RCB vs RR: ಜೋಫ್ರಾ ಆರ್ಚರ್‌ಗೆ ಕೌಂಟರ್ ಕೊಟ್ಟಿದ್ದೇಗೆಂದು ತಿಳಿಸಿದ ಫಿಲ್ ಸಾಲ್ಟ್!
Phil salt on Jofra Archer: ರಾಜಸ್ಥಾನ್ ರಾಯಲ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಫಿಲ್ ಸಾಲ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 9 ವಿಕೆಟ್ ಗೆಲುವಿಗೆ ನೆರವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಸವಾಲನ್ನು ಮೆಟ್ಟಿ ನಿಂತಿದ್ದೇಗೆಂದು ಫಿಲ್ ಸಾಲ್ಟ್ ಬಹಿರಂಗಪಡಿಸಿದ್ದಾರೆ.

ಜೋಫ್ರಾ ಆರ್ಚರ್ ಸವಾಲು ಗೆದ್ದಿದ್ದೇಗೆಂದು ತಿಳಿಸಿದ ಫಿಲ್ ಸಾಲ್ಟ್.

ಜೈಪುರ: ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 28ನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ಫಿಲ್ ಸಾಲ್ಟ್ (Phil Salt) ಅರ್ಧಶತಕ ಸಿಡಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ 9 ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿಗೆ ಜೋಫ್ರಾ ಆರ್ಚರ್ ಭೀತಿ ಇತ್ತು. ಆದರೆ, ಫಿಲ್ ಸಾಲ್ಟ್ ಹೊಸ ಚೆಂಡಿನಲ್ಲಿ ಜೋಫ್ರಾ ಆರ್ಚರ್ ಅವರನ್ನು ಸಮರ್ಥವಾಗಿ ಎದುರಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ಫಿಲ್ ಸಾಲ್ಟ್, ಜೋಫ್ರಾ ಆರ್ಚರ್ ಅವರನ್ನು ಮೆಟ್ಟಿ ನಿಂತಿದ್ದೇಗೆಂದು ವಿವರಿಸಿದ್ದಾರೆ. ಅಲ್ಲದೆ ಆರ್‌ಸಿಬಿ ಗೆಲುವಿಗೆ ನೆರವು ನೀಡಿರುವುದರಿಂದ ಸಂತಸವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಫಿಲ್ ಸಾಲ್ಟ್, "ಆರ್‌ಸಿಬಿ ತಂಡದ ಗೆಲುವಿಗೆ ನೆರವು ನೀಡಿರುವುದರಿಂದ ತುಂಬಾ ಖುಷಿಯಾಗುತ್ತಿದೆ. ಇಲ್ಲಿನ ಕ್ರೀಡಾಂಗಣ ಸ್ವಲ್ಪ ವಿಭಿನ್ನವಾಗಿದೆ. ಈ ಅಂಗಣದಲ್ಲಿ ತಂಡವನ್ನು ಗೆಲ್ಲಿಸಿದ್ದರಿಂದ ನನ್ನಲ್ಲಿ ಸಂತಸ ಉಂಟಾಗಿದೆ," ಎಂದು ಹೇಳಿದ್ದಾರೆ.
RCB vs RR: ಪಿಂಕ್ ಸಿಟಿಯಲ್ಲಿ ರಾಜಸ್ಥಾನ್‌ಗೆ ಸೋಲಿನ ಬರೆ ಎಳೆದ ಆರ್‌ಸಿಬಿ!
ಜೋಫ್ರಾ ಆರ್ಚರ್ ಸವಾಲಿನ ಬಗ್ಗೆ ಮಾತನಾಡಿ,"ನಾನು ಆರಂಭದಲ್ಲಿಯೇ ಅವರಿಗೆ ಅವಕಾಶ ಕೊಟ್ಟಿದ್ದೆ, ಆರಂಭದಲ್ಲಿ ನಾನು ಆಫ್ ಸೈಡ್ ಹೊಡೆಯಲು ಪ್ರಯತ್ನಿಸಿದ್ದೆ ಆದರೆ, ಅವರು ಚೆಂಡನ್ನು ಸ್ವಿಂಗ್ ಮಾಡುತ್ತಿದ್ದರು. ಮೈದಾನದ ಒಂದು ಕಡೆ ಮಾತ್ರ ನಾನು ಚೆಂಡನ್ನು ಹೊಡೆಯಬಹುದು ಎಂಬ ಅಂಶ ತಡವಾಗಿ ನನಗೆ ಅರ್ಥವಾಯಿತು. ನೆಟ್ಸ್‌ನಲ್ಲಿ ನಾನು ಮತ್ತು ಜೋಫ್ರಾ ಆರ್ಚರ್ ಸಾಕಷ್ಟು ಪೈಪೋಟಿ ನಡೆಸಿದ್ದೇವೆ. ನೆಟ್ಸ್‌ನಲ್ಲಿ ಅವರು ನನಗೆ ಬೌಲ್ ಮಾಡಿದ್ದಷ್ಟು ಬೇರೆ ಯಾರೂ ಮಾಡಿಲ್ಲ ಹಾಗೂ ಅವರನ್ನು ಎದುರಿಸಿದ್ದಷ್ಟು ಬೇರೆ ಯಾರನ್ನು ಎದುರಿಸಿಲ್ಲ. ಅವರು ಎದುರು ಚೆನ್ನಾಗಿ ಆಡಿದ್ದರಿಂದ ಖುಷಿಯಾಗಿದೆ," ಎಂದು ತಿಳಿಸಿದ್ದಾರೆ.
