ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud Case: ಚಾಮರಾಜನಗರ: ಉದ್ಯಮಿಗೆ 3.70 ಲಕ್ಷ ರೂ. ವಂಚಿಸಿ ಪೊಲೀಸರೇ ನಾಪತ್ತೆ!

Chamarajanagara news: ಸುಲಿಗೆಕೋರ ವಂಚಕರು ಹಾಗೂ ಧನದಾಹಿ ಪೊಲೀಸರು ಸೇರಿಕೊಂಡು ನಡೆಸಿದ ವಂಚನೆಯ ಕಥೆ ಇದು. ತಮಿಳುನಾಡು ಮೂಲದ ಉದ್ಯಮಿಯನ್ನು ಇವರೆಲ್ಲ ಸೇರಿಕೊಂಡು ಬೆದರಿಸಿ 3.70 ಲಕ್ಷ ರೂ. ಹಣ ದೋಚಿದ್ದಾರೆ. ಇದೀಗ ಪಿಎಸ್‌ಐ ಮತ್ತು ಪೇದೆಗಳು ಪರಾರಿಯಾಗಿದ್ದಾರೆ.

ಚಾಮರಾಜನಗರ: ಉದ್ಯಮಿಗೆ 3.70 ಲಕ್ಷ ರೂ. ವಂಚಿಸಿ ಪೊಲೀಸರೇ ನಾಪತ್ತೆ!

ಪಿಎಸ್‌ಐ ಅಯ್ಯನಗೌಡ

ಹರೀಶ್‌ ಕೇರ ಹರೀಶ್‌ ಕೇರ Jul 29, 2025 1:15 PM

ಚಾಮರಾಜನಗರ: ಇಲ್ಲಿನ (Chamarajanagar) ಸೈಬರ್ ಕ್ರೈಂ (Cyber crime) ಠಾಣೆಯ ಪಿಎಸ್ಐ ಹಾಗೂ ಟೀಂ ಸೇರಿ ಹಣ ಡಬ್ಬಲ್‌ (Money double) ಮಾಡುವುದಾಗಿ ತಮಿಳುನಾಡು ಉದ್ಯಮಿಯೊಬ್ಬರಿಗೆ 3.70 ಲಕ್ಷ ರೂ. ವಂಚಿಸಿ (Fraud Case) ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದಾರೆ. ಚಾಮರಾಜನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯನಗೌಡ, ಅದೇ ಠಾಣೆಯ ಕಾನ್ಸ್‌ಟೇಬಲ್‌ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಕಾನ್ಸ್‌ಟೇಬಲ್ ಬಸವಣ್ಣರ ಮೇಲೆ ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

ವಂಚನೆ ಮಾಹಿತಿ ಖಚಿತವಾಗುತ್ತಿದ್ದಂತೆ ಎಸ್‌ಪಿ ಡಾ.ಬಿ.ಟಿ ಕವಿತಾ ಅವರು ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಾರೆ. ನಾಲ್ಕು ಮಂದಿ ಆರೋಪಿಗಳು ಈಗ ತಲೆ ಮರೆಸಿಕೊಂಡಿದ್ದಾರೆ.

ಜು.26 ರಂದು ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿಗೆ ಕರೆ ಮಾಡಿ, ಸೈಯದ್ ಅನ್ಸಾರಿ ಹಾಗೂ ಇಮ್ರಾನ್ 3 ಲಕ್ಷ ರೂ. ತನ್ನಿ, ಆ ಹಣವನ್ನು ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡ್ತೀವಿ ಎಂದು ನಂಬಿಸಿದ್ದಾರೆ. ಈ ವಿಚಾರ ನಂಬಿ ಉದ್ಯಮಿ ಚಾಮರಾಜನಗರದ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಮೊದಲೇ ಪಕ್ಕಾ ಪ್ಲ್ಯಾನ್ ಮಾಡಿದ ರೀತಿ ಅನ್ಸಾರಿ ಹಾಗೂ ಸೈಯದ್ ಸಿಇಎನ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಯ್ಯನ ಗೌಡಗೆ ವಿಷಯ ತಿಳಿಸುತ್ತಾರೆ. ತಕ್ಷಣವೇ ಅಯ್ಯನಗೌಡ ಮೂರು ಜನ ಕಾನ್ಸ್‌ಟೇಬಲ್ ಜೊತೆ ಸೇರಿ ಹೋಟೆಲ್ ಮೇಲೆ ದಾಳಿ ಮಾಡಿ ಧಮಕಿ ಹಾಕಿ, ಕೇಸ್ ರಿಜಿಸ್ಟರ್ ಆಗಬಾರದು ಅಂದ್ರೆ 4 ಲಕ್ಷ ರೂ. ಕೊಡಿ ಎಂದು ಬೆದರಿಸಿದ್ದಾರೆ. ಬಳಿಕ ಉದ್ಯಮಿ ಬಳಿಯಿದ್ದ 3 ಲಕ್ಷ ಹಣ ಕಸಿದುಕೊಂಡು, 70 ಸಾವಿರ ರೂ. ಹಣವನ್ನು ಫೋನ್ ಪೇ ಮೂಲಕ ಅನ್ಸಾರಿ ಎಂಬ ಮತ್ತೊಬ್ಬ ಆರೋಪಿಯ ಖಾತೆಗೆ ಹಾಕಿಸಿ ಕೊಂಡಿದ್ದರು.

ಉದ್ಯಮಿ ಸಚ್ಚಿದಾನಂದ ಸೀದಾ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್ ಬಂಧನ ಆಗುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಬಸವಣ್ಣ, ರಮೇಶ್ ಹಾಗೂ ಮೋಹನ್ ಈಗ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: Bagalkot Accident: ಬಾಗಲಕೋಟೆಯಲ್ಲಿ ಕಾರಿನ ಮೇಲೆ ಲಾರಿ ಬಿದ್ದು ಸ್ಥಳದಲ್ಲೇ ಇಬ್ಬರ ಸಾವು