IPL 2025: ಮ್ಯಾಥ್ಯೂ ವೇಡ್ ಗುಜರಾತ್ ತಂಡಕ್ಕೆ ಸಹಾಯಕ ಕೋಚ್
Matthew Wade: ಒಟ್ಟಾರೆಯಾಗಿ, ವೇಡ್ ಐಪಿಎಲ್‌ನಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. 13.07 ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ. 2011 ರಲ್ಲಿ, ಎಡಗೈ ಬ್ಯಾಟ್ಸ್‌ಮನ್ ಈಗ ಕ್ಯಾಪಿಟಲ್ಸ್ ಆಗಿರುವ ಡೆಲ್ಲಿ ಡೇರ್‌ಡೆವಿಲ್ಸ್ ಪರವೂ ಆಡಿದ್ದರು. ಇದಾದ ಬಳಿಕ ಅವರು ಐಪಿಎಲ್‌ಗೆ ಮರಳಲು 11 ವರ್ಷ ಕಾಯಬೇಕಾಯಿತು.


ಅಹಮದಾಬಾದ್: ಗುಜರಾತ್ ಟೈಟಾನ್ಸ್(Gujarat Titans) ತಂಡವು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್(Matthew Wade) ಅವರನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ನಲ್ಲಿ ತಂಡದ ಸಹಾಯಕ ಕೋಚ್ ಆಗಿ ನೇಮಿಸಿದೆ. ವೇಡ್ 2022 ಮತ್ತು 2024 ರಲ್ಲಿ ಟೈಟಾನ್ಸ್ ಪರ ಎರಡು ಸೀಸನ್‌ಗಳನ್ನು ಆಡಿದರು. 12 ಪಂದ್ಯಗಳಿಂದ 159 ರನ್ ಗಳಿಸಿದ್ದರು. ಕಳೆದ ವರ್ಷ, ವೇಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆನಿವೃತ್ತಿ ಘೋಷಿಸಿದ್ದರು. ಕಳೆದ ವರ್ಷ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿಯೂ ಹೆಸರು ನೊಂದಾಯಿಸಿರಲಿಲ್ಲ.
"ಚಾಂಪಿಯನ್, ಫೈಟರ್ ಈಗ ನಮ್ಮ ಸಹಾಯಕ ಕೋಚ್! ಗುಜರಾತ್ ಟೈಟಾನ್ಸ್ ಡಗೌಟ್‌ಗೆ ಮತ್ತೆ ಸ್ವಾಗತ, ಮ್ಯಾಥ್ಯೂ ವೇಡ್!" ಎಂದು ಟೈಟಾನ್ಸ್ ಫ್ರಾಂಚೈಸಿ ವೇಡ್ ಅವರನ್ನು ಸ್ವಾಗತಿಸಿದೆ. ವೇಡ್ ಅವರು ಬ್ಯಾಟಿಂಗ್ ಕೋಚ್ ಪಾರ್ಥಿವ್ ಪಟೇಲ್, ಮುಖ್ಯ ಕೋಚ್ ಆಶಿಶ್ ನೆಹ್ರಾ ಮತ್ತು ಸಹಾಯಕ ಕೋಚ್‌ಗಳಾದ ಆಶಿಶ್ ಕಪೂರ್ ಮತ್ತು ನರೇಂದ್ರ ನೇಗಿ ಅವರೊಂದಿಗೆ ಈ ಬಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ವೇಡ್ ಭಾರತಕ್ಕೆ ಆಗಮಿಸಿದ್ದು ಗುಜರಾತ್ ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಆರಂಭಗೊಳ್ಳಲಿದೆ. ಗುಜರಾತ್ ತಂಡ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
Champion. Fighter. Now our Assistant Coach! 🙌
— Gujarat Titans (@gujarat_titans) March 8, 2025
Welcome back to the GT Dugout, Matthew Wade! 🤗#AavaDe | #TATAIPL2025 pic.twitter.com/SFKBEKgdD0
ಇದನ್ನೂ ಓದಿ IPL 2025: 2 ವಾರ ಐಪಿಎಲ್‌ಗೆ ಜಸ್‌ಪ್ರೀತ್ ಬುಮ್ರಾ ಅಲಭ್ಯ!
ಒಟ್ಟಾರೆಯಾಗಿ, ವೇಡ್ ಐಪಿಎಲ್‌ನಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. 13.07 ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ. 2011 ರಲ್ಲಿ, ಎಡಗೈ ಬ್ಯಾಟ್ಸ್‌ಮನ್ ಈಗ ಕ್ಯಾಪಿಟಲ್ಸ್ ಆಗಿರುವ ಡೆಲ್ಲಿ ಡೇರ್‌ಡೆವಿಲ್ಸ್ ಪರವೂ ಆಡಿದ್ದರು. ಇದಾದ ಬಳಿಕ ಅವರು ಐಪಿಎಲ್‌ಗೆ ಮರಳಲು 11 ವರ್ಷ ಕಾಯಬೇಕಾಯಿತು.
ಗುಜರಾತ್ ಟೈಟಾನ್ಸ್
ರಶೀದ್ ಖಾನ್, ಶುಭಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ಕಗಿಸೊ ರಬಾಡ, ಜಾಸ್ ಬಟ್ಲರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ನಿಶಾಂತ್ ಸಿಂಧು, ಮಹಿಪಾಲ್ ಲೊಮ್ರೋರ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಮಾನವ್ ಸುತಾರ್, ವಾಷಿಂಗ್ಟನ್ ಸುಂದರ್, ಜೆರಾಲ್ಡ್ ಕೋಟ್ಜಿ, ಅರ್ಷದ್ ಖಾನ್, ಗುರ್ನೂರ್ ಬ್ರಾರ್, ಶೆರ್ಫೇನ್ ರುದರ್ಫೋರ್ಡ್, ಆರ್ ಸಾಯಿ ಕಿಶೋರ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಗ್ಲೆನ್ ಫಿಲಿಪ್ಸ್, ಕರೀಂ ಜನತ್, ಕುಲ್ವಂತ್ ಖೆಜ್ರೋಲಿಯಾ.