6:55 PM

ನವದೆಹಲಿ: ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ಆಡಂ ಗಿಲ್ ಕ್ರಿಸ್ಟ್ (Adam Gilchrist) ಇಂಡಿಯನ್ ಪ್ರೀಮಿಯರ್ ಲೀಗ್ (Indian Premier league) ಟೂರ್ನಿಯ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡಿದ್ದಾರೆ. ಐದು ಬಾರಿ ಚಾಂಪಿಯನ್ ನಾಯಕ ಎಂಎಸ್‌ ಧೋನಿ (MS Dhoni)ಗೆ ತಮ್ಮ ತಂಡದ ನಾಯಕತ್ವವನ್ನು ನೀಡಿದ್ದಾರೆ. ಆದರೆ, ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿಯನ್ನು ಡೆಕನ್‌ ಚಾರ್ಜರ್ಸ್‌ ಮಾಜಿ ನಾಯಕ ಕಡೆಗಣಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಡಂ ಗಿಲ್‌ಕ್ರಿಸ್ಟ್‌ ಅವರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಮ್ಮ ನಾಯಕತ್ವದಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದುಕೊಟ್ಟಿರುವ ಕ್ಯಾಪ್ಟನ್ ಕೂಲ್ ಎಂಎಸ್‌ ಧೋನಿ ಅವರು ಗಿಲ್‌ಕ್ರಿಸ್ಟ್ ಕಟ್ಟಿರುವ ಐಪಿಎಲ್ ಸಾರ್ವಕಾಲಿಕ ಶ್ರೇಷ್ಠ ತಂಡದ ನಾಯಕರಾಗಿದ್ದಾರೆ. ಸಿಎಸ್‌ಕೆ ಯಶಸ್ಸಿನಲ್ಲಿ ಸಿಂಹಪಾಲು ಹೊಂದಿರುವ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾಗೂ ಸ್ಥಾನ ಸಿಕ್ಕಿದೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ vs ಗುಜರಾತ್‌ ಟೈಟನ್ಸ್‌ ನಡುವೆ ಹೈವೋಲ್ಟೇಜ್‌ ಕದನ!

ರೋಹಿತ್ ಶರ್ಮಾಗೂ ಸ್ಥಾನ

ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿರುವ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಗಿಲ್‌ಕ್ರಿಸ್ಟ್ ಕಟ್ಟಿರುವ ಬಲಿಷ್ಠ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಟಿ20 ಸ್ಪೆಷಲಿಸ್ಟ್ಗಳಾದ ಸೂರ್ಯಕುಮಾರ್ ಯಾದವ್, ಕೈರೊನ್ ಪೊಲಾರ್ಡ್, ಯಾರ್ಕರ್ ಸ್ಪೆಷಲಿಸ್ಟ್‌ಗಳಾದ ಲಸಿತ್ ಮಾಲಿಂಗ ಹಾಗೂ ಜಸ್‌ಪ್ರೀತ್ ಬುಮ್ರಾ ಪ್ಲೇಯಿಂಗ್ ಇಲೆವೆನ್‌ನಲ್ಲಿದ್ದಾರೆ.

ಡೇವಿಡ್ ವಾರ್ನರ್‌ಗೆ ಆರಂಭಿಕ ಸ್ಥಾನ

2016ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮ್ಮ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿದ್ದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್‌ಗೆ ಆರಂಭಿಕ ಸ್ಥಾನ ನೀಡಿದ್ದರೆ, 2012, 2014 ಹಾಗೂ 2024ರಲ್ಲಿ ತಮ್ಮ ಸ್ಪಿನ್ ಮೋಡಿ ಹಾಗೂ ವಿಧ್ವಂಸಕ ಬ್ಯಾಟಿಂಗ್‌ನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಗೆದ್ದು ಕೊಟ್ಟಿರುವ ಸುನೀಲ್ ನರೇನ್ ಹಾಗೂ 2016ರಲ್ಲಿ ಎಸ್‌ಆರ್‌ಎಚ್ ತಂಡದ ವೇಗದ ವಿಭಾಗವನ್ನು ಬಲಪಡಿಸಿದ್ದ ಭುವನೇಶ್ವರ್ ಕುಮಾರ್‌ಗೆ ಸ್ಥಾನ ನೀಡುವ ಮೂಲಕ ಗಿಲ್‌ಕ್ರಿಸ್ಟ್ ಐಪಿಎಲ್ ಟೂರ್ನಿಯ ಸರ್ವಶ್ರೇಷ್ಠ ತಂಡವನ್ನು ಪೂರ್ಣಗೊಳಿಸಿದ್ದಾರೆ.

IPL 2025: ಆರ್‌ಸಿಬಿಗೆ ಇನ್ನು ಗೆಲುವು ಬೇಕು? 7 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

ಆದರೆ ಐಪಿಎಲ್ ಟೂರ್ನಿಯಲ್ಲಿ 255 ಇನಿಂಗ್ಸ್‌ಗಳಲ್ಲಿ 8509 ರನ್ ಗಳಿಸಿ ಲೀಡಿಂಗ್ ಸ್ಕೋರರ್ ಆಗಿರುವ ವಿರಾಟ್ ಕೊಹ್ಲಿಯನ್ನು ಒಂದೇ ಒಂದು ಟ್ರೋಫಿ ಗೆಲ್ಲದ ಕಾರಣ ಆಡಂ ಗಿಲ್‌ಕ್ರಿಸ್ಟ್ ತಮ್ಮ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟಿದ್ದಾರೆ.

ಆಡಂ ಗಿಲ್‌ಕ್ರಿಸ್ಟ್‌ ಅವರ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ

ಎಂಎಸ್‌ ಧೋನಿ (ನಾಯಕ, ವಿಕೆಟ್ ಕೀಪರ್), ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ಸುರೇಶ್ ರೈನಾ, ಸೂರ್ಯಕುಮಾರ್ ಯಾದವ್, ಕೈರೊನ್ ಪೊಲಾರ್ಡ್, ಸುನೀಲ್ ನರೇನ್, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ ಹಾಗೂ ಭುವನೇಶ್ವರ್ ಕುಮಾರ್