"ಇಲ್ಲಿನ ವಿಕೆಟ್ ಸ್ವಲ್ಪ ನಿಧಾನಗತಿಯಿಂದ ಕೂಡಿತ್ತು ಹಾಗೂ ಬೇರೆ ಕ್ರೀಡಾಂಗಣಗಳಿಗಿಂತ ಇಲ್ಲಿ ಚೆಂಡು ಕೆಳಗಡೆ ಬರುತ್ತಿತ್ತು. ದೊಡ್ಡ ಮೊತ್ತವನ್ನು ಕಡೆ ಹಾಕಲು ನನಗೆ ಪವರ್‌ಪ್ಲೇನಲ್ಲಿ ಅತ್ಯುತ್ತಮ ಅವಕಾಶ ಸಿಕ್ಕಿತ್ತು. ರಾಜಸ್ಥಾನ್ ರಾಯಲ್ಸ್ ಕೂಡ ಚೆನ್ನಾಗಿ ಆಡಿತ್ತು. ನಮ್ಮ ಬೌಲರ್‌ಗಳ ಖಚಿತವಾಗಿ ಇಲ್ಲಿ ಅದ್ಭುತ ಯೋಜನೆಗಳನ್ನು ಹಾಕಿಕೊಂಡಿದ್ದರು. ಆರ್‌ಆರ್ ಕೂಡ ಉತ್ತಮ ಮೊತ್ತವನ್ನು ಕಲೆ ಹಾಕಿತ್ತು. ಆದರೆ, ಬ್ಯಾಟಿಂಗ್‌ನಲ್ಲಿ ನಮಗೆ ಇಲ್ಲಿ ತುಂಬಾ ಚೆನ್ನಾಗಿ ವರ್ಕ್‌ಔಟ್ ಆಯಿತು," ಎಂದು ಫಿಲ್ ಸಾಲ್ಟ್ ತಿಳಿಸಿದ್ದಾರೆ.
We've scored well above the required rate so far, and we’ve got 10 wickets in hand 😬
— Royal Challengers Bengaluru (@RCBTweets) April 13, 2025
More of the same, please! 🫡#PlayBold #ನಮ್ಮRCB #IPL2025 #RRvRCB pic.twitter.com/8CSDQll3NX
173 ರನ್ ಕಲೆ ಹಾಕಿದ್ದ ರಾಜಸ್ಥಾನ್
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಮಿಂಚಿದ್ದು ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್. ಸಂಜು ಸ್ಯಾಮ್ಸನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ದೀರ್ಘಾವಧಿ ಬ್ಯಾಟ್ ಮಾಡಿದ್ದ ಯಶಸ್ವಿ ಜೈಸ್ವಾಲ್ 75 ರನ್‌ಗಳನ್ನು ಗಳಿಸಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದ್ದರು. ನಂತರ ರಿಯಾನ್ ಪರಾಗ್ 30 ರನ್ ಹಾಗೂ ಧ್ರುವ್ ಜುರೆಲ್ 35 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳಲ್ಲಿ ಆರ್‌ಆರ್ 173 ರನ್‌ಗಳನ್ನು ದಾಖಲಿಸಿತ್ತು. ಆ ಮೂಲಕ ಆರ್‌ಸಿಬಿಗೆ 174 ರನ್‌ಗಳ ಗುರಿಯನ್ನು ನೀಡಿತ್ತು.
RCB vs RR: 100 ಟಿ20 ಅರ್ಧಶತಕಗಳನ್ನು ಸಿಡಿಸಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ!
ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ
ಬಳಿಕ 174 ರನ್‌ಗಳ ಗುರಿ ಹಿಂಬಾಲಿಸಿದ್ದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಿದ್ದರು ಹಾಗೂ ತಂಡಕ್ಕೆ ಆಕ್ರಮಣಕಾರಿ ಆರಂಭವನ್ನು ತಂದುಕೊಟ್ಟಿದ್ದರು. ವಿರಾಟ್ ಕೊಹ್ಲಿ ಸ್ಟ್ರೈಕ್ ರೊಟೇಟ್ ಮಾಡುವ ಮೂಲಕ ಫಿಲ್ ಸಾಲ್ಟ್‌ಗೆ ಅವಕಾಶ ಮಾಡಿಕೊಡುತ್ತಿದ್ದರು. ಪವರ್‌ಪ್ಲೇನಲ್ಲಿ ಆರ್‌ಸಿಬಿ ವಿಕೆಟ್ ನಷ್ಟವಿಲ್ಲದೆ 65 ರನ್ ಗಳಿಸಿತ್ತು ಹಾಗೂ ಮೊದಲನೇ ವಿಕೆಟ್‌ಗೆ ಈ ಜೋಡಿ 92 ರನ್‌ಗಳನ್ನು ಜೊತೆಯಾಟವನ್ನು ಆಡಿತ್ತು. ಫಿಲ್ ಸಾಲ್ಟ್ 65 ರನ್, ವಿರಾಟ್ ಕೊಹ್ಲಿ 62 ರನ್ ಹಾಗೂ ದೇವದತ್ ಪಡಿಕ್ಕಲ್ ಅಜೇಯ 40 ರನ್ ಗಳಿಸಿ ಆರ್‌ಸಿಬಿಯನ್ನು ಗೆಲ್ಲಿಸಿದ್ದರು. ಅಂತಿಮವಾಗಿ ಆರ್‌ಸಿಬಿ 17.3 ಓವರ್‌ಗಳಿಗೆ 175 ರನ್ ಗಳಿಸಿ 9 ವಿಕೆಟ್ ಗೆಲುವು ಪಡೆಯಿತು